ಅನುಮತಿ ಪಡೆಯದೆ ಸಾವಿರಾರು ಲೋಡ್ ಮಣ್ಣು ಸಾಗಾಟ;ಕೆರೆ ಒಡಲು ಆಗೆತದಿಂದ ಅಪಾಯಕ್ಕೆ ಆಹ್ವಾನ

 

ಸಂಜೆವಾಣಿ ವಾರ್ತೆ

ಜಗಳೂರು.ಮಾ.೨೭; ಪಟ್ಟಣಕ್ಕೆ ಹೊಂದಿಕೊಂಡಿರುವ ಕೆರೆ ಒಡಲಲ್ಲಿ ನೀತಿ ನಿಯಮ ಗಾಳಿಗೆ ತೂರಿ ಮಣ್ಣು ಆಗೆದಿದ್ದರು ಕಂದಾಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ, ಕೆರೆಯಲ್ಲಿ ಮಣ್ಣು ಆಗೆದಿರುವ ಪರಿಣಾಮ ಬೃಹತ್ ಗುಂಡಿಗಳು ಸೃಷ್ಟಿಯಾಗಿ ಅವಾಂತರಗಳಿಗೆ ದಾರಿ ಮಾಡಿಕೊಟ್ಟಿದ್ದು, ಮಣ್ಣು ಆಗೆದಿರುವ ಕುರಿತು ತಾಲೂಕು ಆಡಳಿತ ಮೌನವಾಗಿದ್ದು, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪ ವಿಭಾಗದಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಮಣ್ಣು ಆಗೆದವರ ಮೇಲೆ ದೂರು ದಾಖಲಿಸಿದೆ.ಪಟ್ಟಣದ ಹೊರವಲಯದ ಕೆರೆಯಲ್ಲಿ ಮಣ್ಣನ್ನು ಖಾಸಗಿ ಜಮೀನಿನಲ್ಲಿ ಖಾಸಗಿಯಾಗಿ ಬೃಹತ್ ವಾಹನಗಳಲ್ಲಿ ಜೆಸಿಬಿ ಇಟ್ಟು, ಕೆರೆಯ ಒಡಲು ಬಗೆದು 2000 ಕ್ಕೂ ಹೆಚ್ಚು ಬೃಹತ್ ಲಾರಿ ಲೋಡ್‌ಗಳಷ್ಟು ಯಾವುದೇ ಅನುಮಾತಿ ಪಡೆಯದೆ, ನೀತಿ ನಿಯಮ ಪಾಲಿಸದೆ ಮನಸ್ಸೋ ಇಚ್ಚಯಂತೆ ಮಣ್ಣು ಅಗೆದು ಸಾಗಿಸಿ ಅನಾಹುತಗಳಿಗೆ ಎಡೆ ಮಾಡಿಕೊಟ್ಟಿದ್ದರು ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರಿಗೆ ಅನುಮಾನ ಮೂಡಿಸಿದೆ.2000 ಕ್ಕೂ ಹೆಚ್ಚು ಲಾರಿ ಲೋಡ್ ಮಣ್ಣು ಕೆರೆಯ ಒಡಲು ಆಗೆದು ತೆಗೆದರು ತಾಲೂಕು ದಂಡಾಧಿಕಾರಿಗಳು ಮತ್ತು ಕಂದಾಯ ನೀರಿಕ್ಷಕರು ಅಧಿಕಾರಿಗಳು ಗಮನಹರಿಸಿಲ್ಲ ಅಲ್ಲದೆ ಸಾರ್ವಜನಿಕ ವಲಯದಲ್ಲಿ ಕಂದಾಯ ನಿರೀಕ್ಷಕರು ಮಣ್ಣು ಆಗೆಯುವುದಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತವೆ.