ಅನುಸೂಚಿತ ಜಾತಿ- ಬುಡಕಟ್ಟು ಉಪ ಯೋಜನೆಗಳಿಗೆ ಹಣ ಮೀಸಲಿಡುವಲ್ಲಿ ಬಿಜೆಪಿ ಜಿಪುಣತನ: ಶಾಸಕ ಡಾ. ಅಜಯ್ ಸಿಂಗ್ ಆರೋಪ

ಕಲಬುರಗಿ:ಮಾ:12:ರಾಜ್ಯದಲ್ಲಿನ ಭಾರತೀಯ ಜನತಾ ಪಕ್ಷದ ಸರ್ಕಾರ ಅನುಸೂಚಿತ ಜಾತಿ (ಎಸ್‍ಸಿಪಿ) ಮತ್ತು ಬುಡಕಟ್ಟು ಉಪ ಯೋಜನೆ (ಟಿಎಸ್‍ಪಿಎ) ಗೆ ಬಜೆಟ್‍ನಲ್ಲಿ ಯಥೇಚ್ಚ ಅನುದಾನ ನೀಡದ ಈ ಸಮುದಾಯದವರನ್ನು ವಂಚಿಸಿದೆ ಎಂದು ಜೇವರ್ಗಿ ಶಾಸಕರು, ವಿರೋಧ ಪಕ್ಷ ಮುಖ್ಯ ಸಚೇತಕರಾದ ಡಾ. ಅಜಯ್ ಸಿಂಗ್ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಭಾನುವಾರ ಜೇವರ್ಗಿಯ ಶ್ರೀಸಾಯಿ ಪಿಯು ಕಾಲೇಜು ಬಳಿ 2018-19ನೇ ಸಾಲಿನ ಸಮಾಜ ಕಲ್ಯಾಣ ಇಲಾಖೆ ಯೋಜನೆ ಅಡಿ 1.39 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಸಮುದಾಯ ಭವನ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು ಬಜೆಟ್ಟಿನ ಶೇ. 24. 5 ರಷ್ಟು ಅನುದಾನ ಎಸ್‍ಸಿಪಿ ಹಾಗೂ ಟಿಎಸ್‍ಪಿಎ ಯೋಜನೆಗಳಿಗೆ ಮೀಸಲಿಡಬೇಕು ಎಂಬ ನಿಯಮವಿದ್ದರೂ ಇವನ್ನೆಲ್ಲ ಗಾಳಿಗೆ ತೂರಲಾಗಿದೆ. ಈ ಬಜೆಟ್‍ನ ಗಾತ್ರ ದೊಡ್ಡದಾಗಿದ್ದರೂ ಅತ್ಯಂಲಪ್ ಹಣ ಈ ಸಮುದಾಯಗಳ ಪ್ರಗಿಗೆ ಮೀಸಲಿಡಲಾಗಿದೆ ಎಂದು ಅಂಕಿ ಸಂಖ್ಯೆ ಸಮೇತ ಅದಜಯ್ ಸಿಂಗ್ ದೂರಿದರು.

2008 ರಿಂದ 2013 ರ ಬಿಜೆಪಿ ಅವಧಿಯಲ್ಲಿ ಎಸ್‍ಸಿಪಿ ಹಾಗೂ ಟಿಎಸ್ಪಿಎ ಯೋಜನೆಗಳಿಗೆ 22, 261 ಕೋಟಿ ರು ವೆಚ್ಚ ಮಾಡಿದ್ದರೆ, ಇವೇ ಯೋಜನೆಗಳಿಗೆ 2013 ರಿಂದ 2018 ರ ಅವಧಿಯ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಾಲ್ಕು ಪಟ್ಟು ಹೆಚ್ಚು ಅಂದರೆ 88, 395 ಕೋಟಿ ರು ಹಣ ಅನುಸೂಚಿತ ಜಾತಿ (ಎಸ್‍ಸಿಪಿ) ಮತ್ತು ಬುಡಕಟ್ಟು ಉಪ ಯೋಜನೆ (ಟಿಎಸ್‍ಪಿಎ) ಗೆ ಮೀಸಲಿಟ್ಟು ಈ ವರ್ಗಗಳ ಸರ್ವತೋಮಿಖ ಏಳಿಗೆಗಾಗಿ ತನ್ನ ಸಂಕಲ್ಪ ಪ್ರದರ್ಶಿಸಿದೆ ಎಂದರು.

