ಅನೈತಿಕ ಸಂಬಂಧ ಪತಿಯಿಂದ ಪತ್ನಿಯ ಬರ್ಬರ ಹತ್ಯೆ

ಗುಪ್ತಾಂಗಕ್ಕೆ ಗುದ್ದಿ ಕೃತ್ಯ
ಬೆಂಗಳೂರು,ಜೂ.೫-ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಆಕ್ರೋಶಗೊಂಡ ಪತಿಯೊಬ್ಬ ಪತ್ನಿಯ ಗುಪ್ತಾಂಗಕ್ಕೆ ಎಡಗೈ ಬೆರಳುಗಳನ್ನು ಹಾಕಿ ಮನಸೋಇಚ್ಛೆ ಗುದ್ದಿ ಚಾಕುವಿನ ಇರಿದು ಭಯಾನಕವಾಗಿ ಕೊಲೆ ಮಾಡಿರುವ ದುರ್ಘಟನೆ ಬಸವೇಶ್ವರ ನಗರದ ಮಂಜುನಾಥನಗರದಲ್ಲಿ ನಡೆದಿದೆ.
ಮಂಜುನಾಥನಗರದ ನಾಗರತ್ನ (೩೨) ಭೀಕರವಾಗಿ ಕೊಲೆಯಾದ ಮಹಿಳೆಯಾಗಿದ್ದು ಕೃತ್ಯ ನಡೆಸಿದ ಆಕೆಯ ಪತಿ ಅಯ್ಯಪ್ಪ ಪರಾರಿಯಾಗಿದ್ದ. ನವದೆಹಲಿಯ ನಿರ್ಭಯ ಅತ್ಯಾಚಾರ ಕೊಲೆ
ಪ್ರಕರಣ ನೆನಪಿಸುವಂತಹ ಹೀನಾಕೃತ್ಯ ನಡೆಸಿದ್ದು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಲಾಗಿದೆ ಎಂದು ಡಿಸಿಪಿ ಲಕ್ಷ್ಮಣ ನಿಂಬರಗಿ ಅವರು ತಿಳಿಸಿದ್ದಾರೆ.ಸಿಟಿ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಅಯ್ಯಪ್ಪ, ನಾಗರತ್ನಳನ್ನು ೧೨ ವರ್ಷಗಳ ಹಿಂದೆ ಮದುವೆಯಾಗಿದ್ದು ದಂಪತಿಗೆ ೧೧ ವರ್ಷದ ಕುಮಾರ್ ಹಾಗೂ ೭ ವರ್ಷದ ಮಗಳು ಭೂಮಿಕಾ ಇದ್ದು ಅಕ್ಕನ ಮನೆಯಲ್ಲಿ ಅಯ್ಯಪ್ಪ ಮಕ್ಕಳನ್ನು ಬಿಟ್ಟಿದ್ದನು.ಮೊದಲು ಶಿವನಗರದಲ್ಲಿದ್ದ ದಂಪತಿಯು ೫ ತಿಂಗಳಿಂದ ಮಂಜುನಾಥನಗರದಲ್ಲಿ ಅಯ್ಯಪ್ಪ ಕೆಲಸಕ್ಕೆ ಹೋದರೆ ಎರಡು ಮೂರು ದಿನಗಳು ಮನೆಗೆ ಬರುತ್ತಿರಲಿಲ್ಲ ನಾಗರತ್ನ ಅವರು ಕೂಡ ರಾಮನಗರದ ಡಿಎಸ್ ಗೋಲ್ಡ್ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದರು.ಲೈಂಗಿಕ ಸಂಪರ್ಕದ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿದ್ದು ಹಲವು ಬಾರಿ ರಾಜಿ ಪಂಚಾಯ್ತಿ ನಡೆಸಲಾಗಿತ್ತು ಮೊದಲು ಯುವಕನೊಬ್ಬನ ಜೊತೆಗೆ ಮೊಬೈಲ್ ನಲ್ಲಿ ಹೆಚ್ಚಾಗಿ ನಾಗರತ್ನ ಮಾತನಾಡುತ್ತಿದ್ದರು.ಈ ವಿಚಾರವಾಗಿ ಜಗಳ ನಡೆದ ಮಧ್ಯೆಯೇ ಮಹಿಳೆ ನಾಗರತ್ನ ಜೊತೆ ಆ ದಿನ ಓರ್ವ ವ್ಯಕ್ತಿ ಇದ್ದ. ಅಯ್ಯಪ್ಪ ಅಕ್ಕನ ಮಗ ಚಂದ್ರು ಜೊತೆ ನಾಗರತ್ನ ಮನೆಯಲ್ಲಿದ್ದಳು. ಎರಡು ದಿನದ ಹಿಂದೆ ರಾತ್ರಿ ಅಯ್ಯಪ್ಪ ಮನೆಗೆ ಬಂದಾಗ ಚಂದ್ರು ಮನೆಯಲ್ಲಿ ಮಲಗಿದ್ದು ಇಬ್ಬರು ಬೆತ್ತಲಾಗಿದ್ದರು.ಅದನ್ನು ನೋಡಿದ ಅಯ್ಯಪ್ಪ ನಾಗರತ್ನ ಅವರ ಮನೆಯವರನ್ನು ಕರೆಯಿಸಿ ತೋರಿಸಿ ಜಗಳ ಮಾಡಿ ಚಂದ್ರುಗೆ ಮದುವೆಯಾಗಿ ಸಂಸಾರವಿದೆ. ಹೀಗಿದ್ದರೂ ತನ್ನ ಮನೆಯಲ್ಲಿ ಮಲಗಿದ್ದಾನೆ.ಏಕೆ ಬಂದಿದ್ದಾನೆ ಎಂದು ಅಯ್ಯಪ್ಪ ಗಲಾಟೆ ತೆಗೆದು ಚಂದ್ರು ಬಳಿಯಿದ್ದ ಮೊಬೈಲ್ ಕಿತ್ತುಕೊಂಡು ಗಲಾಟೆ ಮಾಡಿ ಮಧ್ಯರಾತ್ರಿ ಮಲಗಿದ್ದ ನಾಗರತ್ನ ಗುಪ್ತಾಂಗಕ್ಕೆ ಎಡಗೈ ಬೆರಳುಗಳನ್ನು ಹಾಕಿ ಮನಸೋಇಚ್ಛೆ ಗುದ್ದಿ ಚಾಕುವಿನ ಇರಿದು ಭಯಾನಕವಾಗಿ ಕೊಲೆ ಮಾಡಿದ್ದಾನೆ.ಘಟನೆ ಬಳಿಕ ಬಳಿಕ ಚಂದ್ರು ನಾಪತ್ತೆಯಾಗಿದ್ದಾನೆ. ಸದ್ಯ ಚಂದ್ರು ಕುಟುಂಬದಲ್ಲಿ ಆತಂಕ ಶುರುವಾಗಿದೆ. ಚಂದ್ರು ನಾಪತ್ತೆ, ಮೊಬೈಲ್ ಸ್ವಿಚ್ ಆಫ್ ಹಿಂದೆ ಮತ್ತಷ್ಟು ಅನುಮಾನ ವ್ಯಕ್ತವಾಗಿದೆ.ಸದ್ಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಬಸವೇಶ್ವರನಗರ ಪೊಲೀಸರು ಧಾವಿಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.ಕೊಲೆ ಆರೋಪಿ ಅಯ್ಯಪ್ಪನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಯ್ಯಪ್ಪ- ನಾಗರತ್ನ ಅವರ ಮಕ್ಕಳೀಗ ಅನಾಥರಾಗಿದ್ದಾರೆ.