
ತಾಳಿಕೋಟೆ:ಎ.24: ಲಿಂಗಬೇಧವಿಲ್ಲದೇ, ವರ್ಣಬೇಧವಿಲ್ಲದೇ ಎಲ್ಲ ಶರಣರು ಒಂದೆಡೆ ಸೇರಿ ತಮ್ಮ ವಿಚಾರಗಳನ್ನು ಅಬಿವ್ಯಕ್ತಗೊಳಿಸುವ ಈತರವಿಚಾರಗಳನ್ನು ಹಂಚಿಕೊಳ್ಳುವ ಒಂದು ವಿಚಾರ 12ನೇ ಶತಮಾನದಲ್ಲಿ ದಾಸೋಹ ಕೇಂದ್ರವಾಗಿ ಅನುಭವ ಮಂಟಪ ನಿರ್ಮಾಣವಾಗಿತ್ತೆಂದರೇ ತಪ್ಪಾಗಲಾರದೆಂದು ಹಿರಿಯ ಸಾಹಿತಿ ಶಿಕ್ಷಕರಾದ ಅಶೋಕ ಹಂಚಲಿ ಅವರು ನುಡಿದರು.
ರವಿವಾರರಂದು ಸ್ಥಳೀಯ ಬಸವ ಜಯಂತ್ಯೋತ್ಸವ ಸಮಿತಿವತಿಯಿಂದ ಏರ್ಪಡಿಸಲಾದ ಬಸವ ಜಯಂತ್ಯೋತ್ಸವದ ಕಾರ್ಯಕ್ರಮದಲ್ಲಿ ಬಸವೆಶ್ವರರ ಮಹಾಮೂರ್ತಿಗೆ ಪುಷ್ಪಹಾರ ಹಾಕಿ ಗೌರವಿಸಿ ಮುಖ್ಯ ಅಥಿತಿ ಸ್ಥಾನವನ್ನು ಅಲಂಕರಿಸಿ ಮಾತನಾಡುತ್ತಿದ್ದ ಅವರು ಬಸವಣ್ಣನವರು ಹೇಳಿದಂತೆ ಶರಣರ ಧರ್ಮದ ಮೂಲ ಆಧಾರವೇ ದಯೆ, ಪರಸ್ಪರ ಪ್ರೀತಿ ಪ್ರೇಮ ದಯೆಯಂತಹ ಮಾನವೀಯ ಗುಣಗಳಿಂದಾಗಿ ಶರಣರು ಪ್ರತಿಪಾದಿಸಿದ ಧರ್ಮ ಮಾನವ ಧರ್ಮವಾಯಿತೆಂದರು. ಶರಣರು ಕೇವಲ ಮಾನವರಿಗೆ ಮಾತ್ರ ದಯೆ ತೊರಿದವರಲ್ಲ ಈಡಿ ಜೀವರಾಶೀಗಳಿಗೆ ದಯದ ಮಳೆಯನ್ನು ಸುರಿಸಿದವರಾಗಿದ್ದಾರೆಂದರು. ಧಾರ್ಮಿಕ ಚಿಂತನೆಗೊಳಗಾಗಿದ್ದ ಶರಣರು ಮೂಡ ನಂಬಿಕೆಗಳನ್ನು ಧರ್ಮದ ಹೆಸರಿನಲ್ಲಿ ಉತ್ತೇಜನ ಕೊಟ್ಟವರಲ್ಲ ಎಂದು ಹೇಳಿದ ಅಶೋಕ ಹಂಚಲಿ ಅವರು ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಮಗ್ರ ಕ್ರಾಂತಿಯ ಸ್ವರೂಪವನ್ನು ಅರ್ಥೈಸಬೇಕಾದರೇ ಅವರು ಹಾಗೂ ಅವರ ಸಮಕಾಲಿನ ಶರಣರು ರಚಿಸಿದ ವಚನ ಸಾಹಿತ್ಯಕ್ಕೆ ನಾವೆಲ್ಲರು ಮೊರೆಹೋದರೇ ನಮಗೆಲ್ಲವು ಅರ್ಥವಾಗುತ್ತದೆ ಎಂದರು.
