ಅನ್ನ,ಆಶ್ರಯ ಮತ್ತು ಅಕ್ಷರಗಳ ಸಾಕಾರ ಮೂರ್ತಿ ಸುತ್ತೂರು ಶಿವರಾತ್ರಿ ರಾಜೇಂದ್ರ ಸ್ವಾಮೀಜಿ.


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.30 ಶಿಕ್ಷಣ ಕ್ಷೇತ್ರಕ್ಕೆ ಕರ್ನಾಟಕದ ಮಠಮಾನ್ಯಗಳ ಕೊಡುಗೆ ಅಪಾರ.ಉಚಿತ ಪ್ರಸಾದ ನಿಲಯಗಳಲ್ಲಿದ್ದು ಓದಿಕೊಂಡ ಅನೇಕರು ಇಂದು ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿದ್ದಾರೆ.ಮೈಸೂರು ಪ್ರಾಂತ್ಯದ ಸುತ್ತೂರು ಸಣ್ಣ ಗ್ರಾಮ.ಇಂದು ಜಗತ್ತಿನ ಭೂಪಟದಲ್ಲಿ ಎದ್ದು ಕಾಣುವ ಶಿಕ್ಷಣ ಕ್ಷೇತ್ರದ ಸಾಂಸ್ಕ್ರತಿಕ ಕ್ಷೇತ್ರವಾಗಿದೆ.ಇದಕ್ಕೆ ಕಾರಣ ಕರ್ತರಾದವರು ರಾಜಗುರು ತಿಲಕ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಎಂದು ಮಹಿಳೆ ಯರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ರಾದ ಡಾ.ವೆಂಕನಗೌಡರು ನುಡಿದರು.
ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಗಾಂಧಿ ನಗರದ ಎಸ್.ಜಿ.ಟಿ.ಪ.ಪೂ.ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 291 ನೇ ಮಹಾಮನೆ ವಚನ ದಿನ, ಲಿಂ.ಸಂಗನಕಲ್ಲುದೊಡ್ಡ ಶರಣಪ್ಪ ಹಂಪಮ್ಮ ದತ್ತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡುತ್ತಾ ಸುತ್ತೂರು ರಾಜೇಂದ್ರ ಶ್ರೀಗಳು ಅನ್ನ, ಆಶ್ರಯ ಮತ್ತು ಅಕ್ಷರಗಳ ಸಾಕಾರ ಮೂರ್ತಿಗಳಾಗಿದ್ದರು.ಮೈಸೂರು ಮಾತ್ರವಲ್ಲದೇ ಕರ್ನಾಟಕದ ವಿವಿಧ ಪ್ರದೇಶ,ನವದೆಹಲಿ,ಮಾರಿಷನ್,ದುಬೈ,ಅಮೇರಿಕದ ಮೇರಿಲ್ಯಾಂಡ್ ಮುಂತಾದ ಪ್ರದೇಶಗಳಲ್ಲಿ 350 ಕ್ಕೂ ಹೆಚ್ಚು ಸೇವಾ ಸಂಸ್ಥೆಗಳನ್ನು ಸ್ಥಾಪಿಸಿ,20 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳ ಬಾಳಿಗೆ ಬೆಳಕಾಗಿದ್ದಾರೆ.ಬಸವನ ಭಕ್ತಿ,ಅಕ್ಕನ ವೈರಾಗ್ಯ,ಅಲ್ಲಮನ ಆತ್ಮಜ್ಞಾನವನ್ನು ಮೈಗೂಡಿಸಿಕೊಂಡು ಮಹನೀಯರು ಎಂದರು.
ಶ್ರೀಗುರು ತಿಪ್ಪೇರುದ್ರ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ರಾದ ಎಸ್.ಎನ್.ರುದ್ರಪ್ಪನವರು ಸುತ್ತೂರು ಶಿವರಾತ್ರಿ ರಾಜೇಂದ್ರ ಶ್ರೀ, ಬಸವೇಶ್ವರ ಮತ್ತು ಶ್ರೀಗುರು ತಿಪ್ಪೇರುದ್ರ ಸ್ವಾಮಿಗಳ ಭಾವಚಿತ್ರ ಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಸುತ್ತೂರು ರಾಜೇಂದ್ರ ಶ್ರೀಗಳು ಸಮಾಜದ ಸಂಘಟನೆಯ ಸೂತ್ರಧಾರ ರಾಗಿ ಶಿಕ್ಷಣ,ಕಲೆ, ಸಾಹಿತ್ಯ, ಸಾಂಸ್ಕ್ರತಿಕ ಕ್ಷೇತ್ರಗಳನ್ನು ಶ್ರೀಮಂತ ಗೊಳಿಸಿದ್ದಾರೆಂದರು.
