ಅನುಗ್ರಹಕ್ಕೆ ಬಿಎಲ್‍ಡಿಇ ಕೈ ಜೋಡಿಸಿದೆ:ಡಾ.ಪ್ರಭುಗೌಡ

ತಾಳಿಕೋಟೆ:ಮೇ.20: ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತೃತ್ವದಲ್ಲಿ ಕೈಗೊಳ್ಳುತ್ತಾ ಸಾಗಿರುವ ಉಚಿತ ನೇತ್ರ ತಪಾಸಣೆ ಶಸ್ತ್ರಚಿಕೀತ್ಸೆಗಳನ್ನು ಗಮನಿಸಿದ ಬಿಎಲ್‍ಡಿಇ ಸಂಸ್ಥೆಯ ಬಿ.ಎಂ.ಪಾಟೀಲ ವೈಧ್ಯಕೀಯ ಶಿಕ್ಷಣ ಮಹಾ ವಿದ್ಯಾಲಯವು ಕೈಜೋಡಿಸಿರುವದು ಹೆಚ್ಚಿನ ಬಲಸಿಕ್ಕಂತಾಗಿದೆ ಎಂದು ವಿಜಯಪೂರ ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ವೈಧ್ಯರಾದ ಡಾ.ಪ್ರಭುಗೌಡ ಲಿಂಗದಳ್ಳಿ ಅವರು ನುಡಿದರು.

ಶುಕ್ರವಾರರಂದು ತಾಲೂಕಿನ ಚಬನೂರ ಗ್ರಾಮದ ಶ್ರೀ ಅಮೋಘಸಿದ್ದೇಶ್ವರ ಜಾತ್ರೋತ್ಸವ ಅಂಗವಾಗಿ ಅನುಗ್ರಹ ವಿಜನ್ ಪೌಂಡೇಶನ್, ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ ಹಾಗೂ ಬಿಎಲ್‍ಡಿಇ ಸಂಸ್ಥೆಯ ಶ್ರೀ ಬಿ.ಎಂ.ಪಾಟೀಲ ವೈಧ್ಯಕೀಯ ಶಿಕ್ಷಣ ಮಹಾವಿದ್ಯಾಲಯ ಸಹಯೋಗದಲ್ಲಿ ಏರ್ಪಡಿಸಲಾದ ಉಚಿತ ಬೃಹತ್ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಜೀವನದಲ್ಲಿ ಅತ್ಯಮೂಲ್ಯವಾದ ಕಣ್ಣು ಸಂರಕ್ಷಿತವಾಗಿರಬೇಕಾದರೆ ಕಾಲ ಕಾಲಕ್ಕೆ ತಪಾಸಣೆ ಹಾಗೂ ಕಣ್ಣಿನ ಬಗ್ಗೆ ಕಾಳಜಿ ವಹಿಸುವದು ಬಹುಮುಖ್ಯವಾಗಿದೆ ಇದರಲ್ಲಿ ನಿರ್ಲಕ್ಷ ಮಾಡುವದು ಬೇಡಾ ಬಡವರ ಸೇವೆಗಾಗಿ ಅನುಗ್ರಹ ಕಣ್ಣಿನ ಆಸ್ಪತ್ರೆ ಸದಾ ಇದೆ ಎಂದ ಅವರು ಅನುಗ್ರಹ ಆಸ್ಪತ್ರೆಯ ನೇತೃತ್ವದಲ್ಲಿ ಲಕ್ಷಾಂತರ ಜನರಿಗೆ ಉಚಿತವಾಗಿ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕೀತ್ಸೆಯ ಸೇವೆ ಒದಗಿಸುತ್ತಾ ಬಂದಿದ್ದೇವೆ ಈ ಸೇವೆಗೆ ಬಲ ನೀಡುವ ದೃಷ್ಠಿಯಿಂದ ಅನುಗ್ರಹ ಆಸ್ಪತ್ರೆಯು ಎಲ್ಲೇ ಉಚಿತ ಶಿಬಿರಗಳನ್ನು ಆಯೋಜನೆ ಮಾಡಿದರೂ ಅದರ ಜೊತೆಗೆ ಬಿಎಲ್‍ಡಿಇ ಬಿ.ಎಂ.ಪಾಟೀಲ ವೈಧ್ಯಕೀಯ ಶಿಕ್ಷಣ ಮಹಾ ವಿದ್ಯಾಲಯವು ಕಳೆದ 2 ವರ್ಷಗಳಿಂದ ಕೈಜೋಡಿಸಿ ಕೆಲಸ ಮಾಡುತ್ತಾ ಸಾಗಿದೆ ಅಲ್ಲದೇ ಹೆಚ್ಚಿನ ರೀತಿಯ ಸೇವೆಗೆ ಅವಕಾಶ ಸಿಕ್ಕಂತಾಗಿದೆ ಚಬನೂರ ಗ್ರಾಮದ ಶ್ರೀ ಅಮೋಘಸಿದ್ದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜಿಸಲಾಗಿರುವ ಈ ಉಚಿತ ಆರೋಗ್ಯ ಶಿಬಿರವನ್ನು ಸಂಪೂರ್ಣ ಯಶಸ್ವಿಯಾಗಿದ್ದು ಈ ಶಿಬಿರಕ್ಕೆ ಸಹಕರಿಸಿದ ಗ್ರಾಮಸ್ತರಿಗೆ ಬಿಎಲ್‍ಡಿ ಸಂಸ್ಥೆಯ ವೈಧ್ಯಸಿಬ್ಬಂದಿಗಳಿಗೆ ಅಭಿನಂದಿಸುತ್ತೇನೆಂದ ಅವರು ಮನುಷ್ಯನಲ್ಲಿ ಎಷ್ಟೇ ದುಡ್ಡಿದ್ದರೂ ಅದು ಉಪಯೋಗಕ್ಕೆ ಬರುವದಿಲ್ಲಾ ದುಷ್ಚಟವೆಂಬುದು ಆತನನ್ನು ಬಲಿಪಡೆದುಕೊಳ್ಳುತ್ತಾ ಸಾಗುತ್ತದೆ ಯುವಕರು ದುಶ್ಚಟಗಳಿಂದ ದೂರವಿದ್ದು ಉತ್ತಮ ಆರೋಗ್ಯವಂತರಾಗಿ ಬಾಳಿರಿ ಎಂದು ತಿಳಿ ಹೇಳಿದರು.

