ಅನುದಾನಿತ ಶಾಲೆಗಳ ಸುಧಾರಣೆಗೆ ಒತ್ತಾಯ

ಮಾನ್ವಿ,ಜೂ.೧೯-
ಕನ್ನಡ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶಿಕ್ಷಕರನ್ನು ನೇಮಿಸುವಂತೆ ನಿವೃತ್ತ ಮುಖ್ಯಗುರುಗಳು ಹಾಗೂ ಅನುದಾನಿತ ಶಾಲೆಗಳ ನಿಕಟಪೂರ್ವ ಜಿಲ್ಲಾ ಅಧ್ಯಕ್ಷರ ಎಂ.ರಾಮಲಿಂಗಪ್ಪ ಪತ್ರಿಕೆ ಹೇಳಿಕೆಯ ಮುಖಾಂತರ ಸರಕಾರವನ್ನು ಕಾಯಿಸಿದ್ದಾರೆ.
ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ನಿವೃತ್ತಿ, ಮರಣ, ರಾಜೀನಾಮೆಯಿಂದ ತೆರವಾದ ಹುದ್ದೆಗಳಿಗೆ ಕಳೆದ ೨೧ ವರ್ಷಗಳಿಂದ (೨೦೦೨ರ ನಂತರ) ಹೆಚ್ಚುವರಿ ಎಂಬ ನೆಪವೊಡ್ಡಿ ಕರ್ನಾಟಕ ಸರಕಾರ ಖಾಲಿ ಹುದ್ದೆಗಳನ್ನು ತುಂಬಿಕೊಳ್ಳಲು ಅವಕಾಶವನ್ನೇ ಇಲ್ಲ, ಕನ್ನಡ ಮಾಧ್ಯಮದ ಎಷ್ಟೋ ಶಾಲೆಗಳು ಮುಚ್ಚುತ್ತಿವೆ, ಮುಚ್ಚಿವೆ, ಸರಕಾರಿ ಶಾಲಾ ಮಕ್ಕಳಿಗೊಂದು ಕಾನೂನು ಅನುದಾನಿತ ಶಾಲಾ ಮಕ್ಕಳಿಗೊಂದು ಕಾನೂನು ಈ ಭೇದ ಭಾವವನ್ನು ಮಾಡಿದವರು ಜನಪ್ರತಿನಿಧಿಗಳೇ ಅಥವಾ ಅಧಿಕಾರಿ ವರ್ಗವೇ, ತಿಳಿಯದಾಗಿದೆ.
ಶೈಕ್ಷಣಿಕವಾಗಿ ಮಲತಾಯ ನೀತಿಧೋರಣೆ ಬದಲಾಗಬೇಕಿದೆ. ರಾಯಚೂರು ಜಿಲ್ಲೆ ಹಾಗೂ ‘ರಾಜ್ಯಾದ್ಯಂತ ಇರುವ ಅನುದಾನಿತ ಶಾಲೆಗಳ ಮಕ್ಕಳ ಸಂಖ್ಯೆ ಹೆಚ್ಚಾಗಿರುವ ಶಾಲೆಗಳಲ್ಲಿ ಹುದ್ದೆಗಳು ಖಾಲಿ ಇವೆ, ಇರುವ ಶಿಕ್ಷಕರಿಗೆ ಸಂಬಳಕೊಟ್ಟರೆ ಮಾತ್ರ ಸಾಲದು ಅನುದಾನಿತ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಕಡೆ ಸರಕಾರದ ನಿರ್ಲಕ್ಷ್ಯ ಧೋರಣೆ ಬದಲಾಗಬೇಕು, ಇಲ್ಲದಿದ್ದರೆ ಪರೋಕ್ಷವಾಗಿ ಅನುದಾನಿತ ಶಾಲೆಗಳ ಮಕ್ಕಳ, ವಿದ್ಯಾಭ್ಯಾಸಕ್ಕೆ ಸರಕಾರವೇ ಕಾರಣವಾಗಿತು.
ಎಷ್ಟೋ ಸರಕಾರಗಳು ಬಂದು, ಹೋದವು, ತಾರತಮ್ಯ ನೀತಿ ಬದಲಾವಣೆ ಆಗಲಿಲ್ಲ. ಕನ್ನಡ ಅನುದಾನಿತ ಶಾಲೆಗಳ ಮಕ್ಕಳು ಈ ರಾಜ್ಯದವರು ಹೌದೋ, ಅಲ್ಲಾ, ಸರಕಾರವನ್ನಾಳುವ ಸಂಬಂಧಿಸಿದ ಮಂತ್ರಿಗಳು ಈಗಲಾದರೂ ಎಚ್ಚೆತ್ತು ಮಕ್ಕಳ ಕಲಿಕೆಗೆ ಅನ್ಯಾಯ ಮಾಡಬೇಡಿ, ಸರಕಾರ ನಡೆಸುತ್ತಿರುವ ನಾಯಕರು ಕಿಂಚಿತ್ತು ಯೋಚಿಸಿ, ಕನ್ನಡ ಶಾಲೆಗಳ ಉಳಿವಿಗೆ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮಕ್ಕಳ ಸಂಖ್ಯೆಗನುಗುಣವಾಗಿ ಸರಕಾರಿ ಶಾಲಾ ಮಕ್ಕಳಿಗೆ ಅನ್ವಯವಾಗುವ ನಿಯಮದಂತೆ ಖಾಲಿ ಹುದ್ದೆಗಳಿಗೆ ಶಿಕ್ಷಕರನ್ನು ನೇಮಿಸಿ ಎಂದು ನಿವೃತ್ತ ಮುಖ್ಯಗುರುಗಳು ಹಾಗೂ ಸಂಘದ ನಿಕಟ ಪೂರ್ವ ರಾಯಚೂರು ಜಿಲ್ಲಾಧ್ಯಕ್ಷ ಎಂ.ರಾಮಲಿಂಗಪ್ಪ ಸರಕಾರಕ್ಕೆ ಒತ್ತಾಯಿಸಿದ್ದಾರೆ.