ಅನುಮತಿ ಇಲ್ಲದೆ ಆರಂಭಿಸಿದಸತ್ಯಂ ಇಂಟರ್ ನ್ಯಾಷನಲ್ ಶಾಲೆಗೆ ಬೀಗ

(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಆ.10: ಇಲ್ಲಿನ ಪಾರ್ವತಿ ನಗರದಲ್ಲು ಸತ್ಯಂ ಇಂಟರ್ನ್ಯಾಷನಲ್ ಸಂಸ್ಥೆ ಆರಂಭಿಸಿದ್ದ ಪೂರ್ವ ಪ್ರಾಥಮಿಕ ಶಾಲೆ “ಟಿನಿ ಟಾಟ್ಸ್” ಗೆ ನಿನ್ನೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಬೀಗ ಜಡಿದಿದ್ದಾರೆ.ನಗರದಲ್ಲಿ ಅನುಮತಿ ಇಲ್ಲದೆ, ನಕಲಿ ದಾಖಲೆ ನೀಡಿ ಖಾಸಗಿ ಸಂಸ್ಥೆಗಳ ಶಾಲಾ ಕಾಲೇಜುಗಳು ನಡೆಯುತ್ತಿದ್ದರೂ, ವಿಚಿತ್ರ ಎಂದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮಾತ್ರ ಇದು ಗೊತ್ತಿರುವುದಿಲ್ಲ. ಇಂತಹುಗಳನ್ನು ಪತ್ತೆ ಹಚ್ಚಿ  ಇಲಾಖೆಗಳ ಗಮನಕ್ಕೆ ತರುವ ಕಾರ್ಯವನ್ನು ನಗರದ ನವ ಕರ್ನಾಟಕ ಯುವಶಕ್ತಿ ಸಂಘದವರು ತರುವ ಕಾರ್ಯ ನಡೆದಿದೆ. ಇತ್ತೀಚೆಗೆ ವಿಜಯವಾಡ ಶ್ರೀಚೈತನ್ಯ ಪಿಯು ಕಾಲೇಜು ನಕಲಿ ದಾಖಲೆ ಸಲ್ಲಿಸಿ. ಅನುಮತಿ ಒಂದು ಕಡೆ ಪಡೆದು ಮತ್ತೊಂದು ಕಡೆ  ಕಾಲೇಜನ್ನು ನಡೆಸುತ್ತಿರುವ ಬಗ್ಗೆ ಪತ್ತೆ ಹಚ್ಚಿ ದೂರು ನೀಡಿ. ಕ್ರಮಕ್ಕೆ ಪ್ರಕ್ರಿಯೆ ನಡೆಯುವಂತೆ ಮಾಡಿದ್ದರು.ಈಗ ಇಲ್ಲಿನ ಪಾರ್ವತಿ ನಗರದಲ್ಲಿ ಸತ್ಯಂ ಇಂಟರ್ ನ್ಯಾಶನಲ್ ಸಂಸ್ಥೆಯ “ಟೆನಿ ಟಾಟ್ಸ್” ಪೂರ್ವ ಪ್ರಾಥಮಿಕ ಶಾಲೆಯನ್ನು ಶಿಕ್ಷಣ ಇಲಾಖೆಯ ಅನುಮತಿ ಇಲ್ಲದೆಯೇ ಆರಂಭಿಸಿ ನೂರಕ್ಕೂ ಹೆಚ್ಚು ಮಕ್ಕಳಿಗೆ ಪ್ರವೇಶ ನೀಡಿದ್ದಾರೆ.ಶಾಲೆ ಆರಂಭಿಸಲು ಜೂನ್ 14 ಕ್ಕೆ ಕುರುಗೋಡಿನ ಬಿಈಓ ಕಚೇರಿಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಸೂಕ್ತ ದಾಖಲೆ ಇಲ್ಲದ ಕಾರಣ ಅರ್ಜಿ ತಿರಸ್ಕರಿಸಲಾಗಿದೆ. ಆದರೂ ಶಾಲೆ ಆರಂಭಿಸಿದ್ದಾರೆ.ಶಾಲೆ ಆರಂಭವಾಗಿ ಎರೆಡು ತಿಂಗಳಾದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾತ್ರ ಕಣ್ಣು ಮಯಚ್ಚಿ ಕೂತಿದ್ದರು ಎಂದರೆ ಏನು ಅರ್ಥ.  ಸಾವಿರಾರು ರೂಪಾಯಿ ಶುಲ್ಕ ಪಡೆದು ನಡೆಸುವ ಇಂತಹ ಖಾಸಗಿ ಶಾಲೆಗಳನ್ನು ತಡೆಯಲ್ಲ ಎಂದರೆ ಭ್ರಷ್ಟಾಚಾರ ಅಲ್ಲದೆ ಮತ್ತೇನು ಎನ್ನುವಂತಾಗಿದೆ.ಇದನ್ನು ಅರಿತ ಈ ಬಗ್ಗೆ ನವ ಕರ್ನಾಟಕ ಯುವ ಶಕ್ತಿ ಸಂಘಟನೆ ದೂರು ನೀಡಿದ ಮೇಲೆ. ನಿನ್ನೆ ಶಾಲೆಗೆ  ಶಿಕ್ಷಣ ಇಲಾಖೆಯ ಸಂಯೋಜಕರಾದ ಎಸ್. ಭುಜಂಗಾಚಾರ್,  ಸಿಆರ್ಪಿ ಶ್ರೀನಿವಾಸ್ ಮತ್ತು ಬಿಆರ್ಪಿ  ಶಿವಮ್ಮ‌ ಅವರು  ಸಂಘಟನೆಯ  ಮುಖಂಡರುಗಳಾದ  ಸಿದ್ಮಲ್ ಮಂಜುನಾಥ, ಎಂ.ದೇವೇಶ್, ಮುಂಡಾಸದ ಮಲ್ಲಿಕಾರ್ಜುನ, ಎಸ್.ಸಂತೋಷ್ ಕುಮಾರ್ ಮೂದಲಾದವರೊಂದಿಗೆ ತೆರಳಿ  ಅನುಮತಿ ಇಲ್ಲದೆ ಶಾಲೆ ನಡೆಸುತ್ತಿರುವುದನ್ನು ಕಂಡು. ಮಕ್ಕಳನ್ನು ಪೋಷಕರೊಂದಿಗೆ  ಶಾಲೆಯಿಂದ ಹೊರ ಕಳುಹಿಸಿ ಬೀಗ ಹಾಕಿದ್ದಾರೆ. ಶಾಲೆ ನಡೆಸಲು ಅರ್ಜಿ ಸಲ್ಲಿಸಿದ್ದರು. ಸೂಕ್ತ ದಾಖಲೆ ಇಲ್ಲದ ಕಾರಣ ಈ ಹಿಂದಿನ ಬಿಈಓ ತಿರಸ್ಕರಿಸಿದ್ದಾರೆ. ಈಗ ನಾನು ಪರಿಶೀಲಿಸಿ ಸೂಕ್ತ ದಾಖಲೆ ನೀಡಿದರೆ ಅನುಮತಿ‌ ನೀಡಲಿದೆ. ಇಲ್ಲದಿದ್ದರೆ ಶಾಲೆಯನ್ನು ಮುಚ್ಚಿಸಲಿದೆಸಿದ್ದಲಿಂಮೂರ್ತಿ, ಬಿಈಓ ಬಳ್ಳಾರಿ ಪಶ್ಚಿಮ.