ಅನುಭವ ಮಂಟಪ ಕಾಮಗಾರಿಗೆ ಉಳಿದ ಅನುದಾನ ಕಲ್ಪಿಸಿ

ಬೀದರ್:ಸೆ.21: ಕೇಂದ್ರ ನೂತನ ಹಾಗೂ ನವಿಕರಿಸಬಹುದಾದ ಇಂಧನ ಮೂಲ ಹಾಗೂ ರಸಾಯನಿಕ, ರಸಗೊಬ್ಬರ ಖಾತೆ ಸಹ ಸಚಿವರಾದ ಭಗವಂತ ಖೂಬಾ ಚಿವರು, ದೇಹಲಿಯಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ, ಬೀದರ ಲೋಕಸಭಾ ಕ್ಷೇತ್ರದ ಅಭಿವೃದ್ದಿಗೆ ಸಂಬಂಧಿಸಿದಂತೆ ಮನವಿ ಪತ್ರಗಳು ಸಲ್ಲಿಸಿ, ವಿನಂತಿಸಿಕೊಂಡಿದ್ದಾರೆ.
ಹಿಂದಿನ ನಮ್ಮ ಸರ್ಕಾರದಲ್ಲಿ ಅಧಿಕಾರದಲ್ಲಿದ್ದಾಗ, ಬಸವಕಲ್ಯಾಣದ ನೂತನ ಅನುಭವ ಮಂಟಪಕ್ಕೆ ರೂ. 600 ಕೋಟಿ ಅನುದಾನ ನೀಡಿ, ರೂ. 200 ಕೋಟಿ ಬಿಡಗುಡೆಗೊಳಿಸಲಾಗಿತ್ತು, ಆದರೆ ಈ ನಿರ್ಮಾಣ ಕಾಮಗಾರಿಯೂ ಪೂರ್ಣಗೋಳ್ಳಲು ಉಳಿದ ಅನುದಾನ ಕೂಡಲೆ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.
ಶೈಕ್ಷಣಿಕವಾಗಿ ಹಿಂದುಳಿದ ಜಿಲೆಯಾಗಿರುವ ಕಾರಣಕ್ಕಾಗಿ ಕೇಂದ್ರ ಸರ್ಕಾರವು ಬೀದರ ಜಿಲ್ಲೆಗೆ ಸಿಪೇಟ್ ಕೇಂದ್ರ ಮಂಜೂರಾತಿ ಮಾಡಿರುತ್ತದೆ. ಸದರಿ ಕೇಂದ್ರದ ಕಟ್ಟಡ ಕಾಮಗಾರಿಗಾಗಿ ಔರಾದ (ಬಿ) ತಾಲೂಕಿನ ಬಲ್ಲೂರ (ಜೆ) ಗ್ರಾಮದ ಹತ್ತಿರ 10 ಎಕ್ಕರೆ ಜಮೀನು ಜಿಲ್ಲಾಡಳಿತದಿಂದ ಮಂಜೂರಾಗಿರುತ್ತದೆ ಮತು ಕಳೆದ ವರ್ಷ ಭೂಮಿ ಪೂಜೆಯೂ ಆಗಿರುವ ಬಗ್ಗೆ ಮಾಹಿತಿ ನೀಡಿ, ರಾಜ್ಯ ಸರ್ಕಾರದಿಂದ ನೀಡಬೇಕಾಗಿರುವ 50% 50% ಅನುದಾನ ನೀಡಿ, ಕಾಮಗಾರಿ ಪ್ರಾರಂಭಿಸಲು ಸಹಕರಿಸಬೇಕೆಂದು ಕೋರಿದ್ದಾರೆ.
ಸಿಪೇಟ್ ಕೇಂದ್ರವು ಯುವಕರ ಕೌಶಲ್ಯಾಭಿವೃದ್ದಿ ಹೆಚ್ಚಿಸುವ ಕೆಲಸ ಮಾಡುತ್ತದೆ, ಸ್ವಯಂ ಉದ್ಯೋಗಿಗಳನ್ನಾಗಿ ಮಾಡುತ್ತದೆ, ಇದರಿಂದ ನಿರುದ್ಯೊಗ ಸಮಸ್ಯೆಯೂ ನಿವಾರಣೆಯಾಗುತ್ತದೆ, ಆದ್ದರಿಂದ ಸಿಪೇಟ್ ಕೇಂದ್ರ ಪ್ರಾರಂಭದ ಅತಿ ಅವಶ್ಯಕವಾಗಿದೆ ಎಂದು ಮುಖ್ಯಮಂತ್ರಿಗಳಿಗೆ ಕೇಂದ್ರ ಸಚಿವ ಖೂಬಾ ಮನವರಿಕೆ ಮಾಡಿಕೊಟ್ಟಿದ್ದಾರೆ.
ಇದೇಲ್ಲದರ ಜೊತೆಗೆ ಕೇಂದ್ರದಿಂದ 2019 ಫೇಬ್ರುವರಿ ತಿಂಗಳಲ್ಲಿ ಕೇಂದ್ರ ಬಜೇಟನಲ್ಲಿ ರೂಪಾಯಿ 2,152 ಕೋಟಿ ವೆಚ್ಚದಲ್ಲಿ 155 ಕೀಮಿ. ಅಂತರದ ಬೀದರ ನಾಂದೇಡ ವಾಯಾ ಔರಾದ, ದೇಗಲೂರ ಹೊಸ ರೈಲ್ವೆ ಲೈನ್ ಮಂಜೂರಾತಿಯಾಗಿದೆ.
