ಅನುರಾಗ್ ಮೊದಲ ಭೇಟಿ ಖುರೇಷಿ ನೆನಪು

ಮುಂಬೈ, ಸೆ ೧೦- ಬಾಲಿವುಡ್ ನಟಿ ಹುಮಾ ಖುರೇಷಿ ಇತ್ತೀಚೆಗೆ ನಿರ್ದೇಶಕ ಅನುರಾಗ್ ಕಶ್ಯಪ್ ಅವರೊಂದಿಗಿನ ಮೊದಲ ಭೇಟಿಯ ಬಗ್ಗೆ ಹಂಚಿಕೊಂಡಿದ್ದಾರೆ.
ಅನುರಾಗ್ ಅವರ ನಿರ್ದೇಶನದ ಗ್ಯಾಂಗ್ಸ್ ಆಫ್ ವಾಸೇಪುರ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ನಟಿ, ಚಿತ್ರಕ್ಕಾಗಿ ಆಡಿಷನ್ ಕೂಡ ಮಾಡಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಅನುರಾಗ್ ಕಶ್ಯಪ್ ಅವರೊಂದಿಗಿನ ಮೊದಲ ಭೇಟಿಯನ್ನು ನೆನಪಿಸಿಕೊಂಡ ಹುಮಾ ಖುರೇಷಿ ಅವರು ‘ತು ಪಾಗಲ್ ಹೈ ಕ್ಯಾ’ ಎಂದು ಹೇಳಿದ್ದರಂತೆ
ಬಾಲಿವುಡ್ ಚಿತ್ರೋದ್ಯಮದಲ್ಲಿ ನಟಿಯಾಗಿ ಬ್ರೇಕ್ ಪಡೆಯಲು ಪ್ರಯತ್ನಿಸುತ್ತಿರುವಾಗ ಹುಮಾ ಹಲವಾರು ಜಾಹೀರಾತುಗಳಿಗೆ ಚಿತ್ರೀಕರಿಸಿದರು. ಅನುರಾಗ್ ಕಶ್ಯಪ್ ಅವರು ಅಮೀರ್ ಖಾನ್ ಎದುರು ಸ್ಯಾಮ್ಸಂಗ್ ಮೊಬೈಲ್ಗಾಗಿ ಜಾಹೀರಾತಿನಲ್ಲಿ ಅವರನ್ನು ನಿರ್ದೇಶಿಸುತ್ತಿರುವಾಗ ಅವರ ಪ್ರತಿಭೆಯನ್ನು ಗುರುತಿಸಿದರು. ಆಕೆಯನ್ನು ಚಿತ್ರದಲ್ಲಿ ನಟಿಸುವ ಅವಕಾಶ ಕೊಡವ ಭರವಸೆ ನೀಡಿದರೂ ಆಕೆ ನಂಬಲು ನಿರಾಕರಿಸದ್ದರ ಬಗ್ಗೆ ಹೇಳಿಕೊಂಡಿದ್ದಾರೆ.
ಇತ್ತೀಚಿನ ಸಂದರ್ಶನದಲ್ಲಿ, ಹುಮಾ ಈ ಬಗ್ಗೆ ಮಾತನಾಡಿ ಅಂದುನಾಲ್ಕು ದಿನಗಳ ಚಿತ್ರೀಕರಣವಾಗಿತ್ತು. ಮತ್ತು ನಾವು ಎರಡನೇ ದಿನದಲ್ಲಿ ಶೂಟಿಂಗ್ ಮಾಡುತ್ತಿದ್ದೆವು, ಅನುರಾಗ್ ಅವರು ಚಿತ್ರದಲ್ಲಿ ನಟಿಸುವ ಬಗ್ಗೆ ಮಾತನಾಡಿದರು. ನಾನು ಈಗಷ್ಟೇ ಬಾಂಬೆಗೆ ಬಂದಿದ್ದೇನೆ. ನೀವು ತುಂಬಾ ಕಷ್ಟಪಡಬೇಕು ಎಂದು ಹೇಳಿದ್ದರಂತೆ
ನಾನು ಅದೃಷ್ಟಶಾಲಿ. ನನ್ನ ಹೋರಾಟದ ಅವಧಿ ತುಂಬಾ ದೀರ್ಘವಾಗಿರಲಿಲ್ಲ. ನಾನು ಹಾಗೆ ಆಶೀರ್ವದಿಸಿದ್ದೇನೆ. ನನಗೆ ಮೊದಲ ಚಿತ್ರವು ತುಂಬಾ ಸುಲಭವಾಗಿ ಸಿಕ್ಕಿತು, ಮತ್ತು ನಂತರದ ೪-೫ ಚಿತ್ರಗಳು ಸಹ ನನಗೆ ಬಹಳ ಸುಲಭವಾಗಿ ಸಿಕ್ಕಿತು. ಎಂದು ನೆನೆಸಿಕೊಂಡಿದ್ದಾರೆ
ಹುಮಾ ಈ ವರ್ಷ ಹಿಂದಿ ಚಿತ್ರರಂಗದಲ್ಲಿ ಒಂದು ದಶಕ ಪೂರೈಸಿದ್ದಾರೆ. ಅವರು ಕೊನೆಯ ಬಾರಿಗೆ ಸೋನಿ ಐIಗಿ ಶೋ ಮಹಾರಾಣಿಯ ಎರಡನೇ ಸೀಸನ್ನಲ್ಲಿ ಕಾಣಿಸಿಕೊಂಡರು. ಸೋನಾಕ್ಷಿ ಸಿನ್ಹಾ ಅವರೊಂದಿಗೆ ಡಬಲ್ ಎಕ್ಸ್‌ಎಲ್ನಲ್ಲಿ ಮತ್ತು ಮೃಣಾಲ್ ಠಾಕೂರ್ ಅವರೊಂದಿಗೆ ಪೂಜಾ ಮೇರಿ ಜಾನ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.