ಅನೈತಿಕ ಸಂಬಂಧ: ಬಿಹಾರ್ ವ್ಯಕ್ತಿಯಿಂದ ಅಸ್ಸಾಂ ಮಹಿಳೆಯ ಹತ್ಯೆ

ಕಲಬುರಗಿ,ಜು.28:ಚಿಂಚೋಳಿ, ಜು.28- ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಆಸ್ಸಾಂ ಮೂಲದ ಮಹಿಳೆಯನ್ನು ಬಿಹಾರ್ ಮೂಲದ ವ್ಯಕ್ತಿಯು ಕೊಲೆ ಮಾಡಿದ ಘಟನೆ ಚಿಂಚೋಳಿ ತಾಲ್ಲೂಕಿನ ಪೋಲಕಪಳ್ಳಿ ವಿದ್ಯುತ್ ತಯಾರಿಕಾ ಘಟಕದ ಹೊಲವೊಂದರ ಬಳಿ ವರದಿಯಾಗಿದೆ.
ಮೃತಳನ್ನು ಆಸ್ಸಾಂನ ಜಸ್ಮಿತಾಖಾತುನ್ ನಜ್ಮುದ್ದೀನ್ (30) ಹಾಗೂ ಕೊಲೆ ಆರೋಪಿಯನ್ನು ಬಿಹಾರ್ ಮೂಲದ ಮೊಹ್ಮದ್ ಝುಲ್ಪಿಕರ್ ಅಲಂ ಅಲಿಯಾಸ್ ಅಸ್ಲಂ ಮೊಹ್ಮದ್ ಅಲೀಮುದ್ದೀನ್ (29) ಎಂದು ಗುರುತಿಸಲಾಗಿದೆ.
ಕಳೆದ 2021ರ ಏಪ್ರಿಲ್ 4ರಂದು ಪೋಲಕಪಳ್ಳಿ ವಿದ್ಯುತ್ ತಯಾರಿಕಾ ಘಟಕದ ಹೊಲವೊಂದರ ಬಳಿ ಮಹಿಳೆಯನ್ನು ಓಡ್ನಿಯಿಂದ ಕುತ್ತಿಗೆಗೆ ಸುತ್ತಿ ಬಾಯಲ್ಲಿ ಬಟ್ಟೆ ತುರುಕಿ ಕೊಲೆ ಮಾಡಲಾಗಿತ್ತು. ಎಎಸ್‍ಪಿ ಪ್ರಸನ್ನ ದೇಸಾಯಿ ಅವರ ನೇತೃತ್ವದಲ್ಲಿ ಡಿವೈಎಸ್‍ಪಿ ಕೆ. ಬಸವರಾಜ್, ಸಿಪಿಐ ಮಹಾಂತೇಶ್ ಪಾಟೀಲ್, ಪಿಎಸ್‍ಐ ಮಂಜುನಾಥರೆಡ್ಡಿ, ಶಫಿಯೋದ್ದೀನ್, ಈಶ್ವರ್, ಶಿವಾನಂದ್ ಅವರ ತಂಡವು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾದರು. ಬಂಧಿತ ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.