ಅನುಷ್ಠಾನಗೈದ ಮಂಜುಳಾತಾಯಿಗೆ ಭವ್ಯ ಸ್ವಾಗತ

ತಾಳಿಕೋಟೆ:ಸೆ.14:ಧರ್ಮದ ಆಚರಣೆಯಿಂದ ಸರ್ವಕಾಲ ಸರ್ವವಿದದಲ್ಲಿ ಶಾಂತಿಲಬಿಸುತ್ತದೆ ಎಂಬುದು ಆದಿಕಾಲದ ಇತಿಹಾಸದಿಂದ ಬಂದಂತ ವೇದವಾಖ್ಯವಾಗಿದೆ ಅಂತಹ ಶಾಂತಿ ನೆಮ್ಮದಿ ಸಾಕಾರಕ್ಕೆ ಕಾಲಕಾಲಕ್ಕೆ ಅವತರಿಸಿದ ಸಾವಿರಾರು ಮಹಾನ್ ಪುರುಷರು ಮಹಾಮಹಿಮರು ಶ್ರಮಿಸಿದವರಲ್ಲಿ ತಾಳಿಕೋಟೆ ಸಮಿಪದ ಬಳಗಾನೂರ ಗ್ರಾಮದ ಶರಣೆ ಮಂಜುಳಾತಾಯಿಯವರು ಇತ್ತಿಚಗೆ ಕಳೆದ ಜೂನ 10 ರಿಂದ ಹುಬ್ಬಳ್ಳಿಯಲ್ಲಿ ಲೋಕಕಲ್ಯಾಣಾರ್ಥವಾಗಿ ಅನುಷ್ಠಾನ ಪ್ರಾರಂಬಿಸಿ 3 ತಿಂಗಳ ಪರ್ಯಂತ ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರುಗಳ ಸಮ್ಮುಖದಲ್ಲಿ ಸಪ್ಟಂಬರ್ 7 ರಂದು ಮಂಗಲ ಕಾರ್ಯನೆರವೇರಿಸಿ ಭಕ್ತಿಭಾವ ಮೆರೆದಿದ್ದಾರೆ.

ಅನುಷ್ಠಾನ ಮಂಗಲ ಮಾಡಿಕೊಂಡು ದಿ. 12 ಸಪ್ಟಂಬರ್‍ರಂದು ಸ್ವಗ್ರಾಮಕ್ಕೆ ಬಳಗಾನೂರ ಗ್ರಾಮಕ್ಕೆ ಆಗಮಿಸಿದ ಮಾತೆ ಮಂಜುಳಾತಾಯಿಯ ಸ್ವಾಗತಕ್ಕೆ ಗ್ರಾಮದ ಇಡೀ ಭಕ್ತಸಮೂಹವೇ ಭಕ್ತಿಭಾವದೊಂದಿಗೆ ಸ್ವಾಗತಿಸಿಕೊಂಡಿದ್ದೇನು ಕಡಿಮೇನಿಲ್ಲಾ.

ಹುಬ್ಬಳ್ಳಿಯ ಮೂರು ಸಾವಿರಮಠದ ಜಗದ್ಗುರು ಗುರು ಸಿದ್ದರಾಜ ಯೋಗೇಂದ್ರ ಮಹಾಸ್ವಾಮಿಗಳ ದಿವ್ಯಸಾನಿದ್ಯದಲ್ಲಿ ಜರುಗಿದ ಈ ಸ್ವಾಗತ ಕಾರ್ಯಕ್ರಮದಲ್ಲಿ ಇಂಗಳೇಶ್ವರ ವಿರಕ್ತಮಠದ ಶ್ರೀ ಚನ್ನಬಸವ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆದ ಸ್ವಾಗತ ಕಾರ್ಯಕ್ರಮದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸುಮಂಗಲೆಯರ ಕುಂಬ ಮೇಳದೊಂದಿಗೆ ಆರತಿಗಳೊಂದಿಗೆ ಸ್ವಾಗತಿಸಿದ ಭಕ್ತ ಸಮೂಹ ನಂತರ ಶ್ರೀಗಳ ಜಗದ್ಗುರುಗಳಿಗೆ ಹಾಗೂ ಅನುಷ್ಠಾನಗೈದ ಶರಣೆ ಮಂಜುಳಾತಾಯಿಯವರಿಗೆ ಸನ್ಮಾನಿಸಿ ಗೌರವಿಸಿದರಲ್ಲದೇ ಶ್ರೀಗಳ ಆಶಿರ್ವಚನ ಆಲಿಸಿ ಪುನಿತರಾದರು.