ಅನುದಾನ ರಹಿತ ಶಿಕ್ಷಕರಿಗೆ; ಸಹಾಯಧನ ಸರ್ಕಾರಕ್ಕೆ ಜಿಲ್ಲಾ ಸಂಘ ಅಭಿನಂದನೆ

ದಾವಣಗೆರೆ. ಜೂ.೪; ಕೊರೋನ ಹಾವಳಿಯಿಂದ ಸಂಕಷ್ಟದಲ್ಲಿರುವ ರಾಜ್ಯದ ಅನುದಾನರಹಿತ ಶಾಲಾ ಶಿಕ್ಷಕರಿಗೆ 5000 ರೂ. ಸಹಾಯಧನವನ್ನು ಘೋಷಿಸಿರುವ ಸರ್ಕಾರ ಒಟ್ಟು 100 ಕೋಟಿ ರೂ.ಗಳನ್ನು ಖಾಸಗಿ ಶಾಲಾ ಶಿಕ್ಷಕರಿಗೆ ನೀಡಿರುವುದು ಇತಿಹಾಸದಲ್ಲಿಯೇ ಪ್ರಥಮವಾಗಿದೆ. ಕೊನೆಗೂ ಶಿಕ್ಷಕರನೋವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಶಿಕ್ಷಣ ಸಚಿವರಾದ ಸುರೇಶ್‌ಕುಮಾರ್ ಅವರನ್ನು ದಾವಣಗೆರೆ ಜಿಲ್ಲೆಯ ಶಾಶ್ವತ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಸಂಘದ ಅಧ್ಯ್ಯಕ್ಷ ತ್ಯಾವಣಿಗಿ ವೀರಭದ್ರಸ್ವಾಮಿ, ಕಂದನಕೋವಿ ಪ್ರಕಾಶ್, ಪ್ರಕಾಶ್ ಹೆಚ್.ಜಿ., ದಿನೇಶ್ ಮಂಜುನಾಥಸ್ವಾಮಿ, ನಾಗರಾಜಯ್ಯ, ವೀರೇಶ್ ಬಿರಾದಾರ್, ಶಿವಕುಮಾರ್, ಬಸವರಾಜಪ್ಪ, ಚೇತನ್, ಅಬ್ದುಲ್, ಮಂಜಾನಾಯ್ಕ ಸೇರಿದಂತೆ ಮುಂತಾದವರು ಅಭಿನಂದಿಸಿದ್ದಾರೆ.