ಅನುಷ್ಕಾಗೆ 39ನೇ ಹುಟ್ಟುಹಬ್ಬದ ಸಂಭ್ರಮ

ಹೈದಾರಬಾದ್, ನ ೭- ಬಹುಭಾಷ ನಟಿ ಅನುಷ್ಕಾ ಶೆಟ್ಟಿಗೆ ಇಂದು ೩೯ನೇ ಹುಟ್ಟುಹಬ್ಬದ ಸಂಭ್ರಮ.

೧೯೮೧ರ ನ. ೭ರಂದು ಮಂಗಳೂರಿನಲ್ಲಿ ಜನಿಸಿದ ಅನುಷ್ಕಾ, ಪ್ರಫುಲ್ಲ ಮತ್ತು ಎ.ಎನ್. ವಿಠಲ ಶೆಟ್ಟಿರವರ ಪುತ್ರಿ ಅನುಷ್ಕಾ ಬೆಂಗಳೂರಿನಲ್ಲಿ ಶಾಲಾ ವ್ಯಾಸಂಗವನ್ನು ಮತ್ತು ಸ್ನಾತಕೋತ್ತರ ಕಂಪ್ಯುಟರ್ ಅಪ್ಲಿಕೆಷನ್ಸನ್ನು ಮೌಂಟ್ ಕಾರ್ಮೆಲ್ ಕಾಲೇಜ್ ನಲ್ಲಿ ಮಾಡಿದರು.

೨೦೦೫ ರಲ್ಲಿ ತೆಲುಗು ಚಿತ್ರ ಸೂಪರ್ ಮೂಲಕ ಸಿನಿರಂಗಕ್ಕೆ ಪಾರ್ದಪಣೆ ಮಾಡಿದ ಅನುಷ್ಕಾ ಅವರು ವಿಕ್ರಮಾರ್ಕುಡು (೨೦೦೬), ಅರುಂಧತಿ (೨೦೦೯), ವೇದಂ (೨೦೧೦), ರುದ್ರಮಾದೇವಿ (೨೦೧೫) ಮತ್ತು ಬಾಹುಬಲಿ: ದಿ ಬಿಗಿನಿಂಗ್ ಎಂಬ ತೆಲುಗು ಚಲಚಿತ್ರಗಳಲ್ಲಿ ನಟಿಸಿ ಪ್ರಖ್ಯಾತಿ ಗಳಿಸಿದರು.

ಅರುಂಧತಿ (೨೦೦೯) ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ನಟಿಸಿ ವಿಮರ್ಶಾತ್ಮಕ ಮೆಚ್ಚುಗೆ ಲಭಿಸಿತು, ವೆದಂ ಚಿತ್ರದಲ್ಲಿ ಸರೋಜಳಾಗಿ ಮತ್ತು ರುದ್ರಮಾದೇವಿ ಚಿತ್ರದಲ್ಲಿ ರಾಣಿಯ ಪಾತ್ರ ಮೂರು ಫಿಲ್ಮ್ಫೇರ್, ಒಂದು ನಂದಿ ಮತ್ತು ಮೂರು ಸಿನಿಮಾ ಪ್ರಶಸ್ತಿಗಳನ್ನು ತಂದುಕೊಟ್ಟಿತ್ತು. ಇಂದು ಅರುಂಧತಿ ನಟಿಗೆ ಬಹುಭಾಷೆಯ ನಟನಟಿಯರು ಶುಭಾಶಯ ಕೋರಿದ್ದಾರೆ.