ಅನುದಾನದಲ್ಲಿ ತಾರತಮ್ಯ ಜಿಲ್ಲೆಗೆ ಅನ್ಯಾಯ

ಸರ್ಕಾರವನ್ನು ವಜಾಗೊಳಿಸಲು ರಾಜ್ಯಪಾಲರಿಗೆ ರಝಾಕ್ ಒತ್ತಾಯ
ರಾಯಚೂರು.ಏ.೧-ಕೆ.ಎಸ್.ಈಶ್ವರಪ್ಪ ಅವರು ಜಿಲ್ಲೆಗೆ ಬಿಡುಗಡೆ ಮಾಡಿದ ಬಿಆರ್ ಜಿಎಫ್ ಅನುದಾನವನ್ನು ಮುಖ್ಯ ಮಂತ್ರಿಯವರು ಕೇವಲ ಮೂರು ಕ್ಷೇತ್ರಗಳಿಗೆ ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿ ಕೂಡಲೇ ರಾಜ್ಯಪಾಲರು ಕಾನೂನುಬಾಹಿರವಾಗಿ ನೆಡೆಯುತ್ತಿರುವ ಈ ಸರ್ಕಾರವನ್ನು ಸಂವಿಧಾನದ ಅನುಚ್ಚೇದ ೩೫೬ರ ಪ್ರಕಾರ ಈ ಸರ್ಕಾರವನ್ನು ವಜಾಗೊಳಿಸಲು ರಾಷ್ಟ್ರಪತಿಗೆ ಶಿಫಾರಸ್ಸು ಮಾಡಬೇಕು ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ರಜಾಕ್ ಉಸ್ತಾದ್ ಅವರು ಆಗ್ರಹಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮುಖ್ಯ ಮಂತ್ರಿಗಳ ವಿರುದ್ಧ ರಾಜಪಾಲರಿಗೆ ದೂರು ನೀಡಿದ್ದು ಇತಿಹಾಸದಲ್ಲೆ ಇದೆ ಮೊದಲು ಆಗಿದ್ದು ರಾಜಪಾಲರಿಗೆ ದೂರಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅನುದಾನವನ್ನು ಸಚಿವರ ಗಮನಕ್ಕೆ ಬಾರದೇ ೭೭೪, ಕೋಟಿ, ೪೬೦ ಕೋಟಿ, ಹಾಗೂ ೬೫ ಕೋಟಿ ರೂ.ಅನುದಾನವನ್ನು ಮುಖ್ಯಮಂತ್ರಿಗಳು ನೇರವಾಗಿ ಜಿಲ್ಲಾ ಪಂಚಾಯತಿಗೆ ಬಿಡುಗಡೆ ಮಾಡಿದ್ದಾರೆ. ಸಂಬಂಧಿಸಿದ ಇಲಾಖೆಯ ಸಚಿವರ ಅನುಮತಿ ಪಡೆಯದೇ ೧೦೭೭ ರ ನಿಯಮದ ಪ್ರಕಾರ ಮುಖ್ಯಮಂತ್ರಿ ಬಿಡುಗಡೆ ಮಾಡಲು ಬರುವುದಿಲ್ಲ, ಶಾಸಕರ ಮನವಿ ಮೇರೆಗೆ ೭೭೪ ಕೋಟಿ ರೂ ಅನುದಾನವನ್ನು ಸಚಿವರ ಅನುಮತಿ ಇಲ್ಲದೆ ಆದೇಶ ಮಾಡಿದ್ದಾರೆ ಹಾಗೂ ಮಾರ್ಚ್ ೪ ರಂದು ೪೬೦ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು ೧೯೭೭ರ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಗೆ ೨೦೧೧-೧೨ನೇ ಸಾಲಿನಿಂದ ೨೦೧೩-೧೪ರ ಸಾಲಿನವರೆಗೆ ಬಿಆರ್.ಜಿಎಫ್ ಅನುದಾನದ ೨೪ ಕೋಟಿ ರೂ. ಕ್ರಿಯಾ ಯೋಜನೆಯನ್ನು ಮುಖ್ಯ ಮಂತ್ರಿಗಳು ಕೇವಲ ರಾಯಚೂರು ನಗರ, ದೇವದುರ್ಗ ಮತ್ತು ಮಸ್ಕಿ ಕ್ಷೇತ್ರಕ್ಕೆ ಬಿಡುಗಡೆ ಮಾಡಿದ್ದಾರೆ. ಈ ಅನುದಾನವನ್ನು ಎಲ್ಲ ಕ್ಷೇತ್ರಗಳಿಗೆ ಬಿಡುಗಡೆ ಮಾಡಬೇಕು. ಆದರೆ ಕೇವಲ ಮೂರು ಕ್ಷೇತ್ರಗಳಿಗೆ ಬಿಡುಗಡೆ ಮಾಡಿದ್ದು ಅನ್ಯಾಯ
ಬೆಂಗಳೂರು ಜಿಲ್ಲಾ ಪಂಚಾಯತ ಅಧ್ಯಕ್ಷರ ಕೋರಿಕೆಯ ಮೇರೆಗೆ ೬೫ ಕೋಟಿ ರೂ.ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. ಅನುದಾನ ನೀಡಲು ಕ್ರಿಯಾಯೋಜನೆ ಸಿದ್ದಪಡಿಸಿ ಸಲ್ಲಿಸಿಬೇಕು, ಜಿಲ್ಲಾ ಪಂಚಾಯತ ಅಧ್ಯಕ್ಷರ ಅಧಿಕಾರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ನವರು ದುರ್ಬಳಕೆ ಮಾಡಿಕೊಂಡಿದ್ದಾರೆ. ಜಿಲ್ಲಾ ಪಂಚಾಯತ ಅಧ್ಯಕ್ಷರ ಹೆಸರಿನಲ್ಲಿ ಹಣ ಬಿಡುಗಡೆ ಮಾಡಿದ್ದು ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ದೂರಿದರು.
ಕರ್ನಾಟಕ ಪಂಚಾಯತ ರಾಜ್ ಕಾಯ್ದೆ ೧೦೯೨ ಹಾಗೂ ಬಿಆರ್.ಜಿಎಫ್ ಅನುದಾನ ನೀಡಿದ್ದು ನಿಯಮ ಉಲ್ಲಂಘನೆ ಮಾಡಿದ್ದಾರೆ. ಬಿಆರ್.ಜಿಎಫ್ ಅನುದಾನ ಜಿಲ್ಲೆಗೆ ವಿಸ್ತರಣೆ ಮಾಡಬೇಕು ಆದರೆ ಕೇವಲ ಮೂರು ಕ್ಷೇತ್ರಗಳಿಗೆ ನೀಡಿದ್ದಾರೆ. ಆಡಳಿತ ದುರುಪಯೋಗ ಪಡಿಸಿಕೊಂಡಿದ್ದಾರೆ.
ಕೇವಲ ಬಿಜೆಪಿ ಶಾಸಕರು ಇರುವ ಕ್ಷೇತ್ರಗಳಿಗೆ ಅನುದಾನ ನೀಡಿದ್ದಾರೆ. ದುರುದ್ದೇಶದಿಂದ ಅನುದಾನ ಹಂಚಿಕೆ ಮಾಡಿದ್ದು, ಕಾನೂನು ಬಾಹಿರವಾಗಿದೆ ಎಂದರು.
ಮುಖ್ಯಮಂತ್ರಿ ಹಾಗೂ ಬಹುತೇಕ ಸಚಿವರು ನಿಯಮದಂತೆ ಸಂವಿದಾನ ಬದ್ಧವಾಗಿ ನಡೆದುಕೊಂಡಿಲ್ಲ, ಕಾನೂನು ಮೀರಿ ಸರ್ಕಾರವನ್ನು ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಕೋವಿಡ್ ನಿಂದ ಹಾಗೂ ಅತಿವೃಷ್ಠಿ ಯಿಂದ ಜನರು ನಲುಗಿ ಹೋಗಿದ್ದು ಸರ್ಕಾರ ಈ ಬಗ್ಗೆ ಹೆಚ್ಚೆತ್ತುಕೊಳ್ಳದೆ ಲೂಟಿ ಮಾಡಲು ನಿಂತಿದೆ.
ಕಾನೂನು ಬಾಹೀರವಾಗಿ ಆಡಳಿತ ನಡೆಸುತ್ತಿರು ಸರ್ಕಾರವನ್ನು ಸಂವಿದಧಾನದ ಅನುಚ್ಛೇದ ೩೬೫ ಪ್ರಕಾರ ವಜಾಗೊಳಿಸಲು ರಾಜಪಾಲರಿಗೆ ಹಾಗೂ ರಾಷ್ಟ್ರಪತಿಗಳಿಗೆ ದೂರು ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿವುಕುಮಾರ ಯಾದವ್, ಮಹಮದ್ ರಫಿ ಇತರರು ಇದ್ದರು.