ಎಸ್‍ಸಿ ಹಾಗೂ ಎಸ್ಟಿ ಮತ್ತು ಓಬಿಸಿ ಸಮುದಾಯಗಳ ಮೀಸಲು ಪ್ರಮಾಣ ಹೆಚ್ಚಿಸಿ ಬಿಜೆಪಿ ಸರ್ಕಾರ ಹೇಳಿಕೆ ನೀಡಿದರೂ ಅದಿನ್ನು 9 ನೇ ಶೆಡ್ಯುಲ್‍ನಲ್ಲಿ ಯಾಕೆ ಘೋಷಿಸುತ್ತಿಲಲ. ಕಾಂಗ್ರೆಸ್ ಸರ್ಕಾರ ಈ ವರ್ಗಗಳ ಮೀಸಲು ಪ್ರಮಾಣ ಹೆಚ್ಚಳಕ್ಕೆ ಅತ್ಯಂತ ಆದ್ಯತೆ ನೀಡಿತ್ತು. ಆದರೆ ಬಿಜೆಪಿ ಈ ವರ್ಗಗಳ ಪ್ರತಿ ಬರೀ ಒಸಳೆ ಕಮ್ಣೀರು ಸುರಿಸುತ್ತಿದಯೇ ವಿನಹಃ ವಾಸ್ತವದಲ್ಲಿ ಈ ವರ್ಗಗಳ ಮೀಸಲಾತಿ ಹೆಚ್ಚಿಸುವ ಸದಾಶಯ ಬಿಜೆಪಿಗೆ ಇಲ್ಲವೇ ಇಲ್ಲ. ಇದ್ದಿದ್ದರೆ ಅದಾಗಲೇ 9 ನೇ ಶೆಡ್ಯುಲ್‍ನಲ್ಲಿ ತನ್ನ ಮೀಸಲು ಹೆಚ್ಚಳದ ನಿಲುವಿಗೆ ಸ್ಥಾನಮಾನ ಕಲ್ಪಿಸುತ್ತಿತ್ತು ಎಂದು ಡಾ. ಅಜಯ್ ಸಿಂಗ್ ಹೇಳಿದರು.

ಎಸ್ಸಿ- ಎಸ್ಟಿ ಸರ್ಕಾರಿ ನೌಕರರ ಬಡ್ತಿ ವಿಷಯದಲ್ಲಿಯೂ ಕೇಂದ್ರ ಕೊಕ್ಕೆ ಹಾಕಿದ್ದರೂ ರಾಜ್ಯದಲ್ಲಿದ್ದಂತಹ ಕಾಂಗ್ರೆಸ್ ಸರ್ಕಾರ ಈ ವರ್ಗಗಳ ನೌಕರರ ಪ್ರತಿ ತನ್ನ ಬದದ್ಧತೆ ತೋರುತ್ತ ಬಡ್ತಿ ಮೀಸಲು ನಿಯಮಗಳಿಗೆ ಈ ವರ್ಗದ ನೌಕರರಿಗೆ ಅನುಕೂಲವಾಗುವಂತೆ ನಿಲುವು ಪ್ರದರ್ಶಿಸಿತು. ಕಾಂಗ್ರೆಸ್ ಪಕ್ಷವೇ ಎಸ್ಸಿ- ಎಸ್ಟಿ, ಓಬಿಸಿ ವರ್ಗಗಳ ಪರವಾಗಿ ಅನೇಕ ಮಹತ್ವದ ನಿರ್ಣಯಗಳನ್ನು ತಾಳಿದೆ ಎಂದು ಡಾ. ಅಜಯ್ ಸಿಂಗ್ ಹೇಳಿದರು.


ಜೇವರ್ಗಿಯಲ್ಲೇ ಮೊದಲು ಕೈಗೂಡಿತು ವಾಲ್ಮೀಕಿ ಭವನ

ಮಹರ್ಷಿ ವಾಲ್ಮೀಕಿ ಜನಹಿತಕ್ಕಾಗಿ ದುಡಿದ ಮಹಾನ ಸಂತ, ಯಾವುದೇ ಒಂದು ಜಾತಿ ಸಮುದಾಯಕ್ಕೆ ಅವರೂ ಸೀತಿರಲ್ಲ, ಮಹರ್ಷಿ ವಾಲ್ಮೀಕಿ ಕೇವಲ ಒಂದು ಜಾತಿಗೆ ಸೀಮಿತರಾದವರಲ್ಲ, ರಾಮಾಯಣ ಗ್ರಂಥವನ್ನು ಇಡೀ ಜಗತ್ತಿಗೆ ಪರಿಚಯಿಸಿದ ಮಹಾನ ಸಂತ. ಜನಹಿತಕ್ಕಾಗಿ ದುಡಿದ ತಪಸ್ವಿ ವಾಲ್ಮೀಕಿ ಜಾತಿ, ವರ್ಗ ರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆಂದು ಶಾಸಕ ಡಾ.ಅಜಯಸಿಂಗ್ ಹೇಳಿದರು.

