ಮಾನ್ವಿ,ಜೂ.೨೫-
ಪಟ್ಟಣದ ವಾರ್ಡ್ ನಂ ೧೬ ರ ನಿವಾಸಿಯಾಗಿದ್ದ ಸುಬ್ರಮಣ್ಯ ತಂದೆ ಅಮರೇಶ ನೇಕಾರ (೩೩) ಅನುಮಾನಾತ್ಮಕವಾಗಿ ಹೀರೆಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದು ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳುತ್ತಿದೆ ಎಂದು ಪಿ.ಐ ವೀರಭದ್ರಯ್ಯ ಸ್ವಾಮಿ ಹಿರೇಮಠ ತಿಳಿಸಿದ್ದಾರೆ.
ಪಟ್ಟಣದ ನೀಲಕಂಠೇಶ್ವರ ದೇವಾಲಯ ಮುಂಭಾಗದಲ್ಲಿ ಒಂದು ಪುಟ್ಟ ಅಂಗಡಿಯನ್ನಿಟ್ಟುಕೊಂಡು ಜೀವನ ಸಾಗಿಸುತ್ತಿದ್ದ ವ್ಯಕ್ತಿಯು ಕಳೆದ ಎರಡ್ಮೂರು ದಿನಗಳಿಂದ ನಾಪತ್ತೆಯಾಗಿದ್ದ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದು, ಈ ಸಾವಿಗೆ ನಿಖರವಾದ ಮಾಹಿತಿ ತಿಳಿದುಬಂದಿಲ್ಲ, ಶವವನ್ನು ನೀರಿನಿಂದ ಮೇಲೆತ್ತಿ ಮರಣೋತ್ತರ ಪರೀಕ್ಷೆಗಾಗಿ ಕಳಿಸಲಾಗಿದ್ದು ಅದರ ವರದಿ ಬಂದ ನಂತರವೇ ನಿಖರವಾದ ಮಾಹಿತಿ ದೊರಕುತ್ತದೆ ಎಂದು ಪೋಲಿಸರು ಮಾಹಿತಿ ನೀಡಿದ್ದು, ಮೃತನಿಗೆ ಮದುವೆಯಾಗಿ ಮಕ್ಕಳಿದ್ದು ಪತ್ನಿ ಮೃತಳಾಗಿದ್ದಾಳೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.