ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಮಾ.30 ಗ್ರಾಮದಲ್ಲಿ ಮದ್ಯದ ಮಳಿಗೆ ತೆರೆಯದಂತ್ತೆ ಹಾಗೂ ದೇವದಾಸಿ ಪದ್ಧತಿ, ಬಾಲ್ಯ ವಿವಾಹ, ಇಂತಹ ಅನಿಷ್ಟ ಪದ್ಧತಿಗಳು ಗ್ರಾಮಗಳಲ್ಲಿ ನಿಲ್ಲಿಸಬೇಕು ಇಲ್ಲವಾದರೆ ಗ್ರಾಮಗಲ್ಲಿ ಬಡತನ, ನಿರುದ್ಯೋಗದ ಸಮಸ್ಯೆ ನಿರ್ಮಾಣವಾಗುತ್ತದೆ ಎಂದು ಬಸವ ಶ್ರೀ ಪ್ರಶಸ್ತಿ ಪುರಸ್ಕೃತ ವಿದ್ಯಾ ಪಟೇಲ್ ರವರು ಹೇಳಿದರು
ತಾಲೂಕಿನ ಮಾಲವಿ ಗ್ರಾಮದಲ್ಲಿ ಮಂಗಳವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ರಾಜ್ಯ ಮಹಿಳಾ ಒಕ್ಕೂಟ ಮತ್ತು ಕೂಲಿ ಕಾರ್ಮಿಕರ ಸಂಘಟನೆ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಮಹಿಳಾ ಸಮಾವೇಶ ಕುರಿತು ಮಾತನಾಡಿದರು.
ಸರ್ಕಾರದ ಶಾಲೆ ಬಾಗಿಲು ತೆರೆಯುವ ಮುಂಚೆನೇ ಗ್ರಾಮಗಳಲ್ಲಿ ಮದ್ಯದಂಗಡಿ ತೆರೆಯುವ ಸ್ಥಿತಿ ನಿರ್ಮಾಣವಾಗಿದೆ ಇದರಿಂದಾಗಿ ಮಕ್ಕಳಲ್ಲಿ ಬುದ್ದಿ ಶಕ್ತಿ, ಕೊರತೆ ಆರೋಗ್ಯದ ಕೊರತೆ, ಅನರಕ್ಷಸ್ಥರಾಗಿ ತಮ್ಮ ತಮ್ಮ ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸಲು ಆಗುತ್ತಿಲ್ಲ. ಯಾವುದೇ ಕಾರಣಕ್ಕೂ ಗ್ರಾಮದಲ್ಲಿ ಮಧ್ಯದಂಗಡಿ ತೆರೆಯದಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಇಲ್ಲವಾದರೆ ಮಧ್ಯದಂಗಡಿ ಮುಂದೆ ಕುಳಿತು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವಹಿಸಿ ನಂದಿಪುರ ಮಹೇಶ್ವರ ಸ್ವಾಮೀಜಿ ಮಾತನಾಡಿ ಈಗಾಗಲೇ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಪ್ರಚಲಿತಗೊಂಡಿದ್ದಾರೆ
