ಅನೂಷ್ಕಾಗೆ ಹುಟ್ಟುಹಬ್ಬದ ಸಂಭ್ರಮ

ಮುಂಬೈ,ಮೇ.೧- ಬಾಲಿವುಡ್ ಬೆಡಗಿ ಅನೂಷ್ಕಾ ಶರ್ಮಾ ಅವರಿಗೆ ಇಂದು ೩೩ನೇ ಹುಟ್ಟುಹಬ್ಬದ ಸಂಭ್ರಮ.
ಪತಿ ಹಾಗು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ ಸೇರಿದಂತೆ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಅವರು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ.
ಈ ವೇಳೆ ಪತಿ ವಿರಾಟ್ ಕೋಹ್ಲಿ ಅವರನ್ನು ೨೦೧೩ರಲ್ಲಿ ಜಾಹೀರಾತು ಚಿತ್ರೀಕರಣ ಸಮಯದಲ್ಲಿ ಮೊದಲ ಬಾರಿ ಭೇಟಿ ಮಾಡಿದ ಕ್ಷಣವನ್ನು ಅನೂಷ್ಕ ಶರ್ಮಾ ನೆನಪು ಮಾಡಿಕೊಂಡಿದ್ದಾರೆ.
ಜಾಹೀರಾತು ಚಿತ್ರೀಕರಣ ಮುಗಿದ ಬಳಿಕ ಅನೂಷ್ಕ ಶರ್ಮಾ ಅವರು ವಿರಾಟ್ ಕೋಹ್ಲಿ ಅವರನ್ನು ಮನೆಗೆ ಆಹ್ವಾನಿಸಿದ್ದರು. ಆ ನಂತರ ಪರಿಚಯ ಸ್ನೇಹವಾಗಿ ಬೆಳೆದು, ಪ್ರೀತಿ ಈಗ ಮದುವೆಯಾಗಿ ಸುಖವಾಗಿದ್ದೇವೆ ಎನ್ನುವ ಸಂಗತಿಯನ್ನು ಅನೂಷ್ಕ ಹೊರಹಾಕಿದ್ದಾರೆ,’
ಈ ಕುರಿತು ನಿಯತಕಾಲಿಕ ವೊಂದಕ್ಕೆ ಸಂದರ್ಶನ ನೀಡಿರುವ ಅವರು, ಮೊದಲ ಜಾಹೀರಾರು ಬಳಿಕ ಅನೇಕ ಜಾಹೀರಾತುಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡವು. ಇದು ನಮ್ಮಿಬ್ಬರ ನಡುವೆ ಸ್ನೇಹ ಮತ್ತಷ್ಟು ಗಟ್ಟಿಯಾಗಿ ಪ್ರೀತಿಗೆ ಮಾರ್ಪಟ್ಟಿತ್ತು ಎಂದು ಅವರು ತಿಳಿಸಿದ್ದಾರೆ.’
ಮೊದಲ ಜಾಹೀರಾತು ಚಿತ್ರೀಕರಣ ಮೂರು ದಿನ ನಡೆದಿತ್ತು.ಅದರಲ್ಲಿ ಎರಡನೇ ದಿನದ ರಾತ್ರಿ ನಮ್ಮ ಹೊಸ ಮನೆಯ ಗೃಹ ಪ್ರವೇಶಕ್ಕೆ ಸ್ನೇಹಿತರನ್ನು ಆಹ್ವಾನಿಸಿದ್ದೆ.ಅದರಂತೆ ವಿರಾಟ್ ಕೋಹ್ಲಿ ಅವರನ್ನು ಕೂಡ ಎಂದು ಹೇಳಿದ್ಧಾರೆ.
ಆರಂಭದಲ್ಲಿ ವಿರಾಟ್ ಕೋಹ್ಲಿ ಆಹಂಕಾರ ಪ್ರದರ್ಶಿಸುತ್ತಿದ್ದರು ನಂತದ ದಿನಗಳಲ್ಲಿ ಅದು ಸರಿ ಹೋಯಿತು.ಪರಿಚಯ ಸ್ನೇಹ ಪ್ರೀತಿ, ಮದುವೆಯಾಗಿ ಇದೀಗ ಪೋಷಕರಾಗಿದ್ದೇವೆ ಎಂದು ನೆನೆಪು ಮಾಡಿಕೊಂಡಿದ್ದಾರೆ.