ಅನುದಾನ ನೀಡುವುದಾಗಿ ಹೇಳಿ ಮಾತಿಗೆ ತಪ್ಪಿದ  ಶಾಸಕರು; ಆರೋಪ

ದಾವಣಗೆರೆ. ಮಾ.೨೭; ದೇವಸ್ಥಾನದ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ನೀಡುವುದಾಗಿ ಹೇಳಿದ್ದ ಜಗಳೂರು ಶಾಸಕರು ಮಾತಿಗೆ ತಪ್ಪಿದ್ದಾರೆ ಎಂದು ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯ ಸಂಚಾಲಕ ಡಾ‌.ವಿ.ಹೆಚ್ ಹನುಮಂತಪ್ಪ ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶ್ರೀ ಅಂಜನೇಯ ಸ್ವಾಮಿ ಪುರುಷ ಸ್ವಸಹಾಯ ಟ್ರಸ್ಟ್‌  ಯರಲಕಟ್ಟೆ ಸಹಯೋಗದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ನಡೆಯುತ್ತಿದೆ. ಯರಲಕಟ್ಟೆ ಗ್ರಾಮದ ಭೋವಿ ಕಾಲೋನಿಯಲ್ಲಿ 200 ವರ್ಷಗಳ ಹಳೇ ದೇವಸ್ಥಾನ ಅಭಿವೃದ್ಧಿ ಸಂಬಂಧ ಕಳೆದ 2021 ರ ಡಿಸೆಂಬರ್  26 ರಂದು ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಬುದ್ಧ ಬಸವ ಅಂಬೇಡ್ಕರ್ ವಿಗ್ರಹಗಳ ಪ್ರತಿಷ್ಠಾಪನೆಯ ಅನಾವರಣ ಚಿತ್ರದುರ್ಗದ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಇವರಿಂದ ನೆರವೇರಿತ್ತು ಈ ವೇಳೆ ಸಿದ್ದರಾಮೇಶ್ವರ ಭವನಕ್ಕೆ ಶಂಕುಸ್ಥಾಪನೆಯಂದು ಶಾಸಕ  ಎಸ್. ವಿ. ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿ ಸಿದ್ದರಾಮೇಶ್ವರ ಸಮುದಾಯ ಭವನಕ್ಕೆ ಶಾಸಕರ ಅನುದಾನದಲ್ಲಿ ಸಹಾಯ ಮಾಡುವುದಾಗಿ ತಿಳಿಸಿದ್ದರು ನಂತರದಲ್ಲಿ ಅನುದಾನದ ನೆರವು ಕೋರಿ ನೂರಾರು ಬಾರಿ ಭೇಟಿ ಮಾಡಿದಾಗಲೂ ಬರೀ ಸುಳ್ಳು ಆಶ್ವಾಸನೆ ನೀಡಿದ್ದರು. ನಂತರ ಒತ್ತಾಯದ ಮೇರೆಗೆ ಕಾಟಾಚಾರಕ್ಕೆ ಎಂಬಂತೆ 2022 ಆಗಸ್ಟ್ 27  ರಂದು ಜಿಲ್ಲಾಧಿಕಾರಿಗಳಿಗೆ ಇಲಾಖೆಯಲ್ಲಿನ ಉಳಿಕೆ ಅನುದಾನದಲ್ಲಿ ಭರಿಸಲು ಶಿಫಾರಸ್ಸು ಮಾಡಿದ್ದರು ಆದರೆ ಆ ಅನುದಾನ ಲಭ್ಯವಿಲ್ಲವೆಂಬ ಕಾರಣಕ್ಕೆ ವಾಪ‌ಸ್ ಪಡೆಯಲಾಗಿತ್ತು.ಮತ್ತೊಮ್ಮೆ  2023 ರ ಜನವರಿ 1 ರಲ್ಲಿ ಶಾಸಕರ ಅನುದಾನದಲ್ಲಿ ರೂ 4,9ಲಕ್ಷ ಮೊತ್ತಕ್ಕೆ ಶಿಫಾರಸ್ಸು ಮಾಡಲಾಗಿತ್ತು. 200 ವರ್ಷಗಳ ಹಿಂದಿನ ಪರಿಶಿಷ್ಟ ಜಾತಿ ಭೋವಿ ಜನಾಂಗಗಳಿಂದ ನಿರ್ಮಿಸಿದ ದೇವಸ್ಥಾನ ಟ್ರಸ್ಟ್ ಹೆಸರಲ್ಲಿ ಇಲ್ಲ ಎಂಬ ಕಾರಣ ನೀಡಿ ಅನುದಾನ ಶಿಫಾರಸ್ಸು ಬದಲಾಯಿಸಿ ವಂಚನೆ ಮಾಡಿದ್ದಾರೆಂದು ಆರೋಪಿಸಿದರು.ಇದೀಗ ಕಾಮಗಾರಿ ಬದಲಾಯಿಸಿ ಭೋವಿ ಕಾಲೋನಿ ಯಿಂದ ಸ್ಮಶಾನದವರೆಗಿನ ಗ್ರಾಮ ರಸ್ತೆ ಕಾಮಗಾರಿ ನೆಪದಲ್ಲಿ ದೇವಸ್ಥಾನಕ್ಕೆ ಬಳಸಲು ನೀಡಿದ್ದ ಅನುದಾನ ಹಿಂಪಡೆಯುವ ಮೂಲಕ ಶಾಸಕರು ಅನುದಾನ ಬೇಕಾಬಿಟ್ಟಿ ಬಳಸಿದ್ದಾರೆ ಎಂದು ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಅಂಜಿನಪ್ಪ,ಹೆಚ್ ಸಂಜೀವಪ್ಪ, ವಿ.ಮಂಜುನಾಥ್,ಚೌಡಮ್ಮ ಉಪಸ್ಥಿತರಿದ್ದರು.