ಅನುವಾದ ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬದಂತೆ


ಸಂಜೆವಾಣಿ ವಾರ್ತೆ
ಹೊಸಪೇಟೆ, ಏ.07: ಅನುವಾದ ಕೃತಿಗಳು ಮೂಲ ಲೇಖಕನ ಜ್ಞಾನದ ಮಗುವಾದರೆ, ಅನುವಾದಕನ ದೆಸೆಯಿಂದ ಬೇರೆ ಭಾಷೆಯೊಳಗಿನ ಕನ್ನಡಿಯಲ್ಲಿ ಕಾಣುವ ಆ ಮಗುವಿನ ಪ್ರತಿಬಿಂಬವಾಗಿದೆ ಎಂದು ಸಂಶೋಧನ ವಿದ್ಯಾರ್ಥಿ ಬಾಣದ ಲಕ್ಷ್ಮಿ ತಿಳಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದಲ್ಲಿ ಹಮ್ಮಿಕೊಂಡಿದ್ದ ‘ವ್ಯಾಖ್ಯಾನ’ ಸಂಶೋಧನಾ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಗುರುಮೂರ್ತಿ ಪೆಂಡಕೂರು ಅವರ ಗರಿಗಳು ಕವನ ಸಂಕಲನ ಕನ್ನಡನುವಾದ ಕೃತಿಯ ವಿಶ್ಲೇಷಣೆಯ ಕುರಿತು ಉಪನ್ಯಾಸ ನೀಡಿದ ಅವರು ‘ಗರಿಗಳು’ ಹೊಸದೊಂದು ದೇಸಿ ಕವಿತ ಪ್ರಕ್ರಿಯೆಯಾಗಿದ್ದು ಪ್ರಸಿದ್ಧ ಜಪಾನಿ ಕಾವ್ಯ ಪ್ರಕಾರವಾದ ‘ಹೈಕು’ಗಳಲ್ಲಿನ ಸೊಗಸು ಅನುಭವ ಮತ್ತು ಕ್ರಮವನ್ನು ಅಳವಡಿಸಿಕೊಂಡು ರಚಿತವಾದ ಕವನ ಸಂಕಲನವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರಮೇಶ್ ಬಿಜಿ ಅವರು ಸಮಯದ ಪ್ರಜ್ಞೆ ಇಲ್ಲದಿದ್ದರೆ ಮನುಷ್ಯ ಅನಾಗರಿಕನಾಗುತ್ತಾನೆ. ಪ್ರಜ್ಞೆ ಮನುಷ್ಯನ ಜೀವನದಲ್ಲಿ ಬಹಳ ಮುಖ್ಯವಾಗುತ್ತದೆ ಎಂದು ಗರಿಗಳ ಕವನಗಳು ಹೇಳುತ್ತವೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥರಾದ ಡಾ. ಎ ಮೋಹನ ಕುಂಟಾರ್ ಅವರು ಹಾಗು ವಿಭಾಗದ ಮತ್ತು ಇತರ ವಿಭಾಗದ ಸಂಶೋಧನಾರ್ಥಿಗಳು ಉಪಸ್ಥಿತರಿದ್ದರು.

One attachment • Scanned by Gmail