ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಯನ್ನೇ ಕೊಲೆ ಮಾಡಿದ ಭೂಪ!

ಚಾಮರಾಜನಗರ, ಮಾ. 28:- ಪರಸ್ತ್ರಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಗಂಡನನ್ನು ಪ್ರಶ್ನೆ ಮಾಡಿದ ಪತ್ನಿಯನ್ನೇ ಹೊಡೆದು ಸಾಯಿಸಿರುವ ಘಟನೆ ತಾಲೂಕಿನ ಮೂಡ್ನಾಕೂಡು ಗ್ರಾಮದಲ್ಲಿ ಇಂದು ನಡೆದಿದೆ.
ಅದೇ ಗ್ರಾಮದ ಚಿಕ್ಕಮಾದಪ್ಪ ಅವರ ಮಗಳು ಎಂ.ಸಿ. ಸೌಮ್ಯ (27) ಗಂಡನ ಕ್ರೌರಕ್ಕೆ ಬಲಿಯಾದವಳು. ಪತಿ ಮಹೇಶ್ ಚಂದ್ರಗುರು ಕೊಲೆ ಆರೋಪಿಯಾಗಿದ್ದು, ಪೊಲೀಸರ ವಶದಲ್ಲಿದ್ದಾನೆ. ದಂಪತಿಗಳಿಗೆ ಐದು ವರ್ಷದ ಹೆಣ್ಣು ಮಗುವಿದೆ.
ಘಟನೆ ವಿವರ: ಕಳೆದ ಏಳು ವರ್ಷಗಳ ಹಿಂದೆ ಒಂದೇ ಗ್ರಾಮದ ಮಹೇಶ ಚಂದ್ರ ಗುರುವಿಗೆ ಎಂ.ಸಿ. ಸೌಮ್ಯಳನ್ನು ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು. ಪತಿ ನಡತೆಯ ಬಗ್ಗೆ ಮೃತ ಸೌಮ್ಯ ಅನೇಕ ಬಾರಿ ತಿಳುವಳಿಕೆ ನೀಡಿದ್ದರು. ತಿದ್ದುಕೊಳ್ಳದ ಪತಿ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಆಗಿದ್ದಾಂಗೆ ಜಗಳವಾಗಿದೆ. ಇಂದು ಜಗಳ ವಿಕೋಪಕ್ಕೆ ತಿರುಗಿ ಆರೋಪಿ ಮಹೇಶಚಂದ್ರಗುರು ಪತ್ನಿಯನ್ನು ಕಪಾಳಕ್ಕೆ ಹೊಡೆದು ಸಾಯಿಸಿದ್ದಾನೆ ಎಂದು ಗ್ರಾಮಾಂತರ ಪೂರ್ವ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಮೃತ ಸೌಮ್ಯಳ ಶವಪರೀಕ್ಷೆಯನ್ನು ನಗರದ ವೈದ್ಯಕೀಯ ಬೋಧನಾ ಅಸ್ಪತ್ರೆಯಲ್ಲಿ ನೆರವೇರಿಸಲಾಗಿದೆ. ಸ್ಥಳಕ್ಕೆ ಎಸ್ಪಿ, ಡಿವೈಎಸ್ಪಿ ಹಾಗೂ ತಹಶೀಲ್ದಾರ್ ಭೇಟಿ ನೀಡಿ, ಪರಿಶೀಲನೆ ಮಾಡಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.