ಅನ್ನಕ್ಕೆ ರೈತ ಜ್ಞಾನಕ್ಕೆ ಶಿಕ್ಷಕ ಮುಖ್ಯ :  ರಂಭಾಪುರಿ ಶ್ರೀ

ಸಂಜೆವಾಣಿ ವಾರ್ತೆ

ಹರಿಹರ. ಜು.೨; ಸುಖಮಯವಾಗಿ ಬದುಕಿ ಬಾಳಲು ರೈತ ಮತ್ತು ಶಿಕ್ಷಕರ ಪಾತ್ರ ಬಹು ಅಮೂಲ್ಯ. ಹಸಿವು ಹಿಂಗಿಸಲು ರೈತನ ದುಡಿಮೆ ಹಾಗೂ ಜ್ಞಾನಿಯಾಗಿ ಸುಸಂಸ್ಕೃತವಾಗಿ ಬದುಕಿ ಬಾಳಲು ಶಿಕ್ಷಕ ಇವರಿಬ್ಬರ ಸಹಕಾರ ಅವಶ್ಯಕವಾಗಿ ಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು  ನಗರದ ಜಗದ್ಗುರು ರೇಣುಕಾಚಾರ್ಯ ಮಂದಿರ ಹಳೇಪೇಟೆ ಶ್ರೀ ಬಸವೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಜರುಗಿದ ಶ್ರೀ ರಂಭಾಪುರಿ ಜಗದ್ಗುರುಗಳ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜಾ ಹಾಗೂ ಜನ ಜಾಗೃತಿ ಧರ್ಮ ಸಮಾರಂಭದ 3ನೇ ದಿನ ಆಶೀರ್ವಚನ ನೀಡುತ್ತಿದ್ದರು.ಒಳ್ಳೆಯ ಮಾತು ದ್ವೇಷ ಕಳೆಯುತ್ತದೆ. ಒಳ್ಳೆಯ ಮನಸ್ಸು ಸಂಬAಧಗಳನ್ನು ಕಾಪಾಡುತ್ತದೆ. ಒಳ್ಳೆಯ ವ್ಯಕ್ತಿತ್ವ ಜೀವನವನ್ನೇ ಬದಲಾಯಿಸುತ್ತದೆ. ಬೆವರ ಹನಿ ಭರವಸೆ ನೀಡಿದರೆ ಕಣ್ಣೀರ ಹನಿ ಬದುಕನ್ನು ಕಲಿಸುತ್ತದೆ. ವಿನಯವಿಲ್ಲದ ವಿದ್ಯೆ, ಹಸಿವಿಲ್ಲದ ಊಟ, ಹರಿತವಿಲ್ಲದ ಆಯುಧ, ಉಪಕಾರವಿಲ್ಲದ ಜೀವನ, ಗುಣವಿಲ್ಲದ ರೂಪ, ಉಪಯೋಗಕ್ಕೆ ಬಾರದ ಹಣ ವ್ಯರ್ಥವೆಂದು ನೀತಿ ಶಾಸ್ತç ಬೋಧಿಸುತ್ತದೆ. ಮನುಷ್ಯ ಫಲಭರಿತ ಬಾಳೆಯಂತೆ ಬಾಗಬೇಕು. ದೇವರಿಗೆ ಕೊಡುವುದೂ ಗೊತ್ತು ಕೊಟ್ಟಿದ್ದನ್ನು ಕಿತ್ತುಕೊಳ್ಳುವುದು ಗೊತ್ತು. ಮನುಷ್ಯ ಬಹಳಷ್ಟು ಎಚ್ಚರಿಕೆಯಿಂದ ಧರ್ಮ ಮಾರ್ಗದಲ್ಲಿ ನಡೆಯಬೇಕೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ನಿರೂಪಿಸಿದ್ದಾರೆ. ಅಂಗ ಅವಗುಣಗಳನ್ನು ದೂರ ಮಾಡಿ ಲಿಂಗ ಗುಣ ಸಂಪನ್ನನಾಗಲು ಶ್ರೀ ಗುರುವಿನ ಜ್ಞಾನ ಬೋಧಾಮೃತ ಅವಶ್ಯಕವೆಂದರು.ರಾಷ್ಟç ಪ್ರಶಸ್ತಿ ವಿಜೇತರಾದ ಅಥಣಿಯ ಬಸವರಾಜ ಉಮ್ರಾಣಿ ಮಾತನಾಡಿ ಮನುಷ್ಯ ಪ್ರಯತ್ನಕ್ಕೆ ಸರಿ ಸಾಟಿಯಾದುದು ಇನ್ನೊಂದಿಲ್ಲ. ಕಣ್ಣಿದ್ದವರಿಗಿಂತ ಕಣ್ಣಿಲ್ಲದವರಲ್ಲಿ ಹೆಚ್ಚಿನ ಜ್ಞಾಪಕ ಶಕ್ತಿ ಕ್ರಿಯಾಶಕ್ತಿ ಮನೆ ಮಾಡಿಕೊಂಡಿರುತ್ತದೆ. ಸಾಧನೆಯ ಮಾರ್ಗದಲ್ಲಿ ಗಟ್ಟಿಯಾಗಿ ಹೆಜ್ಜೆ ಇಟ್ಟರೆ ಯಶಸ್ಸು ನಿಶ್ಚಿತವೆಂದರು. ಎಸ್.ಹೆಚ್.ಪಾಟೀಲ, ಗಜಾಪುರದ ವೀರಯ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.ಕಣ್ವಕುಪ್ಪಿ ಗವಿಮಠದ ನಾಲ್ವಡಿ ಶಾಂತಲಿAಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ವೀರಶೈವ ಧರ್ಮದಲ್ಲಿ ಸಂಸ್ಕಾರಕ್ಕೆ ಬಹಳಷ್ಟು ಆದ್ಯತೆ ಕೊಟ್ಟಿದೆ. ಸಂಸ್ಕೃತಿ ಸಭ್ಯತೆ ಉಳಿಯಲು ಸಂಸ್ಕಾರದ ಅವಶ್ಯಕತೆಯಿದೆ. ಸರಿಯಾದ ಸಂಸ್ಕಾರವಿಲ್ಲದ ಕಾರಣ ಯುವ ಜನಾಂಗ ದಾರಿ ತಪ್ಪುತ್ತಿದ್ದಾರೆ. ಅವರನ್ನು ತಿದ್ದಿ ತೀಡಿ ಸನ್ಮಾರ್ಗಕ್ಕೆ ತರುವ ಜವಾಬ್ದಾರಿ ಎಲ್ಲರ ಮೇಲೂ ಇದೆಯೆಂದರು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು.ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ ದೇವಾಂಗದ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ವರ್ಷಿಣಿ ಸಾಲಿಮಠ ಭರತ ನಾಟ್ಯ ಅಭಿನಯಿಸಿದರು. ಶ್ರೀಮತಿ ಶಾಂತಕುಮಾರಿ ಸ್ವಾಗತಿಸಿದರು. ಕಾಂತರಾಜ ಮತ್ತು ವೀರೇಶ ಸಂಗಡಿಗರಿAದ ಸಂಗೀತ ಸೇವೆ ಜರುಗಿತು. ಶಿಕ್ಷಕ ಕೊಟ್ರೇಶಪ್ಪ ನಿರೂಪಿಸಿದರು. ಗಜಾಪುರ ಸುಲಫಲದೇವರ ಮಠದ ರೇಣುಕ ಪ್ರಸಾದ ಸಹೋದರರು ಅನ್ನ ದಾಸೋಹ ನೆರವೆರಿಸಿದರು