ಇನ್ನೋರ್ವ ಜೆ.ಎಸ್.ಎಸ್ ಸಂಸ್ಥೆಯ ಕಾರ್ಯದರ್ಶಿ ಶ್ರೀಕಾಂತ ಪತ್ತಾರವರು ಮಾತನಾಡಿ ಬಸವಣ್ಣನವರು ಕಟ್ಟಬಯಸಿದ ಸಮಾಜ ಧಾರ್ಮಿಕ, ಸಾಮಾಜಿಕ ಮತ್ತು ಆರ್ಥೀಕ ಸಮಾನತೆಯನ್ನು ಸಾರುವಂತಹ ಆದರ್ಶ ಸಮಾಜ ವರ್ಣರಹಿತ, ಜಾತಿರಹಿತ, ವರ್ಗರಹಿತ, ಸುಂದರ ಸಮಾಜದ ಕಲ್ಪನೆ 12ನೇ ಶತಮಾನದಲ್ಲಿಯೇ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ಬಂದಿತ್ತು. ಬಸವಣ್ಣನವರ ದೂರ ದೃಷ್ಟಿಯ ಪ್ರತಿಬಿಂಬ ಮಾನವೀಯತೆಯ ಸಂಕೇತವಾಗಿತ್ತಲ್ಲದೆ ಧಾರ್ಮಿಕ ಆರ್ಥೀಕ ಚಿಂತನೆಗೆ ಸಾಧನವಾಗಿದ್ದು ಅವರು ರಚಿಸಿದ ಸಾಹಿತ್ಯ ಶರಣ ಸಾಹಿತ್ಯ ಅನುಭಾವ ಸಾಹಿತ್ಯವಾಗಿ ಬಾಷೆಯನ್ನು ಬೆಳೆಸುವುದರೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಲು ಕಾರಣವಾಯಿತೆಂದರು.
ಇನ್ನೋರ್ವ ಶರಣರಾದ ವೀರಯ್ಯ ಮಠ ಹಾಗೂ ಅಪ್ಪಾಸಬ ಮೂಲಿಮನಿ ಅವರು ಮಾತನಾಡಿ ಬಸವಣ್ಣನವರು ಹೆಣ್ಣು ಗಂಡು ಎನ್ನುವ ಕಲ್ಪನೆ ಕೇವಲ ದೆಹಕ್ಕೆ ಮಾತ್ರವೇ ವಿನಃ ಆತ್ಮಕ್ಕೆ ಅಲ್ಲ ಎಂಬ ವಿಶಿಷ್ಟ ಕಲ್ಪನೆ ನೀಡಿದ ಹಿರಿಮೆ ಬಸವಾದಿ ಶರಣರಿಗೆ ಸಲ್ಲುತ್ತದೆ ಎಂದರು. ಶತಶತಮಾನಗಳಿಂದ ಶೋಷಣೆಗೆ ಒಳಪಟ್ಟಂತಹ ಸ್ತ್ರೀ ಸಮುದಾಯದ ಧ್ವನಿಯಾದವರು ಬಸವಾದಿ ಶರಣರಾಗಿದ್ದಾರೆ. ಲಿಂಗ ಬೇಧ ವಿರುದ್ಧ ಸೀಡಿದೆಳುವ ಮೂಲಕ ಸ್ತ್ರೀ ಸ್ವಾಂತತ್ರ್ಯ ಪ್ರತಿಪದನೆ ಮಾಡಿದವರು ಬಸವಣ್ಣನವರಾಗಿದ್ದರೆ. ಬಸವಣ್ಣನವರ ವಾಣಿಯಂತೆ ಶರಣಧರ್ಮದ ಮೂಲ ಆಧಾರವೇ ದಯೆ ಎಂಬುದಾಗಿದೆ ಎಂದರು. ಬದಿಕಿನಲ್ಲಿ ಯಾರು ಪ್ರಾಮಾಣಿಕವಾಗಿ ತಮ್ಮ ಪಾಲಿನ ಕರ್ತವ್ಯಗಳನ್ನು ಮಾಡಿ ಜನಮೆಚ್ಚುಗೆಗೆ ಪಾತ್ರರಾಗುತ್ತಾರೋ ಅವರು ಇಲ್ಲಿಯೂ ಸಲ್ಲುತ್ತಾರೆ ಅಲ್ಲಿಯೂ ಸಲ್ಲುತ್ತಾರೇ ಎಂದರು.
