ಅನೀತಿಗೆ ಧರ್ಮದ ಸಂಸ್ಕಾರವೇ ಮದ್ದು: ಶಾಂತವೀರ ಶಿವಾಚಾರ್ಯರು

ಮಾದನಹಿಪ್ಪರಗಿ: ಆ.11:ದೇಶದಲ್ಲಿ ಅಶಾಂತಿ, ಅನೀತಿ, ಅನಾಚಾರ, ಅಧರ್ಮ ಮೆರೆಯುತ್ತಿದೆ. ಮನುಷ್ಯ ವಿಕೃತವಾಗುತ್ತಿದ್ದಾನೆ. ಇವೆಲ್ಲವನ್ನು ಹತೋಟಿಯಲ್ಲಿಡಲು ಧರ್ಮದ ಸಂಸ್ಕಾರವೇ ಮದ್ದು ಎಂದು ಶಾಂತವೀರ ಶಂತವೀರ ಶಿವಾಚಾರ್ಯರು ಹೇಳಿದರು.

ನಿನ್ನೆ ಬುಧವಾರ ಚಲಗೇರಾ ರೇಣುಕ ಪರ್ಣಕುಟೀರದಲ್ಲಿ ಮಾದನಹಿಪ್ಪರಗಿ ಹಿರೇಮಠದ ಶಾಂತವೀರ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವ ಮತ್ತು ಶಿವಯೋಗ ಅನುಷ್ಠಾನ ಮಹಾಮಂಗಲ ನಿಮತ್ಯ ಧರ್ಮ ಸಭೆಯಲ್ಲಿ ಸಮಾರಂಭದಲ್ಲಿ ಮಾತನಾಡುತ್ತ, ಅಧಿಕ ಮಾಸದಲ್ಲಿ ಸಾಧು ಸಂತರು ಮಠಾಧೀಶರು ಸಮಾಜದ ಒಳಿತಿಗಾಗಿ ಜಪ ತಪ ಮೌನ ಅನುಷ್ಠಾನ ಮಾಡುತ್ತಾರೆ. ಈ ಚಲಗೇರಾ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ರೇಣುಕ ಪರ್ಣ ಕುಟೀರದಲ್ಲಿ 22ದಿನಗಳ ಶಿವಯೋಗ ಅನುಷ್ಠಾನ ಮಾಡಲಾಯಿತು. ಬಾಹ್ಯ ಇಂದ್ರಿಯಗಳನ್ನು ನಿಯಂತ್ರಿಸಿ ಒಳಗಿನ ಆತ್ಮ ಇಂದ್ರಿಯ ಶಿವಲಿಂಗಗೆ ಸಮರ್ಪಣೆ ಮಾಡುವುದೇ ಶಿವಯೋಗ ಅನುಷ್ಠಾನ. ಪ್ರಕೃತಿ ಪರೋಪಕಾರಿ ಸ್ವಾಮಿಜಿಗಳು ಕೂಡಾ ಈ ಸಮಾಜಕ್ಕಾಗಿ ಪರೋಪಕಾರಿಯಾಗಿದ್ದಾರೆ. ಪ್ರಸ್ತುತ ಸಮಾಜದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಹೆಣ್ಣುಮಕ್ಕಳ ಮೇಲಾಗುತ್ತಿರುವ ದೌರ್ಜನ್ಯಗಳು ನಡೆಯದಿರಲಿ, ವಿಕೃತ ಮನುಸ್ಸುಗಳಿಗೆ ಬಲಿಯಾದ ಮತ್ತು ನೊಂದ ಹೆಣ್ಣುಮಕ್ಕಳಿಗೆ ಈ ಅನುಷ್ಠಾನ ಸಮರ್ಪಣೆ ಎಂದು ಹೇಳಿದರು.

ಧರ್ಮ ಸಭೆಯಲ್ಲಿ ರೇಣುಕಾ ಶಿವಾಚಾರ್ಯರು ದೇವಂತಗಿ, ಡಾ. ಶಾಂತಲಿಂಗ ಸ್ವಾಮಿಗಳು ದುಧನಿ, ಅಭಿನವ ಶಿವಲಿಂಗ ಸ್ವಾಮಿಗಳು ಮಾದನಹಿಪ್ಪರಗಿ, ಶಂಭು ಸೋಮನಾಥ ಸ್ವಾಮಿಗಳು ಭೂಸನೂರ, ಬಸವರಾಜ ಮಹಾರಾಜರು ದಿಂಡೂರ ಮಾತನಾಡಿದರು. ಇದಕ್ಕು ಮುಂಚೆ ಚಲಗೇರಾ ಗ್ರಾಮದಲ್ಲಿ ಶಾಂತವೀರ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಮೆರವಣಿಗೆ ನಡೆಯಿತು. ಸುತ್ತಮುತ್ತಲಿನ ಗ್ರಾಮದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಅಡವಯ್ಯ ಸ್ವಾಮಿ, ಶರಣಯ್ಯ ಸ್ವಾಮಿ, ಶಿವಾನಂದ ಹಜಾರೆ, ಚೆನ್ನಬಸಪ್ಪ ಮುಲಗೆ, ಬಸವರಾಜ ಬಿರದಾರ, ಸೈಬಣ್ಣ, ಸಿದ್ದರಾರೂಢ ಕಂಬಾರ, ಶಿವಲಿಂಗಪ್ಪ ಮೈಂದರಗಿ, ಹವಳಾಬಾಯಿ ಗಡ್ಡದ್, ಕಲ್ಯಾಣಿ ದಲು,್ಲ ನಾಗಣ್ಣ ಮುಲಗೆ ಮುಂತಾದ ಮುಖಂಡರುಗಳು ಹಾಜರಿದ್ದರು.