ಅನುಸೂಚಿತ ಜಾತಿ ಅನುಸೂಚಿತ ಪಂಗಡಗಳ (ದೌರ್ಜನ್ಯ ನಿಯಂತ್ರಣ) ನಿಯಮ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ಸಭೆ

ಕಲಬುರಗಿ: ಆ. 16: ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ (ದೌರ್ಜನ್ಯ ನಿಯಂತ್ರಣ) ನಿಯಮಗಳು 1989/1995 ನಾಗರಿಕ ಹಕ್ಕು ಸಂರಕ್ಷಣಾ ಕಾಯ್ದೆಯ ನಿಯಮ 17 ರೀತ್ಯಾ ನಡೆದ ಜಿಲ್ಲಾ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್ ಮಾತನಾಡಿದರು

ಬುಧುವಾರದಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ದೌರ್ಜನ್ಯ ನಿಯಂತ್ರದ ಕುರಿತು ಅಧಿಕರಿಗಳೊಂದಿಗೆ ಮಾತನಾಡಿದರು. ಅಧಿಕಾರಿಗಳು ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ತಮ್ಮ ಕರ್ತವ್ಯವನ್ನು ಯಾವುದೇ ಲೋಪವಾಗದಂತೆ ನೋಡಿಕೊಳ್ಳಲು ಸೂಚಿಸಿದರು.
ಒಟ್ಟು ಪ್ರಕರಣಗಳ ಮಾಹಿತಿ ಸಮಾಜ ಕಲ್ಯಾಣಾಧಿಕಾರಿಯಿಂದ ಮಾಹಿತಿ ಪಡೆದುಕೊಂಡರು. 273, ಶಿಕ್ಷೆಯಾದ ಪ್ರಕರಣಗಳ 0 ಅಕ್ವೀಟೆಡ್ ಆದ ಪ್ರಕರಣಗಳ 13 ,ಒಟ್ಟು ವಿಲೇವಾರಿ ಪ್ರಕರಣಗಳ ಸಂಖ್ಯೆ 13 ಬಾಕಿ ಪ್ರಕರಣಗಳು 260 ಇವೆ ಎಂದು ಸಭೆಯ ಗಮನಕ್ಕೆ ತಂದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಶುಭ ಅವರು ಮಾತನಾಡಿ, 2022-23 ನೇ ಸಾಲಿನಲ್ಲಿ 10 ಪ್ರಥಮ ವರ್ತಮಾನ ವರದಿ ಪ್ರಕರಣಗಳ ಸಂಖ್ಯೆ ಹಾಗೂ ಪರಿಹಾರ ಧನ ನೀಡಿರುವ ಮೊತ್ತ ರೂ 12,25,000 ಇಂತಿದೆ. ಅಂತಿಮ ವರದಿ ಪ್ರಕರಣಗಳ ಸಂಖ್ಯೆ ಹಾಗೂ ಪರಿಹಾರ ಧನ ನೀಡಿರುವ ಮೊತ್ತ ರೂ 12,25,000, ಒಟ್ಟು ಪ್ರಕರಣಗಳಗೆ ಸಂಖ್ಯೆ ಪರಿಹಾರ ಧನ ನೀಡಿರುವ ಮೊತ್ತ 24,50,000 ಇಂತಿದೆ ಎಂದು ವಿವರಿಸಿದರು.
ಮಾನ್ಯ ಜಿಲ್ಲಾಧಿಕಾರಿಗಳು ಮಾತನಾಡಿ ದೌರ್ಜನ್ಯದಲ್ಲಿ ಮೃತಪಟ್ಟ ವಾರಸ್ಮದಾರರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಕುರಿತು ಬಾಕಿ ಉಳಿದ ಪ್ರಕರಣಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದು ತುರ್ತಾಗಿ ಕ್ರಮವಹಿಸಲು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ. ಭಂವರ್ ಸಿಂಗ್ ಮೀನಾ, ಎಸ್.ಪಿ. ಇಶಾ ಪಂತ್, ಪ್ರೋಬೇಷನರ್ ಐ.ಎ.ಎಸ್. ಗಜಾನನ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಪೋಲೀಸ್ ಉಪಾಧೀಕ್ಷಕರು ಗ್ರಾಮೀಣ ಉಪವಿಭಾಗ ಕಲಬುರಗಿ, ಆಳಂದ, ಚಿಂಚೋಳಿ, ಶಹಾಬಾದ ಸೇರಿದಂತೆ ಸದಸ್ಯರುಗಳಾದ ಜಿ.ಗೋಪಾಲರಾವ , ಚನ್ನಪ್ಪ ಆರ್, ಅನಿಕುಮಾರ ಜಾದವÀ, ಉಪಸ್ಥಿತರಿದ್ದರು.