
(ಸಂಜೆವಾಣಿ ವಾರ್ತೆ)
ಬ್ಯಾಡಗಿ,ಆ2: ನಿರ್ಮಾಣ ಹಂತದಲ್ಲಿರುವ ಒಳಾಂಗಣ ಕ್ರೀಡಾಂಗಣಕ್ಕೆ (ಇನ್‍ಡೋರ್ ಸ್ಟೇಡಿಯಂ) ರೂ.2 ಕೋಟಿ ಅನುದಾನ ಬಿಡುಗಡೆ ಗೊಳಿಸುವ ಮೂಲಕ ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸಿಕೊಡುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದರು.
ಪಟ್ಟಣದ ಎಸ್.ಜೆ.ಜೆ.ಎಂ. ತಾಲೂಕಾ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಅಮೇಚೂರ್ ಬಾಡಿ ಬಿಲ್ಡಿಂಗ್ ಅಸೋಸಿಯೇ?Àನ್ ಇವರ ಸಹಯೋಗದೊಂದಿಗೆ `ವಾರ್ ಥಾರ್ ಕ್ಲಾಸಿಕ್ 2023′ ಅಂತರ ಜಿಲ್ಲಾ ಮಟ್ಟದ ದೇಹದಾಢ್ರ್ಯ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ 2013 ರಲ್ಲಿ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ನಮ್ಮದೇ ಸರ್ಕಾರ ಕ್ರೀಡಾಪಟುಗಳ ಅನುಕೂಲಕ್ಕೆ ರೂ.1 ಕೋಟಿ ವೆಚ್ಚ ದಲ್ಲಿ ಸುಸಜ್ಜಿತವಾದ ರಂಗಮಂದಿರ ಸೇರಿದಂತೆ ಟ್ರ್ಯಾಕ್ ಮತ್ತು ಫೀಲ್ಡ್ ನಿರ್ಮಿಸಲಾಗಿತ್ತು, ಹಿಂದಿನ ಸರ್ಕಾರದಲ್ಲಿ ರೂ.3 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಈ ಪೈಕಿ ರೂ.1 ಕೋಟಿ ಬಿಡುಗಡೆ ಮಾಡಿದೆ ಇನ್ನುಳಿದ ರೂ.2 ಕೋಟಿ ಅನುದಾನ ಬಿಡುಗಡೆಗೊಳಿಸುವ ಮೂಲಕ ಒಳಾಂಗಣ ಕ್ರೀಡಾಂಗಣ ನಿರ್ಮಿಸುವ ಭರವಸೆ ನೀಡಿದರು.
ಸರ್ಕಾರಿ ಜಿಮ್‍ಗೆ ಚಿಂತನೆ: ದೇಹದಾಢ್ರ್ಯ ಸ್ಪರ್ಧಿಗಳು ಸೇರಿದಂತೆ ಇನ್ನಿತರ ಎಲ್ಲಾ ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಸದರಿ ಕ್ರೀಡಾಂಣದಲ್ಲಿಯೇ ಸರ್ಕಾರದ ವತಿಯಿಂದ ಜಿಮ್ ನಿರ್ಮಿಸುವ ಕುರಿತು ಚಿಂತನೆಗಳನ್ನು ನಡೆಸಲಾಗುತ್ತಿದೆ, ಹೀಗಾಗಿ ಅನುದಾನದ ಅನುಕೂಲತೆ ನೋಡಿಕೊಂಡು ಸರ್ಕಾರಿ ಜಿಮ್ ನಿರ್ಮಿಸುವ ಭರವಸೆ ನೀಡಿದರು.
ಯುವಕರು ಕ್ರೀಡಾಂಗಣದತ್ತ ಬರಬೇಕು:ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ಕ್ರೀಡೆ ಮತ್ತು ಆರೋಗ್ಯ ನಾಣ್ಯದ ಎರಡು ಮುಖಗಳಿದ್ದಂತೆ ಆದರೆ ಮೋಬೈಲ್ ಹಿಂದೆ ಬಿದ್ದಿರುವ ಇತ್ತೀಚಿನ ಯುವಕರು ಕ್ರೀಡಾಂಗಣಗಳಿಂದ ವಿಮುಖವಾಗುತ್ತಿದ್ದಾರೆ ಹದಿಹರೆಯದ ಯುವಕರು ಸಹ ದೈಹಿಕವಾಗಿ ಶ್ರಮವನ್ನು ಹಾಕುತ್ತಿಲ್ಲ ಅನಾರೋಗ್ಯ ಮತ್ತು ಅಪೌಷ್ಟಿಕತೆ ಇಂದ ಬಳಲುತ್ತಿರುವ ಯುವಕರು ಮೋಬೈಲ್ ಹಿಡಿದು ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ ಪಾಟೀಲ, ಸದಸ್ಯರಾದ ಬಸವರಾಜ ಛತ್ರದ, ಸುಭಾಸ್ ಮಾಳಗಿ, ಮಾಜಿ ಸದಸ್ಯ ಅಬ್ದುಲ್ ಮುನಾಫ್ ಎರೆಶೀಮಿ ರೈತ ಸಂಘದ ಮುಖಂಡ ಗಂಗಣ್ಣ ಎಲಿ, ಕರಾಟೆ ತರಬೇತುದಾರ ನಾರಾಯಣ ಪೂಜಾರ, ಸಿ.ಪಿ.ಐ.ಬಸವರಾಜ ಪಿ.ಎಸ್.ಐ. ಮಂಜುನಾಥ ಕುಪ್ಪೇಲೂರ ಅಂಜುಮನ್-ಎ-ಇಸ್ಲಾಂ ಕಮೀಟಿ ಅಧ್ಯಕ್ಷ ಡಾ.ಎ.ಎಂ. ಸೌದಾಗರ ದಾವಣಗೆರೆಯ ಅಂತರಾಷ್ಟ್ರೀಯ ದೇಹದಾಡ್ರ್ಯ ಪಟು ಸೈಯದ ಇನ್ಸಾಲ್ ಗಿರೀಶ್ ಇಂಡಿಮಠ, ಬಿ.ಎನ್.ಮಾಸಣಗಿ, ದೀಪಕ್ ಲಮಾಣಿ, ಥಾರ್ ಫಿಟ್‍ನೆಸ್ ತರಬೇತುದಾರರಾದ ಮುನೀರ್ ಅಹ್ಮದ್, ಮಾರುತಿ ಭಜಂತ್ರಿ, ರವಿ ಗಜೇಂದ್ರಪ್ಪ ಮಾಳಗಿ ಇದ್ದರು.