ಅನುಮಾನಾಸ್ಪದ ರೀತಿಯಲ್ಲಿ ವೃದ್ಧನ ಶವ ಪತ್ತೆ

ವಿಜಯಪುರ:ಡಿ.3: ಅನುಮಾನಾಸ್ಪದ ರೀತಿಯಲ್ಲಿ ವೃದ್ಧನೊಬ್ಬನ ಶವ ಪತ್ತೆಯಾಗಿರುವ ಘಟನೆ ನಗರದ ಕೆಎಚ್‍ಬಿ ಕಾಲೋನಿಯಲ್ಲಿ ನಡೆದಿದೆ.

ಇಲ್ಲಿನ ಮುರಾಣಕೇರಿಯ ಚಂದ್ರಶೇಖರ ಗುರುಪಾದಪ್ಪ ಖ್ಯಾಡಿ (67) ಸಾವಿಗೀಡಾದ ವೃದ್ಧ.

ಚಂದ್ರಶೇಕರ ಖ್ಯಾಡಿ ಈತ ಬೆಂಗಳೂರು ರಸ್ತೆ ಬಳಿಯ ಕಿಯಾ ಕಾರ್ ಶೋರೂಮ್‍ನಲ್ಲಿ ಸೆಕ್ಯುರಿಟಿ ಗಾರ್ಡ್ ಎಂದು ಕೆಲಸ ಮಾಡುತ್ತಿದ್ದ, ಕಳೆದ ನಾಲ್ಕೈದು ದಿನಗಳಿಂದ ಮನೆಗೂ ತೆರಳಿರಲಿಲ್ಲ. ಕುಡಿದು ನಶೆಯಲ್ಲಿ ಎಲ್ಲಿಗೂ ತೆರಳಿರಬಹುದು ಎಂದು ಮನೆಯವರು ಭಾವಿಸಿದ್ದರು. ಸದ್ಯ ದೇಹ ತುಂಡಾದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ದುಷ್ಕರ್ಮಿಗಳು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಡಿವೈಎಸ್‍ಪಿ ಬಸವರಾಜ ಯಲಿಗಾರ ಸೇರಿದಂತೆ ಜಲನಗರ ಪಿಎಸ್‍ಐ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ಸಂಬಂಧ ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.