ಅನುಮಾನಾಸ್ಪದವಾಗಿ ವ್ಯಕ್ತಿ ಸಾವು

ದೇವದುರ್ಗ,ಮೇ.೨೬-
ತಾಲೂಕಿನ ಸುಂಕೇಶ್ವರಹಾಳ ಹಿರೇಬೂದೂರು ನಡುವಿನ ರಸ್ತೆಯಲ್ಲಿ ವ್ಯಕ್ತಿಯೊಬ್ಬರ ಶವ ಗುರುವಾರ ಬೆಳಗ್ಗೆ ಪತ್ತೆಯಾಗಿದೆ. ಮಸಿಹಾಳ ಗ್ರಾಮದ ಲಾಲ್‌ಸಾಬ್ ಖಾಜಾಸಾಬ್ (೩೩) ಎಂದು ಪೊಲೀಸರು ಗುರುತಿಸಿದ್ದಾರೆ.
ರಸ್ತೆ ಪಕ್ಕದಲ್ಲಿ ಬೈಕ್ ಪತ್ತೆಯಾಗಿದ್ದು ಮೃತ ದೇಹ ರಸ್ತೆ ಮೇಲೆ ಬಿದ್ದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಎಸ್ಪಿ ಬಿ.ನಿಖಿಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ಕೈಗೊಂಡಿದ್ದಾರೆ. ಗಬ್ಬೂರು ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆಸಿದೆ.