ಅನುದಾನ ಲಭ್ಯತೆಗೆ ಪ್ರಯತ್ನಿಸುವೆ : ಶಾಸಕ ಯಶವಂತರಾಯಗೌಡ ಪಾಟೀಲ

ಇಂಡಿ :ಮಾ.6:ಇಂಡಿ ತಾಲೂಕಿನಲ್ಲಿ ಕಳೆದ 20 ವರ್ಷಕ್ಕೂ ಹೆಚ್ಚು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅನೇಕ ಶಿಕ್ಷಣ ಸಂಸ್ಥೆಗಳಿದ್ದು ಅವುಗಳ ಅನುದಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ರೈಲ್ವೇ ಸ್ಟೇಶನ್ ಹತ್ತಿರ ಜ್ಞಾನಗಂಗೋತ್ರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಕಳೆದ ವರ್ಷ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗದ ಶಾಲೆಗಳ ಪ್ರತಿನಿಧಿಗಳು ನನ್ನನ್ನು ಭೇಟಿ ಯಾಗಿದ್ದರು. ಆಗ ವಿಧಾನಸಭೆಯಲ್ಲಿ ನಿಮ್ಮ ಪರವಾಗಿ ಧ್ವನಿ ಎತ್ತಿದ್ದೇನೆ. ಈಗ ನಮ್ಮ ಸರಕಾರವಿದೆ. ಶಿಕ್ಷಣ ಸಚಿವರಿಗೆ ಮತ್ತು ಮುಖ್ಯಮಂತ್ರಿಗಳಿಗೆ ನಿಮ್ಮ ಭಾವನೆಗಳನ್ನು ಮನದಟ್ಟು ಮಾಡುವೆ ಎಂದರು.
2013ರಿಂದ 2024ರವರೆಗೆ ತಾಲೂಕಿನ ಶೈಕ್ಷಣಿಕ ಅಭಿವೃದ್ದಿಗೆ ಶಾಸಕರ ಅನುಧಾನದಲ್ಲಿ 28.25 ಕೋಟಿ ಖರ್ಚು ಮಾಡಲಾಗಿದೆ ಎಂದರು.

ತಡವಲಗಾ ಶ್ರೀಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ದಿವ್ಯಸಾನಿಧ್ಯವಹಿಸಿ ಆರ್ಶೀವಚನ ನೀಡಿ, ಉಪವಿಭಾಗಾಧಿಕಾರಿ ಅಬೀದ ಗದ್ಯಾಳ , ಕ.ಸಾ.ಪ ತಾಲೂಕಾ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ,ಧನರಾಜ ಮುಜಗೊಂಡ  ಮಾತನಾಡಿದರು. 

ಡಯಟ್ ಉಪನ್ಯಾಸಕ ಎ.ಆರ್ ಮುಜಾವರ, ಚಿಕ್ಕಬೇವನೂರ ಗ್ರಾ.ಪಂ ಅಧ್ಯಕ್ಷ ಸುನೀಲ ಚವ್ಹಾಣ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ, ಜಟ್ಟಪ್ಪ ರವಳಿ, ಇಲಿಯಾಸ ಬೋರಾಮಣಿ, ಎಂ.ಡಿ ಶೇಖ, ಸಂಸ್ಥೆ ಪ್ರಧಾನ ಕಾರ್ಯದರ್ಶಿ ಜಿ.ಎನ್ ಘೋರ್ಪಡೆ ಮುಖ್ಯ ಗುರುಗಳು ,ಶಿಕ್ಷಕರು ಶಾಲಾ ಸಿಬಂದ್ದಿಗಳು ಉಪಸ್ಥಿತರಿದ್ದರು.