ಅನುಶ್ರೀ ಕೊಲೆ ಪ್ರಕರಣ:ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ, ಗಲ್ಲು ಶಿಕ್ಷೆ ವಿಧಿಸಿ

ಸಂಜೆವಾಣಿ ವಾರ್ತೆ,
ವಿಜಯಪುರ,ಏ.24:ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದ ಕು.ಅನುಶ್ರೀ ರಾಘವೇಂದ್ರ ಮಡಿವಾಳರ ಕೊಲೆ ಪ್ರಕರಣದ ಆರೋಪಿತಗಳನ್ನು ಪತ್ತೆ ಹಚ್ಚಿ ಗಲ್ಲು ಶಿಕ್ಷೆ ವಿಧಿಸಬೇಕು. ನೊಂದ ಕುಟುಂಬ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ಉತ್ತರ ಕರ್ನಾಟಕ ಮಡಿವಾಳ ಸಂಘದ ವಿಜಯಪುರ ಜಿಲ್ಲೆ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಮಡಿವಾಳ ಸಂಘದ ಪದಾಧಿಕಾರಿಗಳು ವಿಜಯಪುರ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಡಿವಾಳ ಸಂಘದ ಅಧ್ಯಕ್ಷÀ ಸಾಯಿಬಣ್ಣ ಮಡಿವಾಳರ ಮಾತನಾಡಿ, ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದ ಕು.ಅನುಶ್ರೀ ರಾಘವೇಂದ್ರ ಮಡಿವಾಳ, ಈಕೆಯು ಏ.19ರಂದು ಮನೆಯಿಂದ ಆಟವಾಡಲು ಹೊರಗೆ ಹೋಗಿ ಮನೆಗೆ ವಾಪಸ್ಸು ಮರಳಿ ಬಾರದ ಕಾರಣ ಆ ಬಾಲಕಿಯ ಪೆÇೀಷಕರು ಸಾಕಷ್ಟು ಹುಡುಕಿದ್ದು, ಸಿಗದ ಕಾರಣ ಪೊಲೀಸ್ ಠಾಣೆಗೆ ತೆರಳಿ ದೂರನ್ನು ನೀಡಿದ್ದರು. ಬಾಲಕಿಯನ್ನು ಕೊಲೆ ಮಾಡಿ ಗೋಣಿ ಚೀಲದಲ್ಲಿ ಎಸೆದ ಶವ ಪತ್ತೆಯಾಗಿದೆ. ಕೊಲೆ ಮಾಡಿದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಕೊಲೆಯಾದ ಕು.ಅನುಶ್ರೀ ನೊಂದ ಕುಟುಂಬದವರಿಗೆ ನ್ಯಾಯ ದೊರಕಿಸಿಕೊಡಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿದೆ. ಸಾರ್ವಜನಿಕರು ಭಯಭೀತರಾಗಿದ್ದಾರೆ. ಹಳ್ಳಿಯಲ್ಲಿ ಪೊಲೀಸರ ಗಸ್ತು ಇಲ್ಲ. ಇನ್ನಾದರೂ ಎಚ್ಚೆತ್ತು ಪೊಲೀಸ ಇಲಾಖೆಯು ರಾಜ್ಯಾದ್ಯಂತ ಪೊಲೀಸರ ಗಸ್ತನ್ನು ಹೆಚ್ಚಿಸಬೇಕಾಗಿದೆ. ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಹದ್ದಿನ ಕಣ್ಣಿಡಬೇಕು. ಸಾರ್ವಜನಿಕರಿಗೆ ಭಯಭೀತರಾಗದಂತೆ ರಕ್ಷಣೆ ಒದಗಿಸಿ ಕಾನೂನು ಸುವ್ಯವಸ್ಥೆ ಕಲ್ಪಿಸಬೇಕು. ಇಂಥ ಘಟನೆಗಳು ಮರು ಕಳಿಸದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಅವರು ಆಗ್ರಹಿಸಿದರು.
ಸರ್ಕಾರ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ವಿಳಂಬವಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಬಾಬು ಪಿ. ಬಳ್ಳಾರಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಮುತ್ತಪ್ಪ ಪಿ. ಮಡಿವಾಳರ, ಶಿವಪ್ಪ ಹುಬ್ಬಳ್ಳಿ, ಪ್ರಭು ಮಡಿವಾಳರ, ಐ.ಡಿ. ಅಗಸರ, ಷಣ್ಮುಖ ಮಡಿವಾಳರ, ಪರಸು ಮಲಕನವರ, ಮಲಕಪ್ಪ ಹುಬ್ಬಳ್ಳಿ, ಶಿವಕುಮಾರ ಪರೀಟ, ಶಿವಪ್ಪ ಎಲ್. ಮಡಿವಾಳರ, ಗಿರೀಶ ಅಗಸರ, ಈಶ್ವರ ಎಸ್. ಅಗಸರ, ಶ್ರೀಶೈಲ ಅಗಸರ, ವಿರುಪಾಕ್ಷ ಮಡಿವಾಳರ, ಮಡಿವಾಳಪ್ಪ ಅಗಸರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.