ಅನುಷ್ಠಾನ ಮುಕ್ತಾಯ ಸಮಾರಂಭ

ಕಲಬುರಗಿ,ಆ.19-ಸಮೀಪದ ಸುಕ್ಷೇತ್ರ ಪಾಂಡವರ ಅಣಿಯಲ್ಲಿ ಚಿಂಚನಸೂರ ಅಪಚಂದ್ ಸಿದ್ದಮಲ್ಲೇಶ್ವರ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯರು ಕೈಗೊಂಡ 47 ದಿನದ ಅನುಷ್ಠಾನ ಮುಕ್ತಾಯವಾಯಿತು. ಸಮಾರಂಭದಲ್ಲಿ ಡಾ.ಜಗದ್ಗುರು ಸಾರಂಗಧರ ದೇಶಿ ಕೇಂದ್ರ ಶಿವಾಚಾರ್ಯರು, ಸಿದ್ದಮಲ್ಲ ಶಿವಾಚಾರ್ಯರು, ಡಾ.ರೇವಣಸಿದ್ಧ ಶಿವಾಚಾರ್ಯರು, ನಿಜಲಿಂಗ ಶಿವಾಚಾರ್ಯರು, ಅಪ್ಪಾರಾವದೇವಿ ಮುತ್ಯಾ, ಶಿವಶರಣೆ ಸುಮಿತ್ರಮ್ಮ ಅಮ್ಮನವರು, ಲಿಂಗಾನಂದ ಶರಣರು ಅಲ್ಲದೆ ಅನೇಕ ಪೂಜ್ಯರು ಉಪಸ್ಥಿತರಿದ್ದರು.
ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಂಪ್ರಭು ಪಾಟೀಲ್, ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಬಸವರಾಜ್ ಮತ್ತಿಮೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರವೀಣ ಮಡಿವಾಳ, ಸುಧಾಕರ್ ಮಡಿವಾಳ, ಸಂಜು ಕುಮಾರ್ ಬಿರಾದಾರ್ ಅವರು ಅನುಷ್ಠಾನ ಮೂರ್ತಿ ಸಿದ್ದಲಿಂಗ ಶಿವಾಚಾರ್ಯರಿಗೆ ತುಲಾಭಾರ ಸೇವೆ ಸಲ್ಲಿಸಿದರು. ಸುತ್ತಮುತ್ತಲಿ ಗ್ರಾಮಗಳಾದ ಸೈಯದ್ ಚಿಂಚೋಳಿ, ಗಣಜಲ ಖೇಡ, ಅಷ್ಟಗಾ, ಜಂಬಗಾ, ಕುಮಸಿ ಅಲ್ಲದೆ ಅನೇಕ ಗ್ರಾಮಗಳ ಸದ್ಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸುತ್ತಮುತ್ತಲಿನ ಗ್ರಾಮದ ಭಜನಾ ಮಂಡಳಿ ಅವರಿಂದ ಭಜನಾ ಕಾರ್ಯಕ್ರಮ ಜರುಗಿತು. ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಜರಗಿತು.
ಈ ಕಾರ್ಯಕ್ರಮ ನಿಮಿತ್ಯ ಕನ್ಯಾ ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.