ಅನುಭವಗಳ ಸರಮಾಲೆ ಬಳಸಿ ಯಶಸ್ಸು ಗಳಿಸಿ

ವಿಜಯಪುರ:ಫೆ.25:ಜೀವನಒಂದು ಅನುಭವಗಳ ಸರಮಾಲೆ ಅಂತಹ ಅನುಭವಗಳನ್ನು ಬಳಸಿಕೊಳ್ಳುವ ಮೂಲಕ ಇರುವ ಸಮಯದಲ್ಲಿ ಎಷ್ಟರ ಮಟ್ಟಿಗೆಯಶಸ್ಸನ್ನು ಗಳಿಸುತ್ತೇವೆ ಮತ್ತು ತೃಪ್ತರಿದ್ದೇವೆ ಎನ್ನುವುದು ಮುಖ್ಯ ಎಂದು ವಿಜಯಪುರಜಿಲ್ಲಾ ವರಿಷ್ಠಾಧಿಕಾರಿಆನಂದಕುಮಾರಹೇಳಿದರು.
ಕೇಂದ್ರ ಸರ್ಕಾರದಯುವಕಾರ್ಯ ಮತ್ತುಕ್ರೀಡಾ ಸಚಿವಾಲಯ, ರಾಜ್ಯಯುವ ಸಬಲೀಕರಣ ಮತ್ತುಕ್ರೀಡಾ ಇಲಾಖೆ, ಎನ್‍ಎಸ್‍ಎಸ್ ಪ್ರಾದೇಶಿಕ ನಿರ್ದೇಶನಾಲಯಗಳ ಸಹಯೋಗದಲ್ಲಿಕರ್ನಾಟಕರಾಜ್ಯಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದರಾಷ್ಟ್ರೀಯ ಸೇವಾ ಯೋಜನೆಕೋಶದ ವತಿಯಿಂದ ಹಮ್ಮಿಕೊಂಡಿದ್ದರಾಜ್ಯ ಮಟ್ಟದ ಯುವಜನೋತ್ಸವ-2023ರ ಗುರುವಾರ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಜೀವನವನ್ನುಉತ್ತಮ ಪಡೆಸಲುಎನ್‍ಎಸ್‍ಎಸ್ ಮುಖ್ಯ ಪಾತ್ರ ವಹಿಸುತ್ತದೆ.ನೀವು ಇನ್ನೊಬ್ಬರಿಗೆಜ್ಞಾನ ಹಂಚುವವರಾಗುತ್ತೀರಿ.ನಾವು ನಮ್ಮದೆಆದರೀತಿಯಲ್ಲಿಉತ್ತಮ, ಉಪಯುಕ್ತರೀತಿಯಿಂದಯಶಸ್ಸು ಗಳಿಸಬೇಕು.ಸೇವಾ ಮನೋಭಾವ ಬೆಳಸಿಕೊಳ್ಳಿ ಎಂದು ಹೇಳಿದರು.
ತಂತ್ರಜ್ಞಾನದಜೊತೆ ಮನುಷ್ಯ ಬೆಳೆಯುತ್ತಿದ್ದಾನೆ. ಜ್ಞಾನವಂತನಾಗುತ್ತಿದ್ದಾನೆ. ಮಹಿಳೆಯರು ಇಡುವಒಂದುತಪ್ಪು ಹೆಜ್ಜೆಅವರಜೀವನಕ್ಕೆಕುತ್ತುತರುತ್ತದೆ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರತೆಗೆದುಕೊಂಡರೆ ಮುಂದೆ ಬೆಳೆಯಬಹುದು.ಸಮಯ ಪ್ರಜ್ಞೆತುಂಬಾ ಮುಖ್ಯವಾದದು.ತಪ್ಪು ನಿರ್ಧಾರಗಳಿಂದ ಯಾವ ಸಾಧನೆಯ ಸಾಧ್ಯವಾಗುವದಿಲ್ಲ. ಮುಂದಿನ ಜೀವನದಲ್ಲಿಯಶಸ್ಸು ಸಾಧಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕರ್ನಾಟಕರಾಜ್ಯಎನ್‍ಎಸ್‍ಎಸ್ ಸಲಹಾ ಸಮಿತಿ ಸದಸ್ಯಡಾ.ಜಾವಿದಜಮಾದಾರಮಾತನಾಡಿ, ಐದು ದಿನಗಳ ಯುವಜನೋತ್ಸವಕಾರ್ಯಕ್ರಮ ಯಶಸ್ವಿಯಾಗಿ ನೆರೆವೇರಿದೆ.ಒಂದುತರಬೇತಿ ವಿಜಯಪುರದರ್ಶನ, ಊಟ ವಸತಿಗಾಗಿಎಲ್ಲ ಸೌಕರ್ಯವನ್ನುಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಇನ್ನು ಮುಂದೆ ಸಮಾಜ ಮುಟ್ಟುವ ಕೆಲಸ ಮಾಡಿಎಂದುಹೇಳಿದರು.
ಕಾರ್ಯಕ್ರಮದಅಧ್ಯಕ್ಷತೆವಹಿಸಿದ್ದ ಮಹಿಳಾ ವಿವಿಯ ಕುಲಪತಿ ಪ್ರೊ.ಬಿ.ಕೆ. ತುಳಸಿಮಾಲ ಮಾತನಾಡಿ,ಯುವಜನೋತ್ಸವ ಯಶಸ್ವಿಯಾಗಿ ಸಂಪನ್ನವಾಗಿದೆ.ಸಾಕಷ್ಟು ವಿಷಯಗಳನ್ನು ಕರಗತ ಮಾಡಿಕೊಂಡಿದ್ದೀರಿ. ಹಲವು ಕೌಶಲ್ಯಗಳನ್ನು ಮೈಗೂಡಿಸಿಕೊಂಡಿದ್ದೀರಿ. ವ್ಯಕ್ತಿತ್ವ ವಿಕಸನಕ್ಕೆ ಹಲವಾರು ವೇದಿಕೆಗಳು ಸಿಗುತ್ತವೆ ಅದರಲ್ಲಿಎನ್‍ಎಸ್‍ಎಸ್ ವೇದಿಕೆ ಒಂದುಎಂದು ಹೇಳಿದರು.
P Áರ್ಯಕ್ರಮದಲ್ಲಿಐದುಜನರಿಗೆಅತ್ಯುತ್ತಮ ಸ್ವಯಂಸೇವಕಿ ಪ್ರಶಸ್ತಿ ಪುರಸ್ಕಾರ ನೆರವೇರಿತು., ದೀಪ್ತಿ ಎಮ್, ಸುವೀಕ್ಷಾ, ಜೀವಿತಾ, ಸುಧಾ,ಸಾವಿತ್ರಿಇವರಿಗೆಆನಂದಕುಮಾರಅವರು ಪ್ರಶಸ್ತಿ ಪ್ರಧಾನ ಮಾಡಿದರು.
ಕಾರ್ಯಕ್ರಮದಲ್ಲಿ, ಬೆಂಗಳೂರಿನ ನೆಹರುಯುವಕೇಂದ್ರ ಸಂಘಟನೆ ನಿರ್ದೇಶಕ ಎಂ.ಎನ್.ನಟರಾಜ್, ರಾಜ್ಯಎನ್‍ಎಸ್‍ಎಸ್‍ಅಧಿಕಾರಿ ಪ್ರತಾಪಲಿಂಗಯ್ಯ, ಮಹಿಳಾ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ರಮೇಶ ಕೆ, ಆರ್ಥಿಕಅಧಿಕಾರಿರಾಮಣ್ಣಅಥಣಿ, ಕುಲಸಚಿವ ಪ್ರೊ.ಬಿ.ಎಸ್.ನಾವಿ,ಎನ್‍ಎಸ್‍ಎಸ್ ಸಂಯೋಜಕಿ ಪ್ರೊ. ಶಾಂತಾದೇವಿ.ಟಿ ಎನ್‍ಎಸ್‍ಎಸ್ ಕಾರ್ಯಕ್ರಮಧಿಕಾರಿಗಳಾದ ಡಾ.ಅಮರನಾಥ ಪ್ರಜಾಪ್ರತಿ, ಡಾ.ಸುರೇಶ ಕೆ.ಪಿ, ಡಾ.ಅಂಬಿಕಾ, ವಿರೇಶಕುರುಹಟ್ಟಿ, ಪ್ರದೀಪಕುಮಾರ ಸಂಕದ್‍ಉಪಸ್ಥಿತರಿದ್ದರು. ಡಾ. ವಿಷ್ಣು ಶಿಂದೆ ಸ್ವಾಗತಿಸಿ ಪರಿಚಯಿಸಿದರು. ಸುರೇಶ ಕೆ.ಪಿ ವಂದಿಸಿದರು. ಡಾ.ಕಲಾವತಿನಿರೂಪಿಸಿದರು.