ಈ ರೈಲ್ವೆ ಲೈನ್ ಬೀದರ ಮತ್ತು ಮಹಾರಾಷ್ಟ್ರಕ್ಕೆ ಎಲ್ಲಾ ರೀತಿಯ ಸಂಬಂಧವೃದ್ದಿಗೆ ಸಹಕಾರಿಯಾಗಲಿದೆ. ಹಾಗೂ ಬೀದರನಲ್ಲಿ ಮತ್ತು ನಾಂದೇಡನಲ್ಲಿ ಸಿಖ್ ಸಮುದಾಯದ ಗುರುಗಳಾದ ಗುರುನಾನಕ್‍ಜಿಯವರ ಪವಿತ್ರ ಗುರುದ್ವಾರಗಳಿರುವ ಕಾರಣ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಸಿಗಲಿದೆ. ಈ ಎಲ್ಲಾ ದೃಷ್ಟಿಕೊನದಿಂದ ರೈಲ್ವೆ ಸಚಿವಾಲಯವು ಬೀದರ-ನಾಂದೇಡ ರೈಲ್ವೆ ಲೈನ್ ಕಾಮಗಾರಿಯನ್ನು ಅದೇ ವರ್ಷದ ಬಜೇಟನಲ್ಲಿ ಪಿಂಕ್ ಪುಸ್ತಕದಲ್ಲಿ ಸೇರಿಸಲಾಗಿರುತ್ತದೆ.
ಮುಂದುವರೆದು 2023-24ನೇ ಸಾಲಿನ ಬಜೇಟನಲ್ಲಿ ಸದರಿ ಯೋಜನೆಗೆ ಕೇಂದ್ರದಿಂದ 100 ಕೋಟಿ ಅನುದಾನ ಮಿಸಲಿಡಲಾಗಿದೆ ಹಾಗೆ ಮಹಾರಾಷ್ಟ್ರ ಸರ್ಕಾರದಿಂದ ಸಹ ಅವರ ಪಾಲಿನ ಭೂಮಿ ಹಾಗೂ ನಿರ್ಮಾಣ ವೆಚ್ಚದ 50% ಅನುದಾನ ನೀಡುವುದಾಗಿ ಬಜೇಟನಲ್ಲಿ ಘೋಷಣೆ ಮಾಡಿರುತ್ತಾರೆ ಮತ್ತು ರಾಜ್ಯದಲ್ಲಿದ್ದ ಹಿಂದಿನ ಸರ್ಕಾರದಲ್ಲಿಯೂ ಬೀದರ-ಔರಾದ (ಕರ್ನಾಟಕ ಬಾರ್ಡರವರೆಗೆ) ಅವಶ್ಯಕವಿರುವ ಭೂಮಿ ಹಾಗೂ ಅನುದಾನ ನೀಡುವುದಾಗಿ ಬಜೇಟನಲ್ಲಿ ಘೋಷಣೆ ಮಾಡಲಾಗಿದೆ.
ಪ್ರಯುಕ್ತ ತಾವೂಗಳು ಸಮಸ್ತ ಬೀದರ ಲೋಕಸಭಾ ಕ್ಷೇತ್ರದ ಅಭಿವೃದ್ದಿಯನ್ನು ಗಮನದಲ್ಲಿಟ್ಟುಕೊಂಡು, ಬೀದರ-ಔರಾದ (ಕರ್ನಾಟಕ ಬಾರ್ಡರವರೆಗೆ) ಅವಶ್ಯಕವಿರುವ ಭೂಮಿಯನ್ನು ಉಚಿತವಾಗಿ ರೈಲ್ವೆ ಇಲಾಖೆಗೆ ಒದಗಿಸುವುದು ಹಾಗೂ 50% ನಿರ್ಮಾಣ ವೆಚ್ಚವನ್ನು ಭರಿಸಲು, ಅವಶ್ಯಕವಾಗಿರುವ ಅನುದಾನವನ್ನು ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ನೀಡಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮೇಲಿನ ಈ ಮೂರು ಅಭಿವೃದ್ದಿ ಕೆಲಸಗಳು ಬೀದರ ಜಿಲ್ಲೆಯ ಅಭಿವೃದ್ದಿಗೆ ಸಾಕಷ್ಟು ಅನುಕೂಲ ಮಾಡಿಕೊಡಲಿವೆ, ಜನತೆಯೊಂದಿಗೆ ಭಾವನಾತ್ಮಕ ಸಂಬಂಧ ಬೆಸೆಯುವ ಅಭಿವೃದ್ದಿ ಕೆಲಸಗಳಾಗಿವೆ, ತಾವುಗಳು ರಾಜ್ಯದ ಮುಕುಟ ಜಿಲ್ಲೆಯಾಗಿರುವ ನಮ್ಮ ಬೀದರ ಜಿಲ್ಲೆಗೆ ಹೆಚ್ಚಿನ ಒತ್ತುಕೊಟ್ಟು, ಎಲ್ಲಾ ಅಭಿವೃದ್ದಿ ಕಾಮಗಾರಿಗಳಿಗೆ ಶೀಘ್ರದಲ್ಲಿ ಅನುದಾನ ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ಸಹ ಕೇಂದ್ರ ಸಚಿವರ ಎಲ್ಲಾ ಪ್ರಸ್ಥಾವನೆಗಳನ್ನು ಪರಿಗಣಿಸಿ, ಅಗತ್ಯ ಸಹಕಾರ ನೀಡುವುದಾಗಿ ಕೇಂದ್ರ ಅಭಯ ನೀಡಿದ್ದಾರೆ ಎಂದು ಸಚಿವ ಖೂಬಾ ಮಾಹಿತಿಯನ್ನು ನೀಡಿದ್ದಾರೆ.