ಎಸ್,ಜಿ,ಟಿ, ಸಂಸ್ಥೆಯ ಕಾರ್ಯದರ್ಶಿಗಳಾದ ಜಿ, ನಾಗರಾಜ
ರು ಅಧ್ಯಕ್ಷ ತೆ ವಹಿಸಿದ್ದರು.ಸರ್ಕಾರಿ ದಂತ ವೈದ್ಯಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವಿಮ್ಸ್ ನ ಸಹಪ್ರಾಧ್ಯಪಕರಾದ ಡಾಟಟಆರ್,ಕೆ, ಮಂಜುನಾಥ,ಡಾಟಟನಯನ ವರ್ಣೇಕರ್ ದಂಪತಿಗಳು ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಪಾಲ್ಗೊಂಡಿದ್ದರು.ಎಸ್,ಜಿ,ಟಿ,ಪಿ,ಯು,ಕಾಲೇಜಿನ ಪ್ರಾಂಶುಪಾಲರಾದ ಜಿ, ತಿಪ್ಪೇರುದ್ರ,ದತ್ತಿ ದಾಸೋಹಿಗಳಾದ ಎಸ್,ಚೆನ್ನನ ಗೌಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಚನ ದಿನದ ಅಂಗವಾಗಿ ಪಿ,ಯು, ವಿದ್ಯಾರ್ಥಿಗಳಿಗೆ ಪ್ರಬಂಧ,ಭಾಷಣ ಮತ್ತು ವಚನ ಗಾಯನ ಸ್ಪರ್ಧೆ ಯನ್ನು ಏರ್ಪಡಿಸಲಾಗಿದ್ದಿತು.ಪ್ರಬಂಧ ಸ್ಪರ್ಧೆ ಯಲ್ಲಿ ಸಾನಿಯಾ ಮಿರ್ಜಾ,ಪ್ರಥಮ,ಚಂದನ,ಹೆಚ್.ದ್ವಿತೀಯ,ಪನ್ನಗ ಶ್ರೀ,ಸಿ,ಜಿ,ತೃತೀಯ ಬಹುಮಾನ ವನ್ನು,ಭಾಷಣ ಸ್ಪರ್ಧೆಯಲ್ಲಿ ಪವಿತ್ರ,ಎಸ್.ಪ್ರಥಮ, ನಾಗೇಂದ್ರ,ವೈ, ದ್ವಿತೀಯ,ರಕ್ಷಿತಾ,ಕೆ,ತೃತೀಯ ಸ್ಥಾನವನ್ನು ಪಡೆದರು.ವಚನ ಗಾಯನದಲ್ಲಿ,ಕಾಸಿಂ,ಡಿ,ಟಿ, ಪ್ರಥಮ,ಪನ್ನಗಶ್ರೀ,ಸಿ,ಜಿ, ದ್ವಿತೀಯ,ಮಹೇಶ್ವರಿ,ಎನ್, ತೃತೀಯ ಸ್ಥಾನವನ್ನು ಪಡೆದರು.ಅತಿಥಿಗಳು ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರಗಳನ್ನು ನೀಡಿದರು.ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ವ್ಯಾಕರಣ ಪುಸ್ತಕಗಳನ್ನು ವಿತರಿಸಲಾಯಿತು.
ವಿದ್ಯಾರ್ಥಿ ಕಾಸಿಂ ವಚನ ಪ್ರಾರ್ಥನೆ ಮಾಡಿದರು.ವೈ,ನಾಗೇಂದ್ರ ಸ್ವಾಗತ ಕೋರಿದರು.ಪರಿಷತ್ ಅಧ್ಯಕ್ಷ ಕೆ.ಬಿ.ಸಿದ್ಧಲಿಂಗಪ್ಪ ದತ್ತಿ ಧಾತುಗಳನ್ನು ಪರಿಚಯಿಸಿ, ಶರಣುಸಮರ್ಪಣೆ ಮಾಡಿದರು.ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.ವೇದಿಕೆಯ ಎಲ್ಲಾ ಅತಿಥಿಗಳನ್ನು ಸನ್ಮಾನಿಸುವುದರೊಂದಿಗೆ ಕಾರ್ಯಕ್ರಮ ಮಂಗಲವಾಯಿತು.