ಅನುದಾನ ಹಂಚಿಕೆಯಲ್ಲಿ ವಿಪಕ್ಷ ಸದಸ್ಯರ ಕಡೆಗಣನೆ: ಅಬ್ದುಲ್ ಗಫೂರ್

ಸುಳ್ಯ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ

ಸುಳ್ಯ, ಎ.೧-  ತಾಲೂಕು ಪಂಚಾಯಿತಿ ಅನುದಾನದಲ್ಲಿ ಕಳೆದ ೫ ವರ್ಷಗಳಲ್ಲಿ ಕಾಂಗ್ರೆಸ್ ಸದಸ್ಯರಿಗೆ ತಾರತಮ್ಯ ಮಾಡಲಾಗಿದೆ. ಎಂದು ತಾ.ಪಂ.ವಿಪಕ್ಷ ಸದಸ್ಯ ಅಬ್ದುಲ್ ಗಫೂರ್ ಹೇಳಿದರು.

ಸುಳ್ಯ ತಾಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಈ ಅಬ್ದುಲ್ ಗಫೂರ್ ಈ ಆರೋಪ ಮಾಡಿದರು. ಬೆಳ್ಳಾರೆ ತಾಲೂಕು ಪಂಚಾಯಿತಿ ಕ್ಷೇತ್ರಕ್ಕೆ ತಾಲೂಕು ಪಂಚಾಯಿತಿ ಅನುದಾನ ನೀಡದೇ ತಾರತಮ್ಯ ಮಾಡಲಾಗಿದೆ. ಕಳೆದ ೫ ವರ್ಷಗಳಲ್ಲಿ ಇದೇ ರೀತಿಯ ವಿಚಾರಗಳು ಪುನರಾವರ್ತನೆ ಆಗಿದೆ. ಅನುದಾನಕ್ಕೆ ಕಳುಹಿಸಿದ ಪಟ್ಟಿಯನ್ನು ಕೇಳದೇ ಬದಲಾವಣೆ ಮಾಡಿದ ಘಟನೆ ಕೂಡ ನಡಿದೆ ಎಂದರು. ಇದಕ್ಕೆ ಉತ್ತರಿಸಿದ ತಾ.ಪಂ. ಅಧ್ಯಕ್ಷರು. ತಾಲೂಕಿನ ಎಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ಸಮಾನ ರೀತಿಯಲ್ಲಿ ನೋಡಿಕೊಂಡಿದ್ದೇವೆ. ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿಲ್ಲ. ಯಾವ ಸದಸ್ಯರನ್ನು ಕಡೆಗಣಿಸಿಲ್ಲ ಎಂದರು.

ಸದನದಲ್ಲಿ ಆಗುವ ಚರ್ಚೆಯನ್ನು ನಡಾವಳಿಯಲ್ಲಿ ತರುವ ಕೆಲಸ ಯಾರದ್ದು. ಇದಕ್ಕೆ ಸಮಂಜಸವಾದ ಉತ್ತರ ನೀಡಿ. ತಾ.ಪಂ. ಕಾರ್ಯನಿವಾಹಣಾಧಿಕಾರಿ ತಮ್ಮ ಕರ್ತವ್ಯದಲ್ಲಿ ಅಸಮರ್ಥರಾಗಿದ್ದಾರೆ ಎಂದು ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ ಹೇಳಿದರು.

ಪಂಜದಲ್ಲಿರುವ ಪಶು ವೈದ್ಯಕೀಯ ಆಸ್ಪತ್ರೆ ಕಟ್ಟಡ ಅಪಾಯದಲ್ಲಿದೆ. ಅನಾಹುತ ಆಗುವ ಮುಂದೆ ಅದನ್ನು ತೆಗೆಯುವ ಕೆಲಸ ಆಗಬೇಕು ಎಂದು ಸದಸ್ಯ ಅಬ್ದುಲ್ ಗಫೂರ್ ಹೇಳಿದರು. ಕಟ್ಟಡವನ್ನು ಕೆಡವಿ ಹೊಸ ಕಟ್ಟಡಕ್ಕೆ ನಿರ್ಣಯ ಮಾಡಲಾಯಿತು.

ಸುಳ್ಯ ನಗರದ ತ್ಯಾಜ್ಯವನ್ನು ಸುರಿಯುವ ಕಲ್ಚರ್ಪೆಯಲ್ಲಿ ವೈಜ್ಞಾನಿಕವಾಗಿ ನಡೆಯುತ್ತಿಲ್ಲ. ಇಲ್ಲಿಯವರೆಗೆ ಕಸ ವಿಲೇವಾರಿ ಆಗಿಲ್ಲ ಎಂದು ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ ಹೇಳಿದರು. ನಗರದಲ್ಲಿ ೧೪ ಕೋಟಿ ವೆಚ್ಚದಲ್ಲಿ ನಡೆದ ಒಳಚರಂಡಿ ಕಾಮಗಾರಿ ಅವ್ಯವ್ಯವಸ್ಥೆಯಲ್ಲಿದೆ. ಮಳೆಗಾಲದಲ್ಲಿ ಮ್ಯಾನ್ ಹೋಲ್‌ಗಳು ತೆರೆದು ಜನ ಸಂಚಾರಕ್ಕೆ ತೊಂದರೆ ಆಗುತ್ತದೆ. ನ.ಪಂ. ಕೂಡಲೇ ಗಮನ ಹರಿಸಬೇಕು ಎಂದು ರಾಧಾಕೃಷ್ಣ ಬೊಳ್ಳೂರು ಹೇಳಿದರು.