ನ್ಯಾಯವಾದಿ ಎಮ್.ಕೆ.ಮೆತ್ರಿ ಅವರು ಬಸವಣ್ಣನವರ ವಚನವನ್ನು ವಿವರಿಸುವುದರೊಂದಿಗೆ ಅರ್ಥೈಸಿದರಲ್ಲದೇ ಸ್ವತಃ ಬಸವಣ್ಣನವರ ಮೇಲೆ ಬರೆದಂತಹ ಕವನವನ್ನು ವಾಚಿಸಿ ಜನಮೆಚ್ಚುಗೆಗೆ ಪಾತ್ರರಾದರು.
ಕಾರ್ಯಕ್ರಮದ ಮೊದಲಿಗೆ ರಾಜವಾಡೆಯಿಂದ ಪ್ರಾರಂಭಗೊಂಡ ಜಗಜ್ಯೋತಿ ಬಸವೇಶ್ವರರ ಭಾವಚಿತ್ರದ ಭವ್ಯ ಮೆರವಣಿಗೆಯು ಕತ್ರಿಬಜಾರ ಮಾರ್ಗವಾಗಿ ಬಾಲಾಜಿ ಮಂದಿರ ರಸ್ತೆ ವಿಠ್ಠಲ ಮಂದಿರ ಹಾಗೂ ಶಿವಾಜಿ ಚೌಕ ಬಸ್ಟಾಂಡ್ ರಸ್ತೆ ಮಾರ್ಗವಾಗಿ ಬಸವೇಶ್ವರ ಸರ್ಕಲಕ್ಕೆ ತೆರಳಿ ಅಲ್ಲಿಯ ಮಹಾಮೂರ್ತಿಗೆ ಮಹಾಪೂಜೆ ಗೈಯಲಾಯಿತ್ತಲ್ಲದೇ ಹಿರಿಯರು ಮುಖಂಡರು ಹಾಗೂ ಅಥಿತಿ ಮಹೋದಯರು ಮಹಾ ಮೂರ್ತಿಗೆ ಹಾಗೂ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಹಾರ ಹಾಕಿ ಗೌರವಿಸಿದರು. ಇದೇ ಸ್ಥಳದಲ್ಲಿ ನಂತರ ಕಾರ್ಯಕ್ರಮ ಸಭೆಯಾಗಿ ಮಾರ್ಪಟ್ಟಿತು. ಈ ಸಮಯದಲ್ಲಿ ಕೆಲವು ವಿದ್ಯಾರ್ಥೀ ವಿದ್ಯಾರ್ಥೀನಿಯರು ಬಸವಣ್ಣನವರ ಶ್ಲೋಕ ಹಾಗೂ ವಚನವನ್ನು ಬಿಡಿಬಿಡಿಯಾಗಿ ಹೇಳಿ ಅರ್ಥೈಸಿದರು.
ಪಂಚಮಶಾಲಿ ಸಮಾಜದ ಅಧ್ಯಕ್ಷರಾದ ಡಾ.ವಿಜಯಕುಮಾರ ಕಾರ್ಚಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯರಾದ ವಾಸುದೇವ ಹೆಬಸೂರ, ಅಣ್ಣಪ್ಪ ಜಗತಾಪ, ಪರಶುರಾಮ ತಂಗಡಗಿ, ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ, ಎಮ್.ಎಸ್.ಸರಶೇಟ್ಟಿ, ನಾಗಪ್ಪ ಅಗಸರ, ಸುನೀಲ ಹಡಪದ ಮೊದಲಾದವರು ಉಪಸ್ಥಿತರಿದ್ದರು.
ನಿವೃತ್ತ ಶಿಕ್ಷಕ ಜೆ.ಎಸ್.ಜಮ್ಮಲದಿನ್ನಿ ಸ್ವಾಗತಿಸಿದರು. ಮಾಂತೇಶ ಮುರಾಳ ನಿರೂಪಿಸಿ ವಂದಿಸಿದರು.