ಅನುಗ್ರಹ ಕಣ್ಣಿನ ಆಸ್ಪತ್ರೆ ಮತ್ತು ಬಿಎಲ್‍ಡಿ ವೈಧ್ಯಕೀಯ ಶಿಕ್ಷಣ ಮಹಾ ವಿದ್ಯಾಲಯದ ನೇತೃತ್ವದಲ್ಲಿ ನಡೆದ ನೇತ್ರ ತಪಾಸಣೆಯಲ್ಲಿ 1 ಸಾವಿರ ಜನರ ನೆತ್ರ ತಪಾಸಣೆ ಮಾಡಲಾಗಿದ್ದು ಅದರಲ್ಲಿ 350 ಜನಕ್ಕೆ ಶಸ್ತ್ರ ಚಿಕೀತ್ಸೆಗೆ ಆಯ್ಕೆ ಮಾಡಲಾಗಿದೆ ಇನ್ನೂಳಿದ ವಿವಿಧ ರೋಗಗಳಿಗೆ ಸಂಬಂದಿಸಿ ರೋಗಿಗಳನ್ನು ತಪಾಸಣೆ ಕೈಗೊಳ್ಳಲಾಯಿತು.

ಈ ಉಚಿತ ಆರೋಗ್ಯ ಸಿಬಿರದಲ್ಲಿ ನೇತ್ರ ತಜ್ಞವೈಧ್ಯರು, ಚಿಕ್ಕಮಕ್ಕಳ ತಜ್ಞವೈಧ್ಯರು, ಯಲಬು ಕೀಲು ತಜ್ಞವೈಧ್ಯರು, ಕಿವಿ ಮತ್ತು ಮೂಗು ಗಂಟಲು ತಜ್ಞವೈಧ್ಯರು, ಸಕ್ಕರೆ ಕಾಯಿಲೆ, ಹೃದಯ ರೋಗ, ಹೆಣ್ಣುಮಕ್ಕಳ ಪ್ರಸೂತಿ ತಜ್ಞವೈಧ್ಯರು, ಚರ್ಮ ರೋಗ ತಜ್ಞವೈಧ್ಯರು ಪಾಲ್ಗೊಂಡು ವಿವಿಧ ರೋಗಗಳಿಗೆ ಸಂಬಂದಿಸಿ ತಪಾಸಣೆ ಕೈಗೊಂಡು ಬಿಎಲ್‍ಡಿಇ ಸಂಸ್ಥೆಯಿಂದ ಉಚಿತ ಔಷಧ ಉಪಚಾರವನ್ನು ನೀಡಿದರು.

ಈ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕೀತ್ಸಾ ಶಿಬಿರದಲ್ಲಿ ಅನುಗ್ರಹ ಆಸ್ಪತ್ರೆಯ ತಜ್ಞವೈಧ್ಯರಾದ ಡಾ.ಪ್ರಭುಗೌಡ ಲಿಂಗದಳ್ಳಿ, ಡಾ.ಮಾಲಿನಿ ಪ್ರಭುಗೌಡ, ಡಾ.ಸಂತೋಷ ಪಾಟೀಲ, ಡಾ.ರೋಹಿಣಿ ಪಾಟೀಲ, ಡಾ.ಮಧು ಗಣ್ಣೂರ, ಡಾ.ಆನಂದ ಗಣ್ಣೂರ, ಡಾ.ಶಿವಲೀಲಾ ದೇವರಮನಿ, ದತ್ತಾತ್ರೇಯ ಹೊಸಮಠ, ಜೂನೇದ ನದಾಫ, ಸಂಗಮೇಶ ಪಾಟೀಲ, ಮಲ್ಲಿಕಾರ್ಜುನ ಗಡೇದ, ರೇಣುಕಾ ಗಡೇದ, ಕುಮಾರ ಬಿರಾದಾರ, ಸಚೀನ ಬಿರಾದಾರ, ಶೃತಿ ಹೊರಟ್ಟಿ, ರಮ್ಯಾ ನಾವಿ, ಅಪ್ತಾಬ ತಹಶಿಲ್ದಾರ, ವಿನೋದ ಗಂಜಾಳ, ಶರಣು ಕೊಂಡಗೂಳಿ, ಹಣಮಂತ ಕೊಂಡಗೂಳಿ ಒಳಗೊಂಡು ಅನುಗ್ರಹ ಆಸ್ಪತ್ರೆಯ, ಹಾಗೂ ಬಿಎಲ್‍ಡಿಇ ವೈಧ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ಸಿಬ್ಬಂದಿಗಳು ಕಾರ್ಯನಿರ್ವಹಿಸಿದರು.


ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕೀತ್ಸೆಗಳ ಮೂಲಕ ಅವಳಿ ಜಿಲ್ಲೆಯಲ್ಲಿ ಹೆಸರುವಾಸಿಯಾಗಿರುವ ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ಡಾ.ಪ್ರಭುಗೌಡ ಬಿ.ಎಲ್. ಅವರ ಸಮಾಜ ಮುಖಿ ಕಾರ್ಯ ಏಷ್ಟು ಕೊಂಡಾಡಿದರೂ ಕಮ್ಮಿಯಾಗುತ್ತದೆ ಬಡಬಗ್ಗರ ಅಂದತ್ವ ನಿವಾರಣೆಗೆ ಶಪತ್ ತೊಟ್ಟಿರುವ ಅವರು ಬಡವರ ಪಾಲಿನ ದೇವರಾಗಿ ಪ್ರಜ್ವಲಿಸಿದ್ದಾರೆ.

ಉದಯಕುಮಾರ ಯಾಳವಾರ

                                                              ರೋಟರಿಯನ್