ಅನುಭಾವದ ಅಭಿವ್ಯಕ್ತಿಯೇ ಲಲಿತಕಲೆ: ಪಟೇಲ್

ಕಲಬುರಗಿ:ಡಿ.6:ನಗರದ ಬಿದ್ದಾಪುರ ಬಡಾವಣೆಯ ಕೃತ್ತಿಕ ಸಾಂಸ್ಕøತಿಕ ಸಂಸ್ಥೆಯ ಜಾನೆಆರ್ಟಗ್ಯಾಲರಿಯಲ್ಲಿ ರವಿವಾರ ರಂದು ಚಿತ್ರಕಲಾವಿದ ವಿಜಯಕುಮಾರ್‍ಎಸ್‍ಅವರ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಧನಸಹಾಯದೊಂದಿಗೆ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಚಿತ್ರಕಲಾ ಪ್ರದರ್ಶನದ ಉದ್ಘಾಟಸಿ ಡಾ ರೆಹಮಾನ್ ಪಟೇಲ್‍ಅವರು ಕಲಾವಿದ ವಿಜಯ್‍ಕುಮಾರ್‍ಅವರ ಕಲಾಕೃತಿಗಳು ಅದ್ಭುತವಾಗಿದ್ದು ,ಜೀವನಾನುಭವದಿಂದ ಮೂಡಿದ ರೇಖಾ ಚಿತ್ರಗಳು ಅತ್ಯುತ್ತಮವಾಗಿದ್ದು, ಶ್ರೇಷ್ಠ ಕಲಾವಿದನಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಕಲಬುರಗಿ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ವಿಜಯಕುಮಾರ್ ಪಾಟೀಲ ತೇಗಲ್‍ತಿಪ್ಪಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಸಾಹಿತ್ಯ ಮತ್ತು ಚಿತ್ರ ಕಲೆ ಒಂದು ನಾಣ್ಯದಎರಡು ಮುಖಗಳಿದ್ದಂತೆ, ಸಾಹಿತ್ಯ ಪರಿಷತ್ತ ವತಿಯಿಂದ ಚಿತ್ರಕಲಾವಿದರಿಗೆ ಪೂರಕವಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳುತ್ತಾ, ಜಾನೆಆರ್ಟಗ್ಯಾಲರಿಯು ಚಿತ್ರಕಲಾವಿದರಿಗೆ ವೇದಿಕೆಯಾಗಿಕಾರ್ಯನಿರ್ವಹಿಸಿತ್ತಿರುವುದು ಶ್ಲಾಘನೀಯಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ತೇಗಲ್‍ತಿಪ್ಪಿ ಅವರಿಗೆ ಜಾನೆ ದಂಪತಿಗಳು ಅವರನ್ನು ಸನ್ಮಾನಿಸಿದರು.

ಅತಿಥಿಯಾಗಿ ಖ್ಯಾತ ಉದ್ಯಮಿ ವೆಂಕಟೇಶಅಮ್ಮಣ ಉಪಸ್ಥಿತರಿದ್ದರು. ಅಧ್ಯಕ್ಷತೆವಹಿಸಿ ಹಿರಿಯ ಚಿತ್ರಕಲಾವಿದ ಬಸವರಾಜಎಲ್. ಜಾನೆ ಕಲಾವಿದರಿಗಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಚ್ಚಿನ ಕಾರ್ಯಕ್ರಮಗಳನ್ನು ತಮ್ಮ ಗ್ಯಾಲರಿಯ ವತಿಯಿಂದ ನೆರವೇರಿಸುವ ಹಂಬಲವನ್ನು ವ್ಯಕ್ತ ಪಡಿಸಿದರು. ವಿಜಯ್ ಕುಮಾರ್‍ಅವರ ಕಲಾಕೃತಿಗಳಲ್ಲಿ ಮನುಷ್ಯತನ್ನ ಬದುಕಿಗಾಗಿ ಪ್ರಾಣಿ ಪಕ್ಷಿಗಳನ್ನು ಹೇಗೆ ಪಳಗಿಸುತ್ತಾನೆ ಎಂಬುದನ್ನು ಕಾಣಬಹುದುಎಂದು ಹೇಳಿದರು.

ಸಂಸ್ಥೆ ಕಾರ್ಯದರ್ಶಿ ಮಂಜುಳಾ ಜಾನೆಸ್ವಾಗತಿಸಿದರು, ಸೂರ್ಯಕಾಂತ್ ನಂದೂರ ವಂದಿಸಿದರು. ಶಿಲ್ಪಾ ಹೆಬ್ಬಾಳ ನಿರೂಪಿಸಿದರು. ಹಿರಿಯ ಚಿತ್ರ ಕಲಾವಿದರಾದ ವಿ.ಬಿ. ಬಿರಾದಾರ , ಛಾಯಾ ಚಿತ್ರಕಾರ ನಾರಾಯಣ ಜೋಶಿ, ಮಹ್ಮದ ಅಯಾಜುದ್ದೀನ್ ಪಟೇಲ್, ಡಾ ಪರಶುರಾಮ, ಸುರೇಶ್ ಬಡಿಗೇರ್ ಡಾ ಶಾಹೀದ್ ಪಾಶಾ, ಕಲ್ಯಾಣಪ್ಪ ಹಂಗರಕಿ, ಸಂಗಮೇಶ್, ರೇವಣಸಿದ್ಧಪ್ಪಾ ಹೊಟ್ಟಿ, ಅಭಿಜಿತ್, ಜಲಜಾಕ್ಷಿ, ಕವಿತಾ, ನೀಲಾಂಬಿಕ ನಗರದ ಅನೇಕ ಹಿರಿಯಕಿರಿಯ ಚಿತ್ರಕಲಾವಿದರು ಆಗಮಿಸಿದ್ದರು. ಡಿಸೆಂಬರ್ 10 ರವರೆಗೆ ಚಿತ್ರಕಲಾ ಪ್ರದರ್ಶನ ನಡೆಯಲಿದೆ. ಮುಂಜಾನೆ 11 ರಿಂದ ಸಂಜೆ 6 ರವರೆಗೆ ಸಾರ್ವಜನಿಕರು, ಚಿತ್ರಕಲಾವಿದರು, ಕಲಾಆಸಕ್ತರು ವೀಕ್ಷಿಸಬಹುದು.