ಅನುಭವ ಮಂಟಪ ಭಾರತದ ಮೊದಲ ಕಮ್ಯೂನಿಕೇಶನ್ ಸೆಂಟರ್: ರಂಜಾನ್ ದರ್ಗಾ

ಕಲಬುರಗಿ.ನ.12: 12ನೇ ಶತಮಾನದ ಬಸವಣ್ಣನವರಂತೆ ಶರಣಬಸವೇಶ್ವರರು ಅರಿವನ್ನು ಬರವಣಿಗೆಯಲ್ಲಿ ತರಲಿಲ್ಲ. ಆದರೆ ಅರಿವನ್ನು ಆಚರಣೆಗೆ ತಂದರು. ಅನುಭವ ಮಂಟಪ ಭಾರತದ ಮೊದಲ ಕಮ್ಯೂನಿಕೇಶನ್ ಸೆಂಟರ್ ಆಗಿತ್ತು ಎಂದು ಸಾಹಿತಿ, ಪತ್ರಕರ್ತ ರಂಜಾನ್ ದರ್ಗಾ ತಿಳಿಸಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ‘ಮೀಡಿಯಾ ವ್ಯಾಲ್ಯೂಸ್ ಇನ್ ದಿ ಪ್ರಸೆಂಟ್ ಸಿನೆರಿಯೋ’ ವಿಷಯ ಕುರಿತು ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಆಶಯ ನುಡಿಗಳಾಡಿದರು.
ಪ್ರಶ್ನೆ ಮಾಡುವ ನೈತಿಕ ಶಕ್ತಿ ಇರುವ ಪತ್ರಕರ್ತ ಮನುಷ್ಯರನ್ನು ಒಂದಾಗಿ ನೋಡುವ ಪರಿಪಾಠ ಇಟ್ಟುಕೊಳ್ಳಬೇಕು, ವಚನಗಳು ಕೂಡ ಮೀಡಿಯಾಗಳೆ. ವಚನಗಳನ್ನು ಉಳಿಸಲು ಬಸವಣ್ಣನವರು ಬಸವಕಲ್ಯಾಣದಿಂದ ಉಳವಿವರೆಗೆ ಮಾನವೀಯತೆಯ ಮಹತ್ವಾಕಾಂಕ್ಷೆ ಇಟ್ಟುಕೊಂಡು ನಡೆದು ನುಡಿದರು.
ಪತ್ರಿಕೋದ್ಯಮ ಒಂದು ಸವಾಲಿನ ಕೆಲಸವಾಗಿದೆ, ಪ್ರತಿದಿನ ಒಂದೊಂದು ಹೊಸತನವನ್ನು ತಿಳಿಸುತ್ತದೆ. ಪತ್ರಕರ್ತನಾದವನು ನಿಖರವಾದ ವಿಷಯಗಳನ್ನು ಬರೆಯಬೇಕು, ತಪ್ಪು ಸುದ್ದಿಗಳ ಜನರನ್ನು ದಾರಿ ತಪ್ಪಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಸಮಾಜಮುಖಿಯಾಗಿ ಕೆಲಸ ಮಾಡುವ ಪತ್ರಕರ್ತ ಸಮಾಜದಲ್ಲಿ ನಡೆಯುತ್ತಿರುವ ವಿಷಯಗಳ ಮೇಲೆ ಗಮನ ಇರಬೇಕು ಅದನ್ನು ಜನರಿಗೆ ತಿಳಿಸಬೇಕು. ಎಡಿಟರ್ ಆಗುವುದು ಸುಲಭ. ಆದರೆ ಪತ್ರಕರ್ತರಾಗುವುದು ಕಷ್ಟ. ಸರಳವಾಗಿ ಬರೆಯುವುದೂ ಕಠಿಣ. ಸತ್ಯ, ನ್ಯಾಯ, ನೀತಿ ಕಾಪಾಡಿಕೊಂಡು ಬರುವುದು ಪತ್ರಿಕೋದ್ಯಮದ ಮುಖ್ಯ ಧ್ಯೇಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಶಿಕ್ಷಣ ಹಾಗೂ ಜ್ಞಾನಕ್ಕೆ ಹೆಚ್ಚು ಹೊತ್ತು ನೀಡಲಾಗುತ್ತಿದ್ದು, ಪೀಠಾಧಿಪತಿಗಳಾದ ಡಾ. ಶರಣಬಸವಪ್ಪ ಅವರ 87ನೇ ಹುಟ್ಟು ಹಬ್ಬದ ಅಂಗವಾಗಿ ಐದು ದಿನದ ಕಾರ್ಯಕ್ರಮ ಹಮ್ಮಿಕೊಳ್ಖಲಾಗಿದೆ. ಕಾರ್ಯಕ್ರಮ ಔಚಿತ್ಯ ಹಾಗೂ ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಶರಣಬಸವ ವಿಶ್ವವಿದ್ಯಾಲಯದ ಪತ್ರಕೋದ್ಯಮ ವಿಭಾಗದ ಡೀನ್ ಟಿ.