ಅನುದಾನಿತ ಶಾಲೆಗಳಲ್ಲಿ 7 ಸಾವಿರ ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹ

ವಿಜಯಪುರ,ಜ.31:ರಾಜ್ಯದಲ್ಲಿ ಅನುದಾನಿತ ಶಾಲೆಗಳಲ್ಲಿ ಖಾಲಿ ಬಿದ್ದಿರುವ ಸುಮಾರು 7 ಸಾವಿರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ಅನುದಾನಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ರಿ) ರಾಜ್ಯಾಧ್ಯಕ್ಷ ವಾಯ್.ಎಚ್. ಹುಚ್ಚಯ್ಯವರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ನಗರದ ಶ್ರೀ ಜಗಜ್ಯೋತಿ ಬಸವೇಶ್ವರ ವಿದ್ಯಾ ಸಂಸ್ಥೆಯಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ರಿ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಸುಮಾರು 3500 ಅನುದಾನಿತ ಪ್ರೌಢ ಶಾಲೆಗಳು ನಡೆಯುತ್ತಿದ್ದು ಇವುಗಳೆಲ್ಲವೂ ಕನ್ನಡ ಮಾಧ್ಯಮ ಶಾಲೆಗಳಾಗಿವೆ. ಬಹುತೇಕ ಶಾಲೆಗಳು ಗ್ರಾಮೀಣ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಈ ಶಾಲೆಗಳಲ್ಲಿ ಸುಮಾರು 7 ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಈ ಶಾಲೆಗಳಲ್ಲಿ 2016ನೇ ಸಾಲಿನಿಂದ ನಿವೃತ್ತಿ, ನಿಧನ, ರಾಜೀನಾಮೆ, ವರ್ಗಾವಣೆ ಇತ್ಯಾದಿ ಕಾರಣಗಳಿಂದಾಗಿ ಸುಮಾರು 7 ಸಾವಿರ ಹುದ್ದೆಗಳು ಖಾಲಿ ಇವೆ. ಇವುಗಳನ್ನು ಭರ್ತಿ ಮಾಡಿಕೊಳ್ಳಲು ಸರಕಾರ ಅನುಮತಿ ನೀಡುತ್ತಿಲ್ಲ. ಹೀಗಾಗಿ ಇಂತಹ ಕನ್ನಡ ಮಾಧ್ಯಮ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಎಂಬುದು ಮರೀಚಿಕೆಯಾಗಿದೆ ಎಂದು ಹೇಳಿದರು.

6-14 ವರ್ಷದ ವಯೋಮಾನದ ಮಕ್ಕಳಿಗೆ ಉಚಿತ ಕಡ್ಡಾಯ ಶಿಕ್ಷಣ ನೀಡುವುದು ನಾಗರಿಕ ಸರಕಾರದ ಆದ್ಯ ಕರ್ತವ್ಯವಾಗಿದೆ. ಇದು ಮಕ್ಕಳ ಶಿಕ್ಷಣದ ಹಕ್ಕು (ಆರ್‍ಟಿಇ) ಕೂಡ ಆದರೆ ಕರ್ನಾಟಕ ಸರಕಾರ ಇವುಗಳನ್ನು ಪರಿಗಣಿಸದೆ ಮಕ್ಕಳಿಗೆ ನೇರ ಶಿಕ್ಷಣ ವಂಚನೆ ಮಾಡುತ್ತಿದೆ. ಕರ್ನಾಟಕ ಉಚ್ಚ ನ್ಯಾಯಾಲಯ ಈ ಬಗ್ಗೆ ದಿನಾಂಕ 8-12-2023 ರಂದು ನೀಡಿರುವ ತೀರ್ಪನ್ನು ಸಹ ಸರಕಾರ ಅನುಷ್ಠಾನಗೊಳಿಸುತ್ತಿಲ್ಲ ಜೊತೆಗೆ ಡಿ-ದರ್ಜೆ ನೌಕರರ ನೇಮಕಾತಿ ಇಲ್ಲ ಹಾಗೂ ಪದವಿಪೂರ್ವ ಕಾಲೇಜುಗಳ ಕಾರ್ಯಭಾರ ಅವಧಿಗಳನ್ನು ನೇಮಕಾತಿಯಲ್ಲಿ ಹಾಗೂ ತದನಂತರದ ಸಂದರ್ಭಗಳಲ್ಲಿ ಕೇಳಬಾರದು ಜೊತೆಗೆ ಐಟಿಐ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡಬೇಕು. ಮಾನ್ಯತೆ ನವೀಕರಣವನ್ನು ಕನಿಷ್ಠ 5 ವರ್ಷಕ್ಕೊಮ್ಮೆ ಕೇಳಬೇಕು. ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು 2015 ರಿಂದ ಅನುದಾನವನ್ನು ನೀಡಬೇಕು. ನ್ಯಾಯಾಲಯದ ಆದೇಶ ಪಾಲಿಸುವಂತೆ ಸರಕಾರವನ್ನು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಒಕ್ಕೂಟದ ನ್ಯಾಯಯುತ ಹೋರಾಟವನ್ನು ತೀವ್ರಗೊಳಿಸಲು ತೀರ್ಮಾನಿಸಲಾಯಿತು.

ಈ ಸಭೆಯಲ್ಲಿ ಒಕ್ಕೂಟ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಾಜ ಅಯ್ಯರ ಸೇರಿದಂತೆ ವಿಜಯಪುರ ಜಿಲ್ಲಾಧ್ಯಕ್ಷ ಎಲ್.ಬಿ. ಪಾಟೀಲ ಹಾಗೂ ಜಿಲ್ಲಾ ಪದಾಧಿಕಾರಿಗಳನ್ನಾಗಿ ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು.

ಎಚ್.ಎಸ್. ಪಾಟೀಲ (ತಾಳಿಕೋಟಿ) ಎಂ.ಕೆ. ಕುಲಕರ್ಣಿ ವಕೀಲರು (ವಿಜಯಪುರ), ಶಿವಕುಮಾರ ಗುಂದಗಿ (ಆಲಮೇಲ), ಸುಭಾಸಗೌಡ ಪಾಟೀಲ (ಮನಗೂಳಿ), ಎಸ್.ಆರ್. ವಿಭೂತಿ (ಮುದ್ದೇಬಿಹಾಳ) ಮಿಲಿಂದ ಚಂಚಲಕರ (ವಿಜಯಪುರ) ಲಕ್ಷ್ಮಣ ಅಂಗಡಿ (ದೇ.ಹಿಪ್ಪರಗಿ) ಬಿ.ಆರ್. ಪಾಟೀಲ (ಬಿಎಲ್‍ಡಿಇ ವಿಜಯಪುರ) ಎಂ.ಎಸ್. ಜೋಗೂರ (ಕಲಕೇರಿ) ಆರ್.ಎಂ. ಕೋರಿ (ಹೂ.ಹಿಪ್ಪರಗಿ) ಕಾಶೀನಾಥ ಮುರಾಳ (ತಾಳಿಕೋಟಿ) ಎಂ.ಎಸ್. ನಾವದಗಿ (ಮುದ್ದೇಬಿಹಾಳ), ಬಸವರಾಜ ಬಿಜ್ಜರಗಿ, ರತನಸಿಂಗ್ ರಾಠೋಡ (ಇಂಡಿ) ಹಾಗೂ ಸಿದ್ದರಾಮಪ್ಪ ಜಿ. ನಾಗಠಾಣ (ನಿಡಗುಂದಿ)À ಅವರನ್ನು ಆಯ್ಕೆ ಮಾಡಲಾಗಿದೆ.