
ಮುದಗಲ್,ಏ.೨೯- ಪಟ್ಟಣದ ಜೆಡಿಎಸ್ ಕಾಯಾ೯ಲಯದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಆಲ್ಕೋಡ್ ಹನುಮಂತಪ್ಪ ಅವರು ಮಾತನಾಡಿದರು.
ಮಾಜಿ ಸಚಿವ ಆಲ್ಕೋಡ್ ಹನುಮಂತಪ್ಪ ಅವರು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷವನ್ನು ಸೇರಿದ ನಂತರ ಮುದಗಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬಿಜೆಪಿ ಮತ್ತು ಕಾಂಗ್ರೆಸ್ ಜನಸಾಮಾನ್ಯರ ಬವಣೆಗಳನ್ನು ಅರ್ಥ ಮಾಡಿಕೊಳ್ಳದೆ ಸ್ವಾರ್ಥ ಮತ್ತು ಭ್ರಷ್ಟಾಚಾರ ಆಡಳಿತ ವನ್ನು ನಡೆಸಲು ಹವಣಿಸುತ್ತಿದೆ. ದೇವೇಗೌಡರು ಪ್ರಧಾನ ಮಂತ್ರಿ ಆಡಳಿತದಲ್ಲಿ ರೈತರಿಗೆ ಸಬ್ಸಿಡಿ ದರದಲ್ಲಿ ಅಲವಾರು ಸೌಲಭ್ಯ ಗಳನ್ನು ಒದಗಿಸಿದ್ದಾರೆ. ಜನ ಸಾಮಾನ್ಯರಿಗೆ ನ್ಯಾಯಬೆಲೆ ಅಂಗಡಿ, ದೇವದಾಸಿಯರಿಗೆ ಜೀವ ಭದ್ರತೆ, ಎಷ್ಟೋ ಬಡ ಮನೆ ಯ ಹೆಣ್ಣುಮಕ್ಕಳಿಗೆ ತಾಳಿ ಭಾಗ್ಯ ಯೋಜನೆ, ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಸುವ್ಯವಸ್ಥಿತವಾದ ಯೋಜನೆಗಳು, ನೀಡಿದ್ದಾರೆ. ಇದನ್ನು ಜನಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕು.
ಕ್ಷೇತ್ರದಲ್ಲಿ ಹಿಂದೆ ಹತ್ತು ವರ್ಷ ಬಿಜೆಪಿ ಆಡಳಿತದಲ್ಲಿದ್ದಾಗ ಯಾವುದೇ ಅಭಿವೃದ್ಧಿಗಳು ಸಂಪೂರ್ಣವಾಗಿ ಮಾಡಿಲ್ಲ, ನಂದವಾಡಗಿ ಏತ ನೀರಾವರಿ ಯೋಜನೆ ಇನ್ನೂವರೆಗೂ ಸರಿಯಾಗಿ ಸಾರ್ವಜನಿಕರಿಗೆ ಮುಟ್ಟಿಲ್ಲ, ಕ್ಷೇತ್ರದಲ್ಲಿ ಮುದಗಲ್, ಹಟ್ಟಿ, ಲಿಂಗಸಗೂರ, ಮೂಲಭೂತ ಸೌಕರ್ಯ ಸಮರ್ಪಕ ಕುಡಿಯುವ ನೀರು ಕಲ್ಪಿಸಲು ಇಲ್ಲಿಯವರಿಗೆ ಆಗುತ್ತಿಲ್ಲ. ಪ್ರಜಾಪ್ರಭುತ್ವಕ್ಕೆ ವಿರೋಧವಾಗಿರುವ ಶಾಸಕರು ಆಗಿದ್ದಾರೆ. ಈ ಎರಡು ಪಕ್ಷಗಳು ಸಂವಿಧಾನಾತ್ಮಕ ಮತ್ತು ಪ್ರಜಾಸತ್ತಾತ್ಮಕ ಸಿದ್ಧಾಂತಗಳನ್ನು ಗಾಳಿಗೆ ತೂರಿ ಆಡಳಿತವನ್ನು ನಡೆಸಿದ್ದಾರೆ.
ಜನಸಾಮಾನ್ಯರಿಗೆ, ರೈತರಿಗೆ ಹಾಗೂ ಕಾರ್ಮಿಕರಿಗೆ ಉಪಯುಕ್ತವಾದ ಯೋಜನೆಗಳನ್ನು ಜೆಡಿಎಸ್ ಘೋಷಿಸಿ ಅನುಷ್ಠಾನ ಗೊಳಿಸಲಾಗಿತ್ತು.
ಅಲವಾರು ಜನಪ್ರೀಯ ಯೋಜನೆಗಳು ಇಂದಿಗೂ ಕೂಡ ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪುತ್ತಿದೆ.
ಲಿಂಗಸ್ಗೂರು ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನಾಗಿ ಸಿದ್ದು ಬಂಡಿಯನ್ನು ಘೋಷಿಸಲಾಗಿದೆ ಹಿಂದೆ ಎರಡು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದರು ಕೂಡ ಯಾವುದೇ ಸರಿಯಾದ ಪ್ರತಿಕ್ರಿಯೆ ದೊರೆಯಲಿಲ್ಲ, ಇಂತಹ ಪರಿಸ್ಥಿತಿ ಮುಂದೆ ಬರದಂತೆ ಜಾಗೃತಿವಹಿಸಬೇಕು, ಹೀಗಾಗಿ ಎಲ್ಲಾ ಪಕ್ಷಗಳ ಕಾರ್ಯವೈಕರಿಯ ಅವಲೋಕನ ಮಾಡಿದ್ದಾರೆ ಆದ್ದರಿಂದ ಕ್ಷೇತ್ರದ ಜನತೆ ೨೦೨೩ರ ಚುನಾವಣೆಯಲ್ಲಿ ಸಾರ್ವಜನಿಕರು ಅನುಕಂಪದ ಅಲೆಯನ್ನು ಬಿಸಿ ಬಹು ಮತದಿಂದ ಚುನಾಯಿತರನ್ನಾಗಿ ಮಾಡಿ ಕ್ಷೇತ್ರದ ಜನತೆಯ ಸೇವೆಗೆ ಅವಕಾಶ ಕಲ್ಪಿಸಬೇಕೆಂದರು.
ಜಿಲ್ಲೆಯ ಏಕೈಕ ಪರಿಶಿಷ್ಟ ಜಾತಿ ಮೀಸಲು ವಿಧಾನಸಭೆ ಕ್ಷೇತ್ರವಾಗಿರುವ ಲಿಂಗಸುಗೂರಿನಲ್ಲಿ ಈ ಸಲ ಜನರು ಜೆಡಿಎಸ್ ಅಭ್ಯರ್ಥಿ ಸಿದ್ದು ಬಂಡಿ ಪರ ಅನುಕಂಪ ಅಲೆ ಎಂದು ವ್ಯಕ್ತಪಡಿಸಿದ್ದರು.
ನಂತರ ಮುದಗಲ್ಲ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ಮುಖಾಂತರ ಆಲ್ಕೋಡ್ ಹನುಮಂತಪ್ಪ ಹಾಗೂಸಿದ್ದು ಬಂಡಿ ಯವರು ಸೇರಿ ನೂರಾರು ಕಾಯ೯ಕತ೯ರು ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕಾಧ್ಯಕ್ಷ ಬಸವರಾಜ ಮಕಾಪುರ, ಬ್ಲಾಕ್ ಅಧ್ಯಕ್ಷ ಅಮೀರ್ ಬೇಗ್ ಉಸ್ತಾದ್, ಪುರಸಭೆ ಸದಸ್ಯ ಮಹಿಬೂಬ್ ಕಡ್ಡಿಪುಡಿ, ದುರ್ಗಪ್ಪ ಕಟ್ಟಿಮನಿ, ದೊಡ್ಡ ಸಿದ್ದಯ್ಯ ಸ್ವಾಮಿ, ರಜ್ಜಬಲಿ ಟಿಂಗ್ರಿ, ಯಮನೂರ್ ನದಾಫ್, ಮುಲ್ಲಾ ಎಲೆಕ್ಟ್ರಿಕಲ್, ಅನ್ವರ್ ಕಂದಗಲ್, ಅರುಣ್ ಕುಮಾರ್, ಸಂತೋಷ್ ಕಟ್ಟಿಮನಿ, ಮಹಾಂತೇಶ ಕುಂಬಾರ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಇದ್ದರು.