ಅನುಪಮ್ ಖೇರ್ ಗೆ ಚುಂಬಿಸಲು ನಿರಾಕರಿಸಿದ್ದ ಅರ್ಚನಾ ಪುರಾಣ್ ಸಿಂಗ್ ಸನ್ನಿ ಡಿಯೋಲ್ ಜೊತೆ ಹಲವು ಹಾಟ್ ದೃಶ್ಯಗಳನ್ನು ನೀಡಿದ್ದರು!

ಅರ್ಚನಾ ಪುರಾಣ್ ಸಿಂಗ್ ಮೊನ್ನೆಯಷ್ಟೇ ಜನ್ಮದಿನ ಆಚರಿಸಿದರು. ಈ ಸಂದರ್ಭದಲ್ಲಿ ಅವರ ಕೆಲವು ಹಾಸ್ಯ ಘಟನೆಗಳು ಚರ್ಚೆಯಾಗಿವೆ. ಕಪಿಲ್ ಶರ್ಮಾ ಶೋನಲ್ಲಿ ಅನುಪಮ್ ಖೇರ್ ಜೊತೆ ಚುಂಬನದ ದೃಶ್ಯವನ್ನು ನೆನಪಿಸಿ ನಗೆರಾಣಿ ಅರ್ಚನಾ ಪುರಾಣ್ ಸಿಂಗ್ ಹೆದರಿದ್ದನ್ನು ಹೇಳಿದ್ದಾರೆ.
’ದಿ ಕಪಿಲ್ ಶರ್ಮಾ ಶೋ’ ನಲ್ಲಿ ತನ್ನ ನಗುವಿನ ಮೂಲಕ ಇಡೀ ಸೆಟ್‌ನಲ್ಲಿ ಸಂಚಲನ ಮೂಡಿಸಿದವರು ನಟಿ ಅರ್ಚನಾ ಪುರಾಣ್ ಸಿಂಗ್. ಅನೇಕ ಅದ್ಭುತ ಪಾತ್ರಗಳನ್ನು ನಿರ್ವಹಿಸಿದ ನಟಿ. ಅವರ ನಟನಾ ವೃತ್ತಿಜೀವನದಲ್ಲಿ ಅವರ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಬಗ್ಗೆ ಅನೇಕ ಸುದ್ದಿಗಳಿವೆ .
ಲಾಫ್ಟರ್ ಕ್ವೀನ್ ಎಂದೇ ಖ್ಯಾತರಾಗಿರುವ ಅರ್ಚನಾ ಪುರಾಣ್ ಸಿಂಗ್ ಅವರು ೨೬ ಸೆಪ್ಟೆಂಬರ್ ೧೯೬೨ ರಂದು ಡೆಹ್ರಾಡೂನ್‌ನಲ್ಲಿ ಜನಿಸಿದರು. ನಟಿಯ ಆರಂಭಿಕ ಶಿಕ್ಷಣವನ್ನು ಡೆಹ್ರಾಡೂನ್‌ನ ಜೀಸಸ್ ಮತ್ತು ಮೇರಿ ಕಾನ್ವೆಂಟ್‌ನಲ್ಲಿ ಮಾಡಲಾಯಿತು. ಇದರ ನಂತರ, ಹೆಚ್ಚಿನ ಅಧ್ಯಯನಕ್ಕಾಗಿ, ಅವರು ದೆಹಲಿಯ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದರು. ಅರ್ಚನಾಗೆ ಬಾಲ್ಯದಿಂದಲೂ ನಟನೆಯಲ್ಲಿ ಒಲವಿತ್ತು. ಇಂತಹ ಪರಿಸ್ಥಿತಿಯಲ್ಲಿ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಮುಂಬೈಗೆ ಬಂದರು.


ಅನುಪಮ್ ಖೇರ್ ಗೆ ಕಿಸ್ ಮಾಡಲು ನಿರಾಕರಿಸಿದ್ದರು!
೧೯೮೯ ರ ’ಲಡಾಯಿ’ ಚಿತ್ರದಲ್ಲಿನ ಒಂದು ಘಟನೆಯನ್ನು ಕಪಿಲ್ ಶರ್ಮಾ ಶೋ ಸೆಟ್‌ನಲ್ಲಿ ಅರ್ಚನಾ ಪುರಾಣ್ ಸಿಂಗ್ ನೆನಪಿಸಿ ಸ್ವತಃ ಈ ಕಥೆಯನ್ನು ಹೇಳಿದರು.
ಚುಂಬನದ ದೃಶ್ಯಕ್ಕಾಗಿ ಅರ್ಚನಾ ಆ ಸಮಯ ಅನುಪಮ್ ಅವರನ್ನು ನಿರಾಕರಿಸಿದ್ದರು. ಅರ್ಚನಾ ಈ ದೃಶ್ಯದಿಂದ ಭಯಗೊಂಡಿದ್ದು, ನಂತರ ಅನುಪಮ್ ಅವರೇ ನಿರ್ದೇಶಕ ದೀಪಕ್ ಶಿವದಾಸನಿ ಅವರೊಂದಿಗೆ ಮಾತನಾಡಿ ಈ ದೃಶ್ಯವನ್ನು ಚಿತ್ರದಿಂದ ತೆಗೆದುಹಾಕಿದ್ದರಂತೆ!
ಸನ್ನಿ ಡಿಯೋಲ್ ಜೊತೆ ಹಲವು ಹಾಟ್ ದೃಶ್ಯಗಳನ್ನು ಮಾಡಿದ್ದಾರೆ:
ಅನುಪಮ್ ಖೇರ್ ಜೊತೆ ಚುಂಬನದ ದೃಶ್ಯವನ್ನು ಮಾಡಿ ಹೆದರಿದ ನಂತರ ಅರ್ಚನಾ ಅವರಲ್ಲಿ ಗೊಂದಲಸ್ಥಿತಿ ಉಂಟಾಯ್ತು. ಆದರೆ ಮುಂದೆ ಅವರು ಸನ್ನಿ ಡಿಯೋಲ್ ಜೊತೆ ಅನೇಕ ಬಾರಿ ಹಾಟ್ ದೃಶ್ಯಗಳನ್ನು ನೀಡಿದ್ದಾರೆ. ೧೯೯೦ ರ ಆಗ್ ಕಾ ಗೋಲಾ ಚಿತ್ರದಲ್ಲಿ ನಟಿಯ ಅವತಾರವು ಅಭಿಮಾನಿಗಳನ್ನು ವಿಸ್ಮಯಗೊಳಿಸಿತ್ತು. ಚಿತ್ರದಲ್ಲಿ ಅರ್ಚನಾ ಸನ್ನಿ ಜೊತೆ ಒಂದಲ್ಲ ಹಲವು ಡೀಪ್ ಕಿಸ್ ದೃಶ್ಯಗಳನ್ನು ಮಾಡುವ ಮೂಲಕ ಸಂಚಲನ ಮೂಡಿಸಿದ್ದರು.
ಮೊದಲ ಮದುವೆ ಮುರಿದುಬಿದ್ದ ದುಃಖದಲ್ಲಿ ಪರ್ಮೀತ್ ಬೆಂಬಲಿಸಿದರು:
ಅರ್ಚನಾ ಪುರಾಣ್ ಸಿಂಗ್ ಅವರ ಮೊದಲ ಮದುವೆ ಮುರಿದುಬಿದ್ದಿದ್ದು ವಿಚ್ಛೇದನದ ನಂತರ ಅರ್ಚನಾ ಒಂಟಿಯಾಗಿದ್ದರು, ಅಂತಹ ಪರಿಸ್ಥಿತಿಯಲ್ಲಿ ಪರ್ಮೀತ್ ಸೇಠೀ ಅರ್ಚನಾಗೆ ಬೆಂಬಲ ನೀಡಿ ಅವರ ಜೀವನದಲ್ಲಿ ಸಂತೋಷವನ್ನು ತಂದರು. ಮದುವೆ ಮುರಿದ ನಂತರ ನಟಿ ಪ್ರೀತಿಯಲ್ಲಿ ನಂಬಿಕೆ ಕಳೆದುಕೊಂಡಿದ್ದರೂ, ಪರ್ಮೀತ್ ಅವರ ಪ್ರೀತಿಯು ೧೯೯೨ ರಲ್ಲಿ ಇಬ್ಬರೂ ಮದುವೆಯಾಗುವಂತೆ ಮಾಡಿತು.
ರಹಸ್ಯವಾಗಿ ಎರಡನೇ ಮದುವೆಯಾಗಿದ್ದರು: ಅರ್ಚನಾ ಪುರಾಣ್ ಸಿಂಗ್ ತನ್ನ ಎರಡನೇ ಮದುವೆಯ ಸತ್ಯವನ್ನು ೪ ವರ್ಷಗಳ ಕಾಲ ಪ್ರಪಂಚದಿಂದ ಮುಚ್ಚಿಟ್ಟಿದ್ದರು ಎಂದು ಕೆಲವೇ ಜನರಿಗೆ ತಿಳಿದಿದೆ. ದೇವಸ್ಥಾನದಲ್ಲಿ ಪರ್ಮೀತ್ ಸೇಠೀಯನ್ನು ರಹಸ್ಯವಾಗಿ ಮದುವೆಯಾದ ನಂತರ, ಅವರು ಪರಸ್ಪರ ರಹಸ್ಯವಾಗಿ ಭೇಟಿಯಾಗುತ್ತಿದ್ದರು. ಈ ಸತ್ಯವನ್ನು ಸ್ವತಃ ಅರ್ಚನಾ ಟಿವಿ ಶೋವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ದೇವ್ ಆನಂದ್ ಕಪ್ಪು ಕೋಟ್ ಧರಿಸುವುದಕ್ಕೆ ನಿಜವಾಗಿಯೂ ನಿಷೇಧವಿತ್ತೇ?

ದೇವ್ ಆನಂದ್ ರ ೧೦೦ ನೇ ಜನ್ಮ ವಾರ್ಷಿಕೋತ್ಸವ ಮಂಗಳವಾರ ಅವರ ಅಭಿಮಾನಿಗಳು ಆಚರಿಸಿದರು. ಅವರು ಬಾಲಿವುಡ್‌ನ ಎವರ್‌ಗ್ರೀನ್ ಹೀರೋ. ಅವರ ವಿಭಿನ್ನ ಶೈಲಿ ಮತ್ತು ವಿಶಿಷ್ಟವಾದ ಮಾತನಾಡುವ ಶೈಲಿಯಿಂದಾಗಿ,ಅವರು ಉದ್ಯಮದಲ್ಲಿ ತನಗಾಗಿ ಒಂದು ವಿಶಿಷ್ಟವಾದ ಗುರುತನ್ನು ಸೃಷ್ಟಿಸಿದ್ದರು. ಸಾವಿರಾರು ಹುಡುಗಿಯರು ಅ ದಿನಗಳಲ್ಲಿ ಅವರಿಗಾಗಿ ಹುಚ್ಚರಾಗಿದ್ದರು .


ದೇವ್ ಆನಂದ್ ಅವರಿಗೆ ಕಪ್ಪು ಕೋಟು ಹಾಕುವುದನ್ನು ನಿಷೇಧಿಸಿದ್ದನ್ನು ನಾವು ಆಗಾಗ್ಗೆ ಕೇಳಿರಬಹುದು .ಯಾಕೆಂದರೆ ದೇವ್ ರನ್ನು ಈ ಲುಕ್ ನಲ್ಲಿ ನೋಡಿದ ಮೇಲೆ ಹುಡುಗಿಯರು ತಮ್ಮ ಕಂಟ್ರೋಲ್ ತಪ್ಪಿ ಹೋಗುತ್ತಿದ್ದರಂತೆ!. ಕಪ್ಪು ಕೋಟ್ ನಿಷೇಧದ ಹಿಂದಿನ ಸತ್ಯ ಏನಿದೆ?
ಕಪ್ಪು ಕೋಟಿನವಹಿಂದಿನ ಸತ್ಯ:
ದೇವ್ ಆನಂದ್ ರು ಕಪ್ಪು ಕೋಟ್ ಧರಿಸುವುದನ್ನು ನಿಷೇಧಿಸಿದ್ದಾರೆ ಎನ್ನುವುದು ೯೦ ರ ದಶಕದಲ್ಲಿ ಕಾಳ್ಗಿಚ್ಚಿನಂತೆ ಹರಡಿದ ವದಂತಿಯಾಗಿತ್ತು. ೨೦೦೭ ರಲ್ಲಿ, ದೇವ್ ಸಾಹೇಬ್ ಅವರ ಜೀವನಚರಿತ್ರೆ ರೊಮ್ಯಾನ್ಸಿಂಗ್ ವಿತ್ ಲೈಫ್ ನ್ನು ಪ್ರಕಟಿಸಲಾಯಿತು. ಇದರಲ್ಲಿ ದೇವ್ ಸಾಹೇಬ್ ಅವರೇ ಇದು ಕೇವಲ ವದಂತಿಯೇ ಹೊರತು ಇನ್ನೇನೂ ಅಲ್ಲ ಎಂದು ಬಹಿರಂಗಪಡಿಸಿದ್ದಾರೆ. ಇಂತಹ ವದಂತಿಗಳು ಹಾರಾಡುತ್ತಲೇ ಇರುತ್ತವೆ ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದಿದ್ದರು.