ಪಟ್ಟಣದ ಶ್ರೀಸಾಯಿ ಪಿಯು ಕಾಲೇಜು ಹತ್ತಿರ 2018-19ನೇ ಸಾಲಿನ ಸಮಾಜ ಕಲ್ಯಾಣ ಇಲಾಖೆ ಯೋಜನೆ ಅಡಿಯಲ್ಲಿ 1.39 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಸಮುದಾಯ ಭವನ ಆ ಸಮಾಜವರಿಗೆ ಅನುಕೂಲವಾಗಲಿ ಎಂದು ಹಾರೈಸಿದರು. ಇಲ್ಲಿನ್ನೂ ಉಳಿದ ಕೆಲಸಗಳಿಗೆ 1 ಕೋಟಿ ರು ಪ್ರಸ್ತಾವನೆ ತಾವು ಸಲ್ಲಿಸಿದ್ದು ಶೀಘ್ರ ಅವೆಲ್ಲ ಕಾಮಗಾರಿಗಳು ಕೈಗೂಡುವ ವಿಶ್ವಾಸ ವ್ಯಕ್ತಪಡಿಸಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಥಮ ಬಾರಿಗೆ ಭವ್ಯವಾದ ಸಮುದಾಯ ಭವನ ನಿರ್ಮಾಣ ಮಾಡಿ ಈ ಭಾಗದ ವಾಲ್ಮೀಕಿ ಜನಾಂಗದವರಿಗೆ ಅನುಕೂಲ ಕಲ್ಪಿಸಲಾಗಿದೆ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಅನುದಾನ ತರುವುದು ಕಷ್ಟದ ಕೆಲಸವಾಗಿದೆ. ಎಸ್‍ಸಿಪಿ ಟಿಎಸ್‍ಪಿ ಯೋಜನೆ ಅನುದಾನ ಬಿಡುಗಡೆ ಮಾಡದೇ ಬಿಜೆಪಿ ಸರ್ಕಾರ ಅನ್ಯಾಯ ಮಾಡುತ್ತಿದೆ. ಕಳೆದ ಸಿದ್ಧರಾಮಯ್ಯ ನೇತೈತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಸ್ಸಿ ಹಾಗೂ ಎಸ್ಟಿ ಜನಾಂಗದ ಅಭಿವೈದ್ಧಿಗೆ ಸಾವಿರಾರು ಕೋಟಿ ರೂ.ಅನುದಾನ ಬಿಡುಗಡೆ ಮಾಡಿ ಅಭಿವೈದ್ಧಿ ಮಾಡಲಾಗಿದೆ. ಮುಂಬರಲಿರುವ ವಿಧಾನಸಭೆಯ ಚುನಾವಣೆಯಲ್ಲಿ ಮತ್ತೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಎಸ್ಸಿ, ಎಸ್ಟಿ ಹಿಂದುಳಿದ ವರ್ಗ ಸೇರಿದಂತೆ ಸರ್ವ ಜನಾಂಗದ ಶ್ರೇಯೋಭಿವೈದ್ಧಿಗಾಗಿ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

ವಾಲ್ಮೀಕಿ ಗುರುಪೀಠದ ಗೊಲ್ಲಪಲ್ಲಿಯ ಶ್ರೀವರದಾನೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸರಕಾರಿ ಪ್ರಥಮ ದರ್ಜೇ ಕಾಲೇಜಿನ ಪ್ರಾಚಾರ್ಯ ಡಾ.ಕರಿಗೂಳೇಶ್ವರ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಲೋಕೋಪಯೋಗಿ ಇಲಾಖೆಯ ಎಇಇ ತಜಮುಲ್ಲಾ ಹುಸೇನ್, ಕಿರಿಯ ಅಭಿಯಂತರ ಭೀಮಸೇನ್ ಜೋಶಿ, ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಅಶೋಕ ನಾಯಕ, ಸಮಾಜದ ಹಿರಿಯ ಮುಖಂಡ ಈರಘಂಟೆಪ್ಪ ವಡಗೇರ, ರಾಜಶೇಖರ ಸೀರಿ, ಕಾಶೀರಾಯಗೌಡ ಯಲಗೋಡ, ಗುರುರಾಜ ಸುಬೇದಾರ, ಸುರೇಶ ಹವಲ್ದಾರ್, ಶೌಕತ್ ಅಲಿ ಆಲೂರ, ಷಣ್ಮುಖಪ್ಪಗೌಡ ಹಿರೇಗೌಡ, ಮಹಿಮೂದ್ ನೂರಿ, ಯಲ್ಲಾಲಿಂಗ ವಕೀಲ, ರಾಜು ನಾಯಕ, ರಿಯಾಜ್ ಪಟೇಲ ಮುದಬಾಳ, , ರವಿ ಕೋಳಕೂರ, ಶ್ರವಣಕುಮಾರ ನಾಯಕ, ನಾಗರಾಜ ಹಾಲಗೂರ, ಮಹಾಂತೇಶ ದೊರೆ, ಮಹಿಮೂದ್ ಪಟೇಲ, ರಫೀಕ ಮಡಕಿ, ಗುರು ಟಣಕೇದಾರ, ಭೀಮರಾಯ ಘಂಠಿ, ಬಸವರಾಜ ಸುಬೇದಾರ, ದವಲಪ್ಪ ಮದನ್, ಮಲ್ಲಿಕಾರ್ಜುನ ಕೆಲ್ಲೂರ, ಅಂಬರೀಶ ಸುಬೇದಾರ, ಸಲೀಂ ಕಣ್ಣಿ, ಲಕ್ಷ್ಮೀಕಾಂತ ಕುಲಕರ್ಣಿ, ಮರೆಪ್ಪ ಸರಡಗಿ ಸೇರಿದಂತೆ ವಾಲ್ಮೀಕಿ ಸಮುದಾಯದ ನೂರಾರು ಜನ ಭಾಗವಹಿಸಿದ್ದರು.