ಅನುದಾನ ರಹಿತ ಖಾಸಗಿ ಶಾಲೆ ಸಭೆ


ಸಂಜೆವಾಣಿ ವಾರ್ತೆ
ಕಾರಟಗಿ:ಮೇ:02: ಕ್ಷೇತ್ರ ಶಿಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ 2023-24 ನೇ ಸಾಲಿನ ಕಾರಟಗಿ ಅನುದಾನ ರಹಿತ ಖಾಸಗಿ ‌ಶಾಲೆಗಳ ಸಭೆಯನ್ನು ಮಾಡಲಾಯಿತು,
ಪಟ್ಟಣದ ಸೆಂಟ್ರಲ್ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಕ್ಷೇತ್ರ ಶಿಕ್ಷಣಧಿಕಾರಿಗಳು ಸೋಮಶೇಖರ್ ಗೌಡ ಮಾತನಾಡಿದರು, ಅನುದಾನ ರಹಿತ ಖಾಸಗಿ ‌ಶಾಲೆಗಳ ಆಡಳಿತ ಮಂಡಳಿ ಮತ್ತು ಮುಖ್ಯ ಗುರುಗಳನ್ನು ಉದ್ದೇಶಿಸಿ ಅವರು ಮಾತನಾಡಿದರು,
ಶಾಲೆ ಶುಲ್ಕ ನಿಗದಿ ಬ್ಯಾನರ್ ಪ್ರಕಟಿಸುವುದು ಶಾಲೆ ಯಲ್ಲಿ ಮೂಲಭೂತ ಸೌಕರ್ಯಗಳು ಒದಗಿಸುವುದು, ಆರ್ ಟಿ ಇ ಅಡಿಯಲ್ಲಿ ದಾಖಲಾದ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕಗಳನ್ನು ನೀಡುವುದು, ಶಾಲೆಯಲ್ಲಿ ಅಹ೯ತೆ ಹೊಂದಿದ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದು ಶಾಲೆಯ ನಿಗದಿತ ಅವಧಿಯಲ್ಲಿ ನವೀಕರಣ ಮಾಡಿ
ಸುವುದು ಸೇರಿದಂತೆ ಸಭೆಯಲ್ಲಿ ತಿಳಿಸಲಾಯಿತು,
ಶಾಲೆಯಲ್ಲಿ ಸಮವಸ್ತ್ರ ಮತ್ತು ಶೂ ಸಾಕ್ಸ್ ಟೈ ಹಾಗೂ ಸ್ಟೇಷನರಿ ವಸ್ತುಗಳನ್ನು ಮಾರಾಟ ಮಾಡದಂತೆ ಕ್ರಮವಹಿಸವುದು ಈ ಕುರಿತು ಯಾವುದೇ ದೂರುಗಳು ಬಂದರೇ ಶಾಲೆಯ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಖಡಕ್ ಸೂಚನೆ ನೀಡಿದರು,
ಶಿಕ್ಷಣ ಸಂಯೋಜಕರಾದ ಆನಂದ್, ನಾಗಮ್ಮನವರು ಖಾಸಗಿ ‌ಶಾಲೆಗಳ ಆಡಳಿತ ಮಂಡಳಿ ಅಧ್ಯಕ್ಷ ಶರಣಪ್ಪ ಅಂಗಡಿ, ಸಿ ಆರ್ ಪಿ ಗಳಾದ ತಿಮ್ಮಣ್ಣ ನಾಯಕ ಕೆ, ಭೀಮಣ್ಣ ಕರಡಿ, ಮಂಜುನಾಥ ಚಿಕ್ಕನಕೊಪ್ಪ, ಮತ್ತು ಖಾಸಗಿ ‌ಶಾಲೆಗಳ ಮುಖ್ಯ ಗುರುಗಳು ಭಾಗವಹಿಸಿದ್ದರು,