ಅನೀಶ್ ಕುಣಿಸಲು ಬಂದ ಬಾಬಾ ಭಾಸ್ಕರ್

“ಆರಾಮ್ ಅರವಿಂದ ಸ್ವಾಮಿ..” ಚಿತ್ರ ಸೆಟ್ಟೇರಿದ ದಿನದಿಂದಲೂ ಸದ್ದು ಮಾಡುತ್ತಿದೆ. ಇದೀಗ ಚಿತ್ರ ತಂಡಕ್ಕೆ ನೃತ್ಯ ಸಂಯೋಜಕ ಬಾಬಾ ಭಾಸ್ಕರ್ ಸೇರ್ಪಡೆಯಾಗಿದ್ಧಾರೆ.

ನಟ ಅನೀಶ್ ತೇಜೇಶ್ವರ್ ಹಾಗೂ ನಿರ್ದೇಶಕ ಅಭಿಷೇಕ್ ಶೆಟ್ಟಿ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ ಚಿತ್ರ ಇದು. ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದು, ಅರ್ಜುನ್ ಜನ್ಯ ಸಂಗೀತವಿರುವ ಹಾಡಿಗೆ ಅನೀಶ್ ಕುಣಿಸುವುದಕ್ಕೆ ತಮಿಳಿನ ಖ್ಯಾತ ನೃತ್ಯ ಸಂಯೋಜಕ ಬಾಬಾ ಭಾಸ್ಕರ್ ಬಂದಿದ್ಧಾರೆ.

ಸಖತ್ ಸ್ಟೈಲೀಶ್ ಆಗಿ ತಯಾರಾಗುತ್ತಿರುವ ಹಾಡಿಗೆ ಬಾಬಾ ಭಾಸ್ಕರ್ ಕೊರಿಯೋಗ್ರಫಿ ಮಾಡ್ತಿದ್ದಾರೆ. ಈ ಹಿಂದೆ ಅನೀಶ್ ನಟನೆಯ ವಾಸು ನನ್ ಪಕ್ಕ ಕಮರ್ಷಿಯಲ್ ಸಿನಿಮಾದ ಹೀರೋ ಇಂಟ್ರೂಡಕ್ಷನ್ ಸಾಂಗ್ ಗೆ ನೃತ್ಯ ಸಂಯೋಜನೆ ಮಾಡಿದ್ದ ಭಾಸ್ಕರ್ ಮತ್ತೊಮ್ಮೆ ಅನೀಶ್ ಸಿನಿಮಾಗೆ ಕೊರಿಯೋಗ್ರಫಿ ಮಾಡುತ್ತಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಸಬ್ಜೆಕ್ಟ್ ಒಳಗೊಂಡ `ಆರಾಮ್ ಅರವಿಂದ್ ಸ್ವಾಮಿ’ ಚಿತ್ರದ ಟಾಕಿ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ,

ಅನೀಶ್ ತೇಜೇಶ್ವರ್ ಗೆ ಜೋಡಿಯಾಗಿ ಮಿಲನ ನಾಗರಾಜ್ ಹಾಗೂ ಹೃತಿಕ ಶ್ರೀನಿವಾಸ್ ನಟಿಸುತ್ತಿದ್ದಾರೆ. ಶ್ರೀಕಾಂತ್ ಪ್ರಸನ್ನ, ಪ್ರಶಾಂತ್ ರೆಡ್ಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಸಾಗರ್ ಛಾಯಾಗ್ರಹಣ, ಉಮೇಶ್ ಸಂಕಲನ ಚಿತ್ರಕ್ಕಿದೆ.