ಅನೆಗುಂದಿ:ಶ್ರೀ ಪದ್ಮನಾಭ ತಿರ್ಥರ ೭೦೦ನೇ ವರ್ಷದ ಆರಾಧನಾ ಮಹೋತ್ಸವ.ಪೂರ್ವರಾಧನೆ

ರಾಯಚೂರು.ಡಿ೧೦:ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ವತಿಯಿಂದ ಆನೆಗೊಂದಿಯಲ್ಲಿ ಶ್ರೀಪದ್ಮನಾಭತೀರ್ಥರ ಆರಾಧನೆ ಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿ ಮಠದ ವತಿಯಿಂದ ಶ್ರೀ ಪದ್ಮನಾಭ ತಿರ್ಥರ ೭೦೦ನೇ ವರ್ಷದ ಆರಾಧನಾ ಮಹೋತ್ಸವ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ನೇತೃತ್ವದಲ್ಲಿ ಪೂರ್ವಾರಾಧನೆಯನ್ನು ನವವೃಂದಾವನದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ಡಿ೧೦ ಪೂರ್ವಾರಾಧನೆ, ಡಿ.೧೧ ಮಧ್ಯಾರಾಧನೆ ಮಧ್ಯಾಹ್ನದವರೆಗೆ ಪೂಜೆಗೆ ಶ್ರೀಮಠಕ್ಕೆ ನಾಯ್ಯಾಲಯ ಅನುಮತಿಸಿದ್ದು, ಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳವರ ನೇತೃತ್ವದಲ್ಲಿ ಭಾನುವಾರದಂದು ಪೂರ್ವಾರಾಧನೆ ಅದ್ದೂರಿಯಾಗಿ ಆಚರಿಸಲಾಯಿತು.
ಬೆಳ್ಳಗೆ ಶ್ರೀಪದ್ಮನಾಭತೀರ್ಥರ ಮೂಲ ವೃಂದಾವನಕ್ಕೆ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ಶ್ರೀಗಳಿಂದ ಮುದ್ರಾಧಾರಣೆ, ಮೂಲರಾಮದೇವರ ಸಂಸ್ಥಾನ ಪೂಜೆ, ಹಸ್ತೋದಕ , ಅಲಂಕಾರ ಬ್ರಾಹ್ಮಣ ಸಮಾರಾಧನೆ, ಭಕ್ತಾದಿಗಳಿಗೆ ತೀರ್ಥಪ್ರಸಾದ ವಿತರಣೆ ನೇರವೆರಿಸಿ ಅದ್ದೂರಿಯಾಗಿ ಪೂರ್ವಾರಾಧನೆ ನಡೆಸಲಾಯಿತು.
ಶ್ರೀಪದ್ಮನಾಭತೀರ್ಥರ ಮೂಲ ವೃಂದಾವನವು ಪೂರ್ವಾರಾಧನೆ ಹಿನ್ನೆಲೆ ಹಸಿರು ಮಂಟಪದಿಂದ ಪುಷ್ಪಾಲಂಕಾರವು ಭಕ್ತಾದಿಗಳ ಗಮನ ಸೆಳೆಯಿತು