ಅನುದಾನಿತ ಶಾಲಾ ಶಿಕ್ಷಕರ ಪಿಂಚಣಿ ಸಮಸ್ಯೆ ಬಗೆಹರಿಸಲು ಒತ್ತಾಯ

ಕಲಬುರಗಿ,ನ.10-ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಮಲಾಪುರ ಘಟಕದ ಅಧ್ಯಕ್ಷ ಅನಿಲ್ ಕುಮಾರ್ ಕೋರೆ ಹಾಗೂ ಕಾರ್ಯದರ್ಶಿ ಇಬ್ರಾಹಿಂ ಅವರ ನೇತೃತ್ವದಲ್ಲಿ ಬುಧವಾರ ಗ್ರಾಮೀಣ ಮತ ಕ್ಷೇತ್ರದ ಶಾಸಕ ಬಸವರಾe ಮತ್ತಿಮೂಡ ಅವರನ್ನು ಭೇಟಿ ನೀಡಿ ಮನವಿಪತ್ರ ಸಲ್ಲಿಸಲಾಯಿತು.
ಅನುದಾನಿತ ಶಾಲಾ ಶಿಕ್ಷಕರ ಪಿಂಚಣಿಯ ಸಮಸ್ಯೆ ಕುರಿತು ಶಾಸಕರೊಂದಿಗೆ ಕುಲಂಕುಶವಾಗಿ ಚರ್ಚಿಸಿ ಶಿಕ್ಷಕರ ಸಮಸ್ಯೆಯನ್ನು ಪರಿಹರಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಬೇಕೆಂದು ವಿನಂತಿಸಲಾಯಿತು.
ಶಿಕ್ಷಕರ ಸಮಸ್ಯೆಗಳ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾe ಬೊಮ್ಮಾಯಿ ಅವರ ಬಳಿ ಚರ್ಚಿಸಿ ಶಿಕ್ಷಕರ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಕಲ್ಪಿಸುವಂತೆ ವಿನಂತಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ಮರ್ತೂರ್, ಶಿವಲಿಂಗಪ್ಪ ಎಸ್. ಕಟ್ಟಳ್ಳಿ, ನಿವೃತ್ತ ಶಿಕ್ಷಕ ನಾಗಶೆಟ್ಟಿ, ಸುಭಾಷ ಚಂದ್ರ ಪಂಚಾಳ, ಸಂಜೀವ ಲೋಣಿ, ಜಯಸಿಂಗ್ ಜಾಧಾವ, ಸುಧಾಕರ್ ಉಪಸ್ಥಿತರಿದ್ದರು.