ಜಾಲ್ಸೂರಿನ ಎಸ್.ಸಿ ಕಾಲನಿಯೊಂದರ ಮೇಲೆ ವಿದ್ಯುತ್ ಎಚ್.ಟಿ.ಲೈನ್ ಹಾದು ಹೋಗಿದೆ. ತಂತಿ ಮಾರ್ಗವನ್ನು ಕಂಬ ತೆಗೆದು ಬೇರೆಡೆ ಸ್ಥಳಾಂತರ ಮಾಡಬೇಕು ಎಂದು ಹಲವು ಸಭೆಯಲ್ಲಿ ವಿಷಯ ಪ್ರಸ್ತಾಪಿಸಲಾಗಿದೆ. ಆದರೆ ಇಲ್ಲಿಯ ವರೆಗೆ ಕಾರ್ಯಕತಗೊಂಡಿಲ್ಲ ಎಂದು ಸದಸ್ಯ ತೀರ್ಥರಾಮ ಜಾಲ್ಸೂರು ಹೇಳಿದರು. ತೆರವಿ ಗೊಳಿಸಲು ಮತ್ತು ಅನುದಾನಕ್ಕೆ ಇಲಾಖೆಗೆ ಮನವಿ ಮಡಲಾಗಿದೆ ಎಂಧು ಮೆಸ್ಕಾಂ ಎ.ಇ ಹೇಳಿದರು. ವಿದ್ಯುತ್ ಕಂಬ ತೆರವು ಮಾಡಲು ಆದೇಶ ಬರುವವರೆಗೂ ಕಾಯಬೇಕಾ. ಅಪಾಯಗಳು ಸಂಭವಿಸಿದರೆ ಹೊಣೆ ಯಾರು ಎಂದು ಬೊಳ್ಳೂರು ರಾಧಾಕೃಷ್ಣ ಹೇಳಿದರು.

ಪಡಿತರ ಚೀಟಿ ತಿದ್ದುಪಡಿ ಇಲಾಖೆಯಲ್ಲಿಆಗುತ್ತಿಲ್ಲ. ಎಪಿಎಲ್ ಮತ್ತು ಬಿಪಿಎಲ್ ಕಾರ್ಡುಗಳು ಸಕಾಲದಲ್ಲಿ ಸಿಗುವಂತೆ ಮಾಡಬೇಕು ಎಂದು ಅಬ್ದುಲ್ ಗಫೂರ್ ಹೇಳಿದರು.

ಐವತ್ತೋಕ್ಲು ಗ್ರಾಮದಲ್ಲಿ ೧೨ ಕುಟುಂಬಗಳು ಮನೆ ಇಲ್ಲದೇ ಅತಂತ್ರದಲ್ಲಿದ್ದಾರೆ. ಅವರಿಗೆ ಮನೆ ನಂಬರ್, ವಿದ್ಯುತ್, ಆಧಾರ್ ಕಾರ್ಡ್ ಸರಕಾರದ ಯಾವ ವ್ಯವಸ್ಥೆಗಳು ಅವರಿಗೆ ಸಿಗುತ್ತಿಲ್ಲ.

ಇವರಿಗೆ ೯೪ಸಿ ಯೋಜನೆಯಲ್ಲಿ ಹಕ್ಕುಪತ್ರಗಳನ್ನು ಒದಗಿಸುವ ಕೆಲಸ ಮಾಡಬೇಕು ಎಂದು ಗಫೂರ್ ಹೇಳಿದರು. ಈ ಸ್ಥಳ ಡಿ.ಸಿ.ಮನ್ನ ಜಮೀನು ಅಗಿರುವುದರಿಂದ ಬೇರೆಯವರಿಗೆ ನೀಡಲು ಸಾಧ್ಯವಿಲ್ಲ. ಬೇರೆ ಸರಕಾರಿ ಜಾಗವನ್ನು ಗುರುತಿಸಿ ಹಕ್ಕುಪತ್ರ ನಿಡುವ ಕೆಲಸ ಮಾಡುತ್ತೇವೆ ಎಂದು ತಹಸೀಲ್ದಾರ್ ಅನಿತಾಲಕ್ಷ್ಮೀ ಹೇಳಿದರು.

ಸಭೆಯಲ್ಲಿ ತಾ.ಪಂ ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವೀ ಕಾಂಚೋಡು, ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಎನ್. ಭವಾನಿಶಂಕರ್, ತಹಸೀಲ್ದಾರ್ ಅನಿತಾಲಕ್ಷ್ಮೀ, ತಾ.ಪಂ. ಸದಸ್ಯರು, ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.