ಅನೈತಿಕ ಸಂಬಂಧದ ಗುಟ್ಟು ರಟ್ಟಾಗುವ ಭಯ ಇಬ್ಬರು ಆತ್ಮಹತ್ಯೆ

ಕುಣಿಗಲ್, ಜ. ೨- ಅನೈತಿಕ ಸಂಬಂಧದ ಗುಟ್ಟು ರಟ್ಟಾಗುವ ಭಯದಲ್ಲಿ ಇಬ್ಬರು ಆತ್ಮಹತ್ಯೆಗೆ ಶರಣಾಗಿರುವುದು ಘಟನೆ ತಾಲ್ಲೂಕಿನ ಅಮೃತೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಮಲ್ಲಪ್ಪ (೨೫) ಹಾಗೂ ರತ್ನಮ್ಮ (೨೩) ಎಂಬುವರೇ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿಗಳು. ಅಮೃತೂರಿನಲ್ಲಿ ಗಾರೆ ಕೆಲಸ ಮಾಡಲು ಯಾದಗಿರಿ ಜಿಲ್ಲೆಯಿಂದ ಆಗಮಿಸಿದ್ದ ಮಲ್ಲಿಕಾರ್ಜುನ ಹಾಗೂ ಆತನ ಪತ್ನಿ ರತ್ನಮ್ಮ ೨೫ ಕೆಲಸ ಮಾಡಿಕೊಂಡು ಸಂತೋಷದಿಂದ ಜೀವನ ನಡೆಸುತ್ತಿದ್ದರು. ಯಾದಗಿರಿ ಜಿಲ್ಲೆಯ ಹಂಚೋಳ ಗ್ರಾಮದಿಂದ ಬಂದಿದ್ದ ಮಲ್ಲಪ್ಪ ಹಾಗೂ ರತ್ನಮ್ಮ ನಡುವೆ ಅನೈತಿಕ ಸಂಬಂಧಧ ಗುಟ್ಟು ಮೈದನಿಗೆ ತಿಳಿದ ನಂತರ ರತ್ನಮ್ಮ ಕಾಣೆಯಾಗಿದ್ದಳು.
ಈ ಬಗ್ಗೆ ಗಂಡ ಮಲ್ಲಿಕಾರ್ಜುನ ತನ್ನ ಪತ್ನಿ ರತ್ನಮ್ಮ ಕಾಣಿಯಾಗಿದ್ದಾಳೆ ಎಂದು ಅಮೃತೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು.
ಆದರೆ ಮಲ್ಲಪ್ಪ ಮತ್ತು ರತ್ನಮ್ಮನ ನಡುವೆ ಇದ್ದ ಅನೈತಿಕ ಸಂಬಂಧಕ್ಕೆ ಭಯಪಟ್ಟು ಗುಟ್ಟು ರಟ್ ಆಗುವುದೆಂಬ ಕಾರಣಕ್ಕೆ ಎಡೆಯೂರಿನ ಉಪ ಪೊಲೀಸ್ ಠಾಣೆಯ ಹಿಂಭಾಗದ ಶಿವಣ್ಣ ಎಂಬುವರ ಜಮೀನಿನ ಪೊದೆಯಲ್ಲಿ ಇಬ್ಬರು ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಪಿಎಸ್‌ಐ ಮಂಜು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.