ಫಿಲಂಫೇರ್ ಪ್ರಶಸ್ತಿಯನ್ನು ಪಡೆದವರು:
ಕಾಲಾ ಪಾನಿ ಚಿತ್ರಕ್ಕಾಗಿ ದೇವ್ ಆನಂದ್ ಅವರು ತಮ್ಮ ಮೊದಲ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ಈ ಚಿತ್ರಕ್ಕಾಗಿ ನಳಿನಿ ಜಯವಂತ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ಈ ಚಿತ್ರ ತನಗೆ ಸಂಬಂಧಿಸಿರುವ ಜಗತ್ತಿನ ಒಂದಲ್ಲ ಒಂದು ಕಥೆಯನ್ನು ಹುಟ್ಟು ಹಾಕಿದೆ ಎಂದು ದೇವ್ ಆನಂದ್ ಹೇಳಿದ್ದರು. ಕಪ್ಪು ಕೋಟ್ ಧರಿಸುವ ಕಥೆ ಇಲ್ಲಿಂದ ಪ್ರಾರಂಭವಾಯಿತು. “ವಾಸ್ತವವಾಗಿ ಕಾಲಾಪಾನಿಯಲ್ಲಿ, ನಾನು ಚಿತ್ರದುದ್ದಕ್ಕೂ ಕಪ್ಪು ಬಟ್ಟೆಯನ್ನು ಧರಿಸಿದ್ದೇನೆ.
ಆಗ ವದಂತಿ ಬಂದದ್ದು ಕಪ್ಪು ಬಟ್ಟೆ ಧರಿಸಲು ಇನ್ನು ತಾನು ಬಿಡುವುದಿಲ್ಲ ಎಂದು. ಏಕೆಂದರೆ ಹುಡುಗಿಯರು ಈ ವೇಷದಲ್ಲಿ ನನ್ನನ್ನು ನೋಡಿ ಪ್ರಜ್ಞೆ ತಪ್ಪುತ್ತಾರೆ. ಕೆಲವರು ಪ್ರಾಣ ತ್ಯಾಗಕ್ಕೂ ಸಿದ್ಧರಾಗುತ್ತಾರೆ. ಈ ಬಗ್ಗೆ ಸತ್ಯವನ್ನೇ ಹೇಳುತ್ತಾ ದೇವ್ ಸಾಹೇಬರು ಇದೊಂದು ದೊಡ್ಡ ಸುಳ್ಳು, ಹಾಗಂತ ಏನೂ ಇರಲಿಲ್ಲ, ನಾನು ಆಗಾಗ ಕಪ್ಪು ಬಟ್ಟೆ ತೊಡುತ್ತಿದ್ದೆ ಎಂದಿದ್ದರು.
ನ್ಯಾಯಾಲಯದ ತೀರ್ಪಿನ ಸತ್ಯ :
ಎವರ್ ಗ್ರೀನ್ ನಟ ದೇವಾನಂದ್ ತಮ್ಮ ಚಿತ್ರರಂಗದಲ್ಲಿ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಕಪ್ಪು ಬಟ್ಟೆ ಧರಿಸಲು ನ್ಯಾಯಾಲಯದ ನಿಷೇಧದ ಕುರಿತು ನಟ ಹೇಳಿದ್ದರು-“ಬಹುಶಃ ನಾನು ಕಾಲಾ ಪಾನಿ ಚಿತ್ರದಲ್ಲಿ ಕಪ್ಪು ಬಟ್ಟೆ ಧರಿಸಿದ್ದರಿಂದ ಈ ಸುದ್ದಿ ಹರಡಿದೆ . ಚಿತ್ರದಲ್ಲಿ ಮಗ ತನ್ನ ತಂದೆ ನಿರಪರಾಧಿ ಎಂದು ಸಾಬೀತುಪಡಿಸುವವರೆಗೆ ಕಪ್ಪು ಬಟ್ಟೆಯನ್ನು ಧರಿಸುವುದಾಗಿ ಭರವಸೆ ನೀಡಿದ್ದ.ಅದೇ ನಂತರ ವದಂತಿ ಆಯ್ತು.”
ಆದರೆ ಈ ನಿರ್ಧಾರವು ಯಾವುದೇ ನ್ಯಾಯಾಲಯದದಲ್ಲ, ಚಿತ್ರದ ಅಗತ್ಯಕ್ಕೆ ಅನುಗುಣವಾಗಿ ದೇವ್ ಆನಂದ್ ಅವರೇ ಧರಿಸಿದ್ದು. ಇಂತಹ ಪರಿಸ್ಥಿತಿಯಲ್ಲಿ ಕಪ್ಪು ಬಟ್ಟೆ ಧರಿಸಲು ನ್ಯಾಯಾಲಯ ವಿಧಿಸಿರುವ ನಿಷೇಧ ಕೇವಲ ಪೊಳ್ಳು ವದಂತಿ ಎಂದಿದ್ದರು.
ಅವರು ಲಂಡನ್ ನಲ್ಲಿ ಡಿಸೆಂಬರ್ ೩, ೨೦೧೧ ರಲ್ಲಿ ೮೮ ನೇ ವಯಸ್ಸಿನಲ್ಲಿನಿಧನರಾದರು.