ಅನುಮತಿ ಇಲ್ಲದೇ ಸರ್ಕಾರಿ ಕಟ್ಟಡ ನೆಲಸಮಕ್ಕೆ ಆದೇಶ; ಕ್ರಮಕ್ಕೆ‌ ಆಗ್ರಹ

ಸಂಜೆವಾಣಿ ವಾರ್ತೆ

ಹೊನ್ನಾಳಿ.ಜು.೯: ಸುಮಾರು 40 ಲಕ್ಷ ಮೌಲ್ಯ ಬೆಲೆ ಬಾಳುವ ಹಾಗೂ ಇನ್ನೂ 30 ವರ್ಷ ಯಾವುದೇ ಹಾನಿಯಾಗದ ಎರಡು ಸರ್ಕಾರಿ ಕಟ್ಟಡವನ್ನು ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳ ಪೂರ್ವಾನುಮತಿ ಪಡೆಯದೆ ಹಾಗೂ ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿ ಕಟ್ಟಡಗಳನ್ನು ನೆಲಸಮ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿರುವ ಗ್ರಾ.ಪಂ. ಅಧ್ಯಕ್ಷ,ಉಪಾದ್ಯಕ್ಷೆ ಹಾಗೂ ಸದಸ್ಯರು ಸೇರಿ ಒಟ್ಟು 11 ಜನರನ್ನು ಕೂಡಲೇ ಬಂಧಿಸಿ ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಕುಂದೂರು ಪ್ರಸನ್ನಕುಮಾರ್ ಕುಂದೂರು ಗ್ರಾ.ಪಂ. ಕಚೇರಿ ಮುಂಭಾಗ ಕಳೆದ ನಾಲ್ಕು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಾಡ ಕಚೇರಿ ಕಟ್ಟಡ ನೆಲಸಮಕ್ಕೆ ಸಂಬಂಧಿಸಿದಂತೆ ಯಾವುದೇ ಸರ್ಕಾರದ ಸುತ್ತೋಲೆಗಳ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ,ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಒಟ್ಟು ಮೂರು ಬಾರಿ ಕಟ್ಟಡ ನಾಶ ಪಡಿಸಿರುವ ಗ್ರಾ.ಪಂ. ಅಧ್ಯಕ್ಷ,ಉಪಾಧ್ಯಕ್ಷೆ,ಹಾಗೂ 11 ಜನ ಸದಸ್ಯರು ಸೇರಿ ಒಟ್ಟು 11 ಜನರ ವಿರುದ್ದ ಕ್ರಮ ಜರುಗಿಸುವಂತೆ ಆಗ್ರಹಿಸಿ ತಾ.ಪಂ.ಇಒ,ಜಿ.ಪA.ಸಿಇಒ ಹಾಗೂ ಆರ್‌ಡಿಪಿಆರ್ ಪ್ರಿನ್ಸಿಪಾಲ್ ಸಕ್ರೆಟ್ರಿಗಳಿಗೆ ದೂರು ನೀಡಿದ್ದರೂ ಏನು ಪ್ರಯೋಜನ ಆಗದೆ ಇದ್ದದ್ದರಿಂದ ನಾನು ಕ್ರಮಕ್ಕೆ ಒತ್ತಾಯಿಸಿ ಆಹೋರಾತ್ರಿ ಧರಣಿ ನಡೆಸುತ್ತಿದ್ದೇನೆ ಎಂದು ಅವರು ಆರೋಪಿಸಿದರು.ಸರ್ಕಾರದ ಎರಡು ಕಟ್ಟಡಗಳನ್ನು ನೆಲಸಮ ಮಾಡಿರುವ ಗ್ರಾ.ಪಂ. ಆಡಳಿತ ಮಂಡಳಿಯ 11 ಜನರ ವಿರುದ್ದ ಕರ್ನಾಟಕ ಗ್ರಾಮ ಸ್ವಾರಜ್,ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕಾರ 157(2),246(8) ರ ಪ್ರಕಾರ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.ಸಾಮಾಜಿಕ ಕಾರ್ಯಕರ್ತ ಪ್ರಸನ್ನಕುಮಾರ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಗ್ರಾ.ಪಂ.ಅಧ್ಯಕ್ಷ ರಹಮತ್ ಉಲ್ಲಾಖಾನ್, ಹೊನ್ನಾಳಿ ತಹಸೀಲ್ದಾರ್ ಪತ್ರವೊಂದನ್ನು ಬರೆದು ಗ್ರಾ.ಪಂ. ವ್ಯಾಪ್ತಿಗೆ ಸೇರಿದ ನಾಡಕಚೇರಿ ಶಿಥಿಲಗೊಂಡಿದ್ದು,ಆ ಕಟ್ಟಡವನ್ನು ಮರು ನಿರ್ಮಾಣ ಮಾಡಬೇಕಾಗಿರುವುದರಿಂದ ಕೂಡಲೆ ಅದೇ ಜಾಗದಲ್ಲಿ ನೂತನ ನಾಡ ಕಚೇರಿ ನಿರ್ಮಾಣಕ್ಕೆ ತಮ್ಮ ಆಡಳಿತ ಮಂಡಲಿ ಅವಕಾಶ ಮಾಡಿಕೊಡಬೇಕೆಂದು ಪತ್ರ ಬರೆದಿದ್ದರು,ಅದರಂತೆ ಅಂಧಿನ ಗ್ರಾ.ಪಂ.ಅಧ್ಯಕ್ಷ ಚಿದಾನಂದಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಹೊನ್ನಾಳಿ ತಹಸೀಲ್ದಾರ್ ಅವರು ಗ್ರಾ.ಪಂ.ಗೆ ಬರೆದ ಪತ್ರದ ಬಗ್ಗೆ ಚರ್ಚಿಸಿ ಸದರಿ ಗ್ರಾ.ಪಂ.ನ ವ್ಯಾಪ್ತಿಯಲ್ಲಿರುವ ನಾಡಕಚೇರಿಯ ಕಟ್ಟಡ ನಿರ್ಮಾಣ ಮಾಡಲು ಇಲಾಖೆ ನಿಯಾಮಾನುಸಾರ ಹಸ್ತಾಂತರ ಮಾಡಿಕೊಡಲು ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸಭೆಯಲ್ಲಿ ಚರ್ಚಿಸಲಾಯಿತು, ಇದನ್ನು ಹೊರತುಪಡಿಸಿ ನಾಡಕಚೇರಿ ನೆಲಸಮ ಮಾಡಿರುವುದಕ್ಕೂ ನಮಗೂ ಸಂಬAಧವಿಲ್ಲ ಎಂದು ಅವರು ವಿವರಿಸಿದರು.ಧರಣಿಯಲ್ಲಿ ಸುಜ್ಞಾನಮೂರ್ತಿ ಇದ್ದರು.