ಅನೈತಿಕ ಸಂಬಂಧ ಯುವಕನ ಭೀಕರ ಕೊಲೆ

ಬೆಳಗಾವಿ,ಜೂ.೧೮-ಗೃಹಿಣಿ ಜತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಯುವಕನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕಡ ಮಾಡಿದ ದುರ್ಘಟನೆ ಯರಗಟ್ಟಿ ತಾಲೂಕಿನ ಹಲಕಿ ಬಳಿ ಇಂದು ನಡೆದಿದೆ.
ಬೈಲಹೊಂಗಲ ತಾಲೂಕಿನ ವನ್ನೂರ ಗ್ರಾಮದ ರಮೇಶ್ ಗುಂಜಗಿ(೨೪) ಕೊಲೆಯಾದ ಯುವಕನಾಗಿದ್ದಾನೆ.ಈತ ಎರಡು ತಿಂಗಳಿಂದ ಮನೆ ಪಕ್ಕದ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಮಹಿಳೆಯ ಪತಿ ಯಲ್ಲಪ್ಪ ಕಸೊಳ್ಳಿಗೆ ಈ ವಿಚಾರ ಗೊತ್ತಾಗಿ
ರಮೇಶ್ ಜೊತೆ ಜಗಳ ತೆಗೆದು ಎಚ್ಚರಿಕೆ ನೀಡಿದ್ದಾನೆ.
ಅಲ್ಲದೇ ಇದೇ ವಿಚಾರಕ್ಕೆ ಒಂದು ತಿಂಗಳ ಹಿಂದೆ ಗ್ರಾಮದಲ್ಲಿ ರಾಜಿ ಪಂಚಾಯಿತಿ ನಡೆದು ಮಾಡಿದ ತಪ್ಪಿಗೆ ಯಲ್ಲಪ್ಪನಿಗೆ ರಮೇಶ್ ಎರಡೂವರೆ ಲಕ್ಷ ದಂಡ ಕೊಟ್ಟಿದ್ದು ಇದಾದ ಹದಿನೈದು ದಿನಕ್ಕೆ ರಮೇಶ್ ಮನೆಗೆ ಬಂದಿದ್ದ ಮಹಿಳೆ ಮತ್ತೆ ಪತಿಯ ಜೊತೆ ಹೋಗಿ ತವರು ಮನೆ ಸೇರಿದ್ದಳು.
ರಮೇಶ್ ಬಿಟ್ಟು ಮತ್ತೆ ಪತಿಯ ಜತೆಗೆ ಸೇರಿಕೊಂಡು ಕೊಲೆ ಮಹಿಳೆಯೇ ಕೊಲೆ ಮಾಡಿಸಿದ್ದಾಳೆ ಎಂದು ರಮೇಶ್ ಕುಟುಂಬಸ್ಥರು ಆರೋಪಿಸಿದ್ದಾರೆ.
ಕೃತ್ಯದ ಸಂಬಂಧ ಯಲ್ಲಪ್ಪ, ಆತನ ಪತ್ನಿ ಸಾವಕ್ಕ ಸೇರಿ ಆರು ವಿರುದ್ಧ ಕೊಲೆ ಆರೋಪಿಸಲಾಗಿದೆ.ಗೌಂಡಿ ಕೆಲಸ ಮಾಡ್ತಿದ್ದ ರಮೇಶ್‌ನನ್ನು ಗೆಳೆಯನ ಮೂಲಕ ಕರೆಯಿಸಿ ಹತ್ಯೆ ಮಾಡಿಸಲಾಗಿದೆ ಎಂದು ಶಂಕಿಸಲಾಗಿದ್ದು,ಈ ಸಂಬಂಧ ಮುರಗೋಡ ಪೊಲೀಸ್ ಠಾಣೆಯಲ್ಲಿ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.