ಅನುಭವ ಮಂಟಪ ಉತ್ಸವ ಉದ್ಘಾಟನೆಗೆ ಸಭಾಪತಿ ಬಸವರಾಜ ಹೊರಟ್ಟಿಗೆ ಆಹ್ವಾನ

ಭಾಲ್ಕಿ:ನ.19: ಬಸವಕಲ್ಯಾಣದಲ್ಲಿ ನ.25 ಮತ್ತು 26ರಂದು ವಿಶ್ವ ಬಸವಧರ್ಮ ಟ್ರಸ್ಟ್ ಅನುಭವ ಮಂಟಪದ ವತಿಯಿಂದ ನಡೆಯಲಿರುವ 44ನೆಯ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವ ಉದ್ಘಾಟನೆ ಸಮಾರಂಭಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಆಹ್ವಾನ ನೀಡಲಾಗಿದೆ.
ಬೆಂಗಳೂರಿನ ವಿಧಾನ ಸೌಧದ ಸಭಾಪತಿಗಳ ಕೊಠಡಿಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು ಸಭಾಪತಿಗಳನ್ನು ಭೇಟಿಯಾಗಿ ಅವರನ್ನು ಸನ್ಮಾನಿಸಿ, ಆಮಂತ್ರಣ ಪತ್ರಿಕೆ ನೀಡಿ ಸಮಾರಂಭಕ್ಕೆ ಆಹ್ವಾನ ನೀಡಿದರು.
ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‍ನ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರ ದಿವ್ಯ ಸಾನ್ನಿಧ್ಯದಲ್ಲಿ ಶರಣರು ನಡೆದಾಡಿದ ಪವಿತ್ರ ಭೂಮಿ ಬಸವಕಲ್ಯಾಣದಲ್ಲಿ ಎರಡು ದಿವಸ ಅರ್ಥಪೂರ್ಣ ಸಮಾರಂಭ ನಡೆಯಲಿದ್ದು, ತಾವುಗಳು ನ.25ರಂದು ನಡೆಯುವ ಅನುಭವ ಮಂಟಪ ಉತ್ಸವ ಸಮಾರಂಭ ಉದ್ಘಾಟಿಸುವಂತೆ ಕೋರಲಾಯಿತು.
ಈ ಸಂದರ್ಭದಲ್ಲಿ ರವಿ ಬೊರವೇಲ್ಸ್ ಮಾಲೀಕ ರವೀಂದ್ರ ಚಿಡಗುಪ್ಪೆ ಇದ್ದರು.