ಅನೈತಿಕ ಸಂಬಂಧ ಯುವಕನ ಕತ್ತು ಕೊಯ್ದು ಕೊಲೆ


ಮಂಡ್ಯ,ಜು.೨೮- ಯುವಕನೋರ್ವನನ್ನು ಕತ್ತು ಕೊಯ್ದು ಕೊಲೆ ಮಾಡಿರುವ ದಾರುಣ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ವೈನ್ ಸ್ಟೋರ್ ಬಳಿ ನಿನ್ನೆ ರಾತ್ರಿ ನಡೆದಿದೆ.
ಬೆಳಗೊಳದ ಸೀಬಯ್ಯನ ಮಂಟಿ ನಿವಾಸಿ ರವಿ(೨೨) ಕೊಲೆಯಾದ ಯುವಕ.
ಈತ ಕೆಲಸ ಮಾಡುತ್ತಿದ್ದ ವೈನ್ ಸ್ಟೋರ್ ಮುಂದೆಯೇ ತಲೆಯನ್ನು ಮಚ್ಚಿನಿಂದ ಕೊಚ್ಚಿ ಕತ್ತು ಕೊಯ್ದು ಕೊಲೆ ಮಾಡಲಾಗಿದೆ. ಶರತ್ ಎಂಬಾತ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ.
ಶರತ್ ಅತ್ತೆ ಜೊತೆ ರವಿ ಅಕ್ರಮ ಸಂಬಂಧ ಹೊಂದಿದ್ದ ಎಂಬ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಕೆ.ಆರ್.ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದಾರೆ