ಅನುದಾನ ಬಿಡುಗಡೆಗೆ ಅಕ್ಟೋಬರ್ 1ರವರೆಗೆ ಕರವೇ ಗಡುವು


ಬಾಗಲಕೋಟೆ: ಏಪ್ರೀಲ್ 7 : 2014-15 ರಂದು ಬಾಗಲಕೋಟೆಗೆ ಘೋಷಣೆಯಾಗಿರುವ ಸರಕಾರಿ ವೈದ್ಯಕೀಯ ಕಾಲೇಜಿಗೆ ಬೇಕಾದ ಅನುದಾನವನ್ನು ಬಿಡುಗಡೆ ಮಾಡಲು ಅಕ್ಟೋಬರ 1ರವರೆಗೆ ಗಡುವು ಎಂದು ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರಮೇಶ ಬದ್ನೂರ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಅವರು ಇಂದು ನಗರದ ಬಸವೇಶ್ವರ ವೃತ್ತದಲ್ಲಿ ಜರುಗಿದ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಜರುಗಿದ ಬೃಹತ್ ಜನಾಂದೋಲನ ಕಾರ್ಯಕ್ರಮದಲದಲಿ ಮಾತನಾಡಿ, ಜಿಲ್ಲೆಯ ಸಚಿವರು ಮತ್ತು ಶಾಸಕರು ತಮ್ಮ ಬೇಜವಾಬ್ದಾರಿಯನ್ನು ಮರೆತು ಕಾಲೇಜು ಆರಂಭಕ್ಕೆ ಸರಕಾರದ ಮೇಲೆ ಒತ್ತಡ ಹೇರಬೇಕು. ಬಾಗಲಕೋಟೆಯ ಶಾಸಕರು ಕೊಳಕು ರಾಜಕಾರಣ ಮಾಡುವವರು ಇಂತಹ ಹೋರಾಟವನ್ನು ಮಾಡುತ್ತಿದ್ದಾರೆ ಎಂದು ನೀಡಿದ ಹೇಳಿಕೆಯನ್ನು ಕಟುವಾಗಿ ಖಂಡಿಸಿದ ಅವರು, ನಿಮ್ಮ ಸರ್ವಾಧಿಕಾರಿ ಧೋರಣೆಯಿಂದ ಹೋರಾಟವನ್ನು ಹತ್ತಿಕ್ಕಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮೇಲೆ ಒತ್ತಡ ಹೇರಿ ಕರೋನಾ ನೆಪವೊಡ್ಡಿ, ಸಾಕಷ್ಟು ಪ್ರಯತ್ನಗಳು ನಡೆದವು. ನಾವು ಮಾಡುತ್ತಿರುವ ಹೋರಾಟ ಜಿಲ್ಲೆಯ ಬಡವರ, ರೈತರ, ಕೃಷಿ ಕಾರ್ಮಿಕರ ಮತ್ತು ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಠಿಯಿಂದ ಹೋರಾಟ ಮಾಡುತ್ತಿದ್ದೇವೆ ಏಪ್ರಿಲ್ 06 ಇಂದು ಸರಕಾರಿ ವೈಧ್ಯಕೀಯ ಮಹಾವಿದ್ಯಾಲಯದ ಅಡಿಗಲ್ಲು ಸಮಾರಂಭ ಇಂದು ನಡೆದ ಜನಾಂದೋಲನ ಕಾರ್ಯಕ್ರಮ ಅಂತ್ಯವಲ್ಲ ಇದು ಆರಂಭ. ಜಿಲ್ಲೆಗೆ ಮಂಜೂರಾಗಿರುವ ಕಾಲೇಜು ಆರಂಭವಾಗುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ತಮ್ಮ ಮೊಂಡುತನವನ್ನು ಬಿಟ್ಟು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲು ಮುಂದಾಗಬೇಕು. ಇಲ್ಲದಿದ್ದರೆ ಮುಂಬರುವ ದಿನಮಾನದಲ್ಲಿ ಜನತೆಯೇ ನಿಮಗೆ ತಕ್ಕಪಾಠ ಕಲಿಸುತ್ತಾರೆ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ, ಅಕ್ಟೋಬರ್ 1ರೊಳಗಾಗಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಕಾಲೇಜು ಆರಂಭಕ್ಕೆ ಬೇಕಾದ ಅನುದಾನವನ್ನು ಬಿಡುಗಡೆ ಮಾಡದಿದ್ದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.
ಕರವೇ ರಾಜ್ಯ ಉಪಾಧ್ಯಕ್ಷ ಎಚ್.ಎಸ್.ಸೋಂಪೂರ ಮಾತನಾಡಿ ಸಂಗೊಳ್ಳಿ ರಾಯಣ್ಣ, ವೀರರಾಣಿ ಕಿತ್ತೂರ ಚೆನ್ನಮ್ಮ, ಅಣ್ಣ ಬಸವಣ್ಣನವರ ನಡೆದಾಡಿದ ನಾಡಿನಲ್ಲಿ ಒಂದೇ ಒಂದು ಮೆಡಿಕಲ್ ಕಾಲೇಜನ್ನು ಆರಂಭಕ್ಕೆ ಇಂತಹ ಹೋರಾಟ ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ, ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಮೇಲ್ಮನೆ ಮತ್ತು ಕೆಳಮನೆಯಲ್ಲಿ ಇಬ್ಬರು ವಿರೋಧ ಪಕ್ಷದ ನಾಯಕರಿದ್ದಾರೆ. ಅವರು ಅಧಿವೇಶನದಲ್ಲಿ ಮಾತನಾಡಿ ಮಂಜೂರಾದ ಕಾಲೇಜಿಗೆ ಅನುದಾನ ಬಿಡುಗಡೆ ಮಾಡಿಸಿ ತಮ್ಮ ಮಾನವೀಯತೆ ಮೆರೆಯಬೇಕು ಎಂದು ಹೇಳಿದರು.
ಸಾಮಾಜಿಕ ಹೋರಾಟಗಾರ ನಾಗರಾಜ ಹೊಂಗಲ್
ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ
ಕರವೇ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ಬಸನಗೌಡ ಪಾಟೀಲ
ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಆರ್.ಡಿ.ಬಾಬು, ಆತ್ಮಾರಾಮ ನೀಲನಾಯಕ, ಡಿಎಸ್‍ಎಸ್ ಜಿಲ್ಲಾಧ್ಯಕ್ಷ ಯುವರಾಜ ಬಂಡಿ ಸಂತೋಷ ಹೊಕ್ರಾಣಿ, ಜಿಲ್ಲಾ ಕಾಂಗ್ರೆಸ್ ಎಸ್ಸಿ ವಿಭಾಗದ ಜಿಲ್ಲಾಧ್ಯಕ್ಷ ರಾಜು ಎಸ್.ಮನ್ನಿಕೇರಿ, ನಗರಸಭಾ ಸದಸ್ಯ ಚೆನ್ನವೀರ ಅಂಗಡಿ, ಹಾಜಿಸಾಬ ದಂಡಿನ, ಮುಖಂಡರಾದ ಗೋವಿಂದ ಬಳ್ಳಾರಿ, ಮಂಜುನಾಥ ಮುಚಖಂಡಿ, ಮಂಜುನಾಥ ಪುರತಗೇರಿ, ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಅಮರೇಶ ಕೊಳ್ಳಿ, ಮಹಿಳಾ ಮುಖಂಡರಾದ ಭಾಗ್ಯಶ್ರೀ ಬೆಟಗೇರಿ, ಸವಿತಾ ಹಿರೇಮಠ, ಸಹನಾ ಅಂಗಡಿ, ಜಯಶ್ರೀ ಸಾಲಿಮಠ, ಕರವೇ ಪದಾಧಿಕಾರಿಗಳಾದ ಬಸವರಾಜ ಧರ್ಮಂತಿ, ಬಸವರಾಜ ಅಂಬಿಗೇರ, ವಿನೂತ ಮೇಲಿನಮನಿ, ಮಲ್ಲು ಕಟ್ಟಿಮನಿ, ರಮಜಾನ ನಧಾಫ, ಅಕ್ಷಯ ಚವ್ಹಾಣ, ರವಿ ಶಿಂಧೆ,ದೇವೆಂದ್ರ ಅಸ್ಕಿ, ಡಿ.ಡಿ.ನದಾಫ, ಪ್ರವೀಣ ಪಾಟೀಲ, ಮಂಜು ಪವಾರ, ಆಕಾಶ ಆಸಂಗಿ, ಮಂಜು ರಾಮದುರ್ಗ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ಕರವೇ ಪದಾಧಿಕಾರಿಗಳು, ಮಹಿಳೆಯರು, ವಿವಿಧ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.