ಅನುಮತಿಯಿಲ್ಲದೆ ದೇಶ ತೊರೆಯಬೇಡಿ ರಾಜಪಕ್ಸೆ ಕುಟುಂಬಕ್ಕೆ ಸುಪ್ರೀಂ ಆದೇಶ

ಕೊಲಂಬೊ,ಜು. 15-ಅನುಮತಿಯಿಲ್ಲದೆ ದೇಶಬಿಟ್ಟು ಹೋಗುವಂತಿಲ್ಲ ಎಂದು ರಾಜಪಕ್ಸೆ ಸುಪ್ರೀಂಕೋರ್ಟ್ ಇಂದು ಆದೇಶಿಸಿದೆ.
ದೇಶದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ತಲೆದೋರಿದ್ದು ಜನಸಕ್ರೋಶಕ್ಕೆ ಬೆಚ್ಚಿಬಿದ್ದು ಗೊಟಬಯ ರಾಜಪಕ್ಸೆ ವಿದೇಶಕ್ಕೆ ಪಲಾಯನ ಮಾಡಿದ್ದ ಬೆನ್ನಲ್ಲೇ ‌ಈ ಆದೇಶ ಹೊರಬಿದ್ದಿದೆ.
ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಮತ್ತು ಮಾಜಿ ಸಚಿವ ಬಸಿಲ್ ರಾಜಪಕ್ಸೆ ಅವರು ನ್ಯಾಯಾಲಯದ ಅನುಮತಿಯಿಲ್ಲದೆ ಜುಲೈ 28 ರವರೆಗೆ ದೇಶವನ್ನು ತೊರೆಯದಂತೆ ಶ್ರೀಲಂಕಾದ ಸುಪ್ರೀಂ ಕೋರ್ಟ್ ಇಂದು ಮಧ್ಯಂತರ ಆದೇಶ ಹೊರಡಿಸಿದೆ.
ಗೊಟಬಯ ರಾಜಪಕ್ಸೆ ಸಹೋದರರಾದ ಶ್ರೀಲಂಕಾ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಹಾಗೂ ಮಾಜಿ ಸಚಿವ ಬಸಿಲ್‌ ರಾಜಪಕ್ಸೆ ದೇಶ ತೊರೆಯುವುದನ್ನು ಕೋರ್ಟ್‌ ತಡೆದಿದೆ.
ದ್ವೀಪ ರಾಷ್ಟ್ರದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ರಾಜಪಕ್ಸೆ ಕುಟುಂಬ ಆಡಳಿತದಿಂದ ದೇಶ ದುಸ್ಥಿತಿಗೆ ತಲುಪಿದೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ.
ಸಾವಿರಾರು ಮಂದಿ ಪ್ರತಿಭಟನಾಕಾರರು ಶ್ರೀಲಂಕಾ ಅಧ್ಯಕ್ಷರ ಅವರ ನಿವಾಸಕ್ಕೆ ಮುತ್ತಿಗೆ ಹಾಕಿದ್ದರು. ಇದರಿಂದ ಭಯಭೀತರಾದ ಗೊಟಬಯ ರಾಜಪಕ್ಸೆ ವಿದೇಶಕ್ಕೆ ಪಲಾಯನಗೈದರು. ನಂತರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇನ್ನೊಂದು ವಾರದಲ್ಲಿ ಶ್ರೀಲಂಕಾದಲ್ಲಿ ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದೆ.