ಅನುಚಿತ ವರ್ತನೆ:ತನಿಖೆಗೆ ಆಗ್ರಹ

ವಾಡಿ,ಸೆ 7: ಲಾಡ್ಲಾಪುರ ಸರಕಾರಿ ಪ್ರೌಢಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕರು ವಿದ್ಯಾರ್ಥಿನಿಯರ ಜೊತೆ ಅನುಚಿತ ವರ್ತನೆ ಆರೋಪದ ಘಟನೆ ಕುರಿತು ನಿಷ್ಪಕ್ಷಪಾತ ತನಿಖೆ ಹಾಗೂ ನಿದರ್ಶನಿಯ ಶಿಕ್ಷೆ ನೀಡಲು ಎಐಡಿಎಸ್‍ಒ ವಾಡಿ ಸ್ಥಳೀಯ ಸಮಿತಿ ಆಗ್ರಹಿಸಿದೆ.ಈ ಕುರಿತು ಇಂದು ಪೆÇಲೀಸ್ ಸಬ್ ಇನ್ಸ್ಪೆಕ್ಟರ್‍ರಿಗೆ ಮನವಿ ಸಲ್ಲಿಸಲಾಯಿತು.
ಈಗಾಗಲೇ ಆರೋಪಿ ಪ್ರಭಾರಿ ಮುಖ್ಯ ಶಿಕ್ಷಕರನ್ನು ಪೆÇೀಕ್ಸೋ ಕಾಯ್ದೆಯಡಿ ಬಂಧಿಸಿದೆ. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ವೆಂಕಟೇಶ್ ದೇವದುರ್ಗ, ಗೋವಿಂದ್ ಯಾಳವಾರ, ಸದಸ್ಯರಾದ ಗೋದಾವರಿ ಕೆ,ಸಿದ್ದಾರ್ಥ್ ತಿಪ್ಪನೋರ್,ಸಾಬಣ್ಣ ಹೋಳಿ ಹಾಗೂ ರೈತ ಮುಖಂಡ ಗುಂಡಣ್ಣ ಕುಂಬಾರ ಮನವಿ ಸಲ್ಲಿಸಿದರು