ವ್ಹಿ.ಶಿವಾನಂದನ್ ಮುಖ್ಯ ಅತಿಥಿಯಾಗಿ ಮಾತನಾಡಿ, ಈಗಿನ ಮಾಧ್ಯಮಗಳು ನೈತಿಕ ಜವಾಬ್ದಾರಿಯಿಂದ ಕೆಲಸ ಮಾಡುವುದು ಅಗತ್ಯವಾಗಿದೆ, ಜನರಿಗೆ ಉಪಯುಕ್ತವಾದ ಸುದ್ದಿಗಳು ಕೊಡುತ್ತಿಲ್ಲ. ಮಾಲಿಕರ ಹಿಡಿತದಲ್ಲಿ ಮಾಧ್ಯಮಗಳು ಕೆಲಸ ಮಾಡುತ್ತಿವೆ. ಅದರಲ್ಲೂ ವಿದ್ಯೂನ್ಮಾಧ್ಯಮ ಟಿಆರ್‍ಪಿ ಗೋಸ್ಕರ ಒಂದೇ ಸುದ್ದಿಯನ್ನು ವೈಭಕರಿಸುವುದು ಖೇದದ ವಿಷಯ ಎಂದು ವಿಷಾಧ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ಪೂಜ್ಯ ಡಾ.ಶರಣಬಸವಪ್ಪ ಅಪ್ಪಾ ಅವರು ಪತ್ರಿಕೋದ್ಯಮವನ್ನು ಆರಂಭಿಸಿ ಅನೇಕ ಪತ್ರಕರ್ತರನ್ನು ಹುಟ್ಟುಹಾಕಿದ್ದಾರೆ. ಪತ್ರಿಕೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದರು.
ನಂತರ ಜರುಗಿದ 21ನೇ ಶತಮಾನದಲ್ಲಿ ವಿದ್ಯುನ್ಮಾನ ಮತ್ತು ಸೋಷಿಯಲ್ ಮೀಡಿಯಾ ವಿಷಯ ಕುರಿತು ಹೈದರಾಬಾದ್‍ನ ಧಮೇರ್ಂದ್ರ ಪೂಜಾರಿ, ಪತ್ರಕರ್ತ-ಲೇಖಕ ಡಾ. ಶಿವರಂಜನ್ ಸತ್ಯಂಪೇಟೆ ಅಧ್ಯಕ್ಷತೆ ವಹಿಸಿದ್ದರು. ಮಾಧ್ಯಮದಲ್ಲಿ ಮಹಿಳೆಯ ಪ್ರಾತಿನಿಧ್ಯ ಎನ್ನುವ ವಿಷಯದ ಡಾ. ನಮ್ರತಾ, ಡಾ. ಸುನೀತಾ ಪಾಟೀಲ ವಿಷಯ ಮಂಡಿಸಿದರು. ಹಿರಿಯ ಪತ್ರಕರ್ತ ಪಿ.ಎಂ.ಮಣ್ಣೂರ ಸಮಾರೋಪ ಭಾಷಣ ಮಾಡಿದರು.
ಡಾ. ಸೀಮಾ ಪಾಟೀಲ ಪ್ರಾರ್ಥಿಸಿದರು. ಡಾ. ಸಿದ್ದಮ್ಮ ಗುಡೇದ ನಿರೂಪಿಸಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂಹನ ವಿಭಾಗದ ಸಂಚಾಲಕ ಕೃಪಾಸಾಗರ ಗೊಬ್ಬೂರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಐಕ್ಯೂಎಸ್ ಸಂಯೋಜಕಿ ಶ್ರೀಮತಿ ಜಾನಕಿ ಹೊಸೂರ ವೇದಿಕೆಯಲ್ಲಿದ್ದರು. ಮಹಾವಿದ್ಯಾಲಯದ ಎಲ್ಲಾ ಬೋಧಕ, ಬೋಧಕೇತರರು ಹಾಗೂ ಶರಣಬಸವ ವಿಶ್ವವಿದ್ಯಾಲಯ, ಗುಲಬರ್ಗಾ ವಿಶ್ವವಿದ್ಯಾಲಯ, ಕೆಬಿಎನ್ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.