ಮಹಿಳೆಯರು ತಮ್ಮ ತಮ್ಮ ಹಕ್ಕುಗಳನ್ನು ಹೋರಾಟದ ಮೂಲಕ ಪಡೆದುಕೊಂಡು ಪುರುಷರಿಗೆ ಸರಿಸಾಮಾನವಾಗಿ ಜೀವನ ಸಾಗಿಸಬೇಕು ಹಾಗೂ ಪ್ರತಿ ಗ್ರಾಮದಲ್ಲಿ ಮಹಿಳೆಯರ ಉಳಿತಾಯ ಖಾತೆ ತೆರೆದು ಪ್ರಗತಿ ಹೊಂದಬೇಕು ಇಂತಹ ವಿಚಾರಗಳಿಗೆ ನಾವು ಯಾವಾಗಲು ನಿಮ್ಮಗೆ ಬೆಂಬಲವಾಗಿ ಇರುತ್ತೇವೆ ಎಂದರು
ಸಂಘಟನೆಯ ಗೀತಾ ಮಾತನಾಡಿ ಮದ್ಯ ಸೇವನೆಯಿಂದ ಆಗುವ ಅನಾಹುತಗಳು ಪರಿ ಪರಿಯಾಗಿ ಹೇಳುತ್ತಾ ನಮ್ಮ ಕುಟುಂಬದ ಜವಾಬ್ದಾರಿ ನಿರ್ವಹಿಸುವ ಗಂಡ, ತಂದೆ, ಅಣ್ಣ, ತಮ್ಮ, ಇವರು ಎಲ್ಲರು ಕುಡಿತದ ಬಲೆಗೆ ಸಿಕ್ಕಿ ಬದಕು ಕಟ್ಟಿಕೊಳ್ಳಲು ಹರಸಾಹಸ ಪಡಬೇಕಾಯಿತು ಯಾವುದೇ ಕಾರಣಕ್ಕೂ ಗ್ರಾಮದಲ್ಲಿ ಮಧ್ಯದಂಗಡಿ ತೆರೆಯಬಾರದು ಎಂದು ಆಗ್ರಹಿಸಿದರು.
ದೇವದಾಸಿ ಮಹಿಳೆಯರ ಸೌಲಭ್ಯಗಳು ಹಾಗೂ ಅವರ ಮಕ್ಕಳ ವಿದ್ಯಾಭ್ಯಾಸದ ಕುರಿತು ವಿರುಪಮ್ಮ ನವರು ಪ್ರಾಸ್ತಾವಿಕ ನುಡಿದರು
ಈ ಸಂದರ್ಭದಲ್ಲಿ ಮೋಕ್ಷಮ್ಮ ಮಸ್ಕಿ, ಬಸಲಿಂಗಮ್ಮ ತಾಲೂಕ್ ಕಮಿಟಿ ಪ್ರತಿನಿಧಿ, ರೇಣುಕಮ್ಮ, ಎಲ್ಲಪ್ಪ, ಬುಡೇನ್ ಸಾಬ್, ಮಲ್ಲೇಶ್ ಗ್ರಾಮೀಣ ಕೂಲಿ ಕಾರ್ಮಿಕರ ಜಿಲ್ಲಾ ಸಂಚಾಲಕರು, ಅಕ್ಕಮಹಾದೇವಿ, ಹನುಮಂತಪ್ಪ, ಹಾಗೂ ನೂರಾರು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು
ಇಡೀ ಕರ್ನಾಟಕದಲ್ಲೇ ಮದ್ಯ ನಿಷೇದ ಮಾಡಬೇಕು ಎಂದು ಮೊದಲು ಹೋರಾಟಕ್ಕೆ ಚಾಲನೆ ನೀಡಿದ ಗ್ರಾಮ ಎಂದರೆ ಮಾಲವಿ ಗ್ರಾಮ. ಇದೆ ಗ್ರಾಮದಲ್ಲೆ ಕೆಲ ರಾಜಕೀಯ ಪ್ರಭಾವಿಗಳಿಂದ ಮಧ್ಯದಂಗಡಿ ತೆರೆಯಲು ಮುಂದಾಗಿದ್ದಾರೆ ಇದನ್ನು ಗ್ರಾಮದ ಜನರು ತೆರೆಯದಂತ್ತೆ ಹೋರಾಟಕ್ಕೆ ಮುಂದಾಗಬೇಕಿದೆ.
ಎಂ ಬಿ.ಕೊಟ್ರಮ್ಮ ಗ್ರಾಮೀಣ ಕೂಲಿ ಕಾರ್ಮಿಕ ತಾಲೂಕು ಕಾರ್ಯಕರ್ತೆ