ಅನಿಲ ಕೊಳವೆ ಮಾರ್ಗ ಆರ್ಥಿಕ ಉತ್ತೇಜನಕ್ಕೆ ಸಹಕಾರಿ

ನವದೆಹಲಿ,ಜ.೫- ಕೊಚ್ಚಿನ್-ಮಂಗಳೂರು ನಡುವಿ ನೈಸರ್ಗಿಕ ಅನಿಲ ಕೊಳವೆಮಾರ್ಗ ಕೇರಳ ಮತ್ತು ಕರ್ನಾಟಕ ರಾಜ್ಯದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕೇರಳದ ಕೊಚ್ಚಿನ್ ಮತ್ತು ಮಂಗಳೂರು ನೈಸರ್ಗಿಕ ಅನಿಲ ಕೊಳವೆ ಮಾರ್ಗ ಇಂದು ಪ್ರಧಾನಿ ನರೇಂದ್ರಮೋದಿ ಅವರು ವೀಡಿಯೊ ಕಾನ್ಫರನ್ಸ್ ಮೂಲಕ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಈ ನೈಸರ್ಗಿಕ ಅನಿಲ ಕೊಳವೆಮಾರ್ಗ ಲಕ್ಷಾಂತರ ಜನರ ಸುಗಮ ಜೀವನಕ್ಕೆ ನೆರವಾಗುವ ಜತೆಗೆ ಪ್ರವಾಸೋದ್ಯಮ ಕ್ಷೇತ್ರಕ್ಕೂ ಉತ್ತೇಙನ ನೀಡಲಿದೆ ಎಂದರು.
ಈ ಅನಿಲ ಕೊಳವೆಮಾರ್ಗ ಎರಡೂ ರಾಜ್ಯಗಳ ಆರ್ಥಿಕ ಬೆಳವಣಿಗೆಯ ಮೇಲೆ ಸಕರಾತ್ಮಕ ಪರಿಣಾಮ ಬೀರಲಿದೆ ಎಂದು ಅವರು ಹೇಳಿದರು.
ಕೇರಳ ಮತ್ತು ಕರ್ನಾಟಕದ ಜನರಿಗೆ ಇಂದು ವಿಶೇಷ ದಿನ. ಈ ಎರಡೂ ರಾಜ್ಯಗಳಿಗೆ ನೈಸರ್ಗಿಕ ಅನಿಲ ಕೊಳವೆಮಾರ್ಗ ಸಂಪರ್ಕ ನೀಡಲಾಗುತ್ತಿದೆ. ಇದರಿಂದ ಎರಡೂ ರಾಜ್ಯಗಳ ಜನರಿಗೆ ಸುಲಭ ಜೀವನಕ್ಕೆ ಅನುಕೂಲವಾಗಲಿದೆ ಎಂದರು.
ಗೇಲ್ ಇಂಡಿಯಾ ಲಿಮಿಟೆಡ್ (ಜಿಎಐಎಲ್) ಲಿಮಿಟೆಡ್ ನಿರ್ಮಿಸಿರುವ ೪೫೦ ಕಿ.ಮೀ ಉದ್ದದ ಈ ನೈಸರ್ಗಿಕ ಅನಿಲ ಕೊಳವೆ ಮಾರ್ಗ ಒಂದು ರಾಷ್ಟ್ರ, ಒಂದು ಅನಿಲ ಗ್ರಿಡ್ ನಿರ್ಮಾಣಕ್ಕೆ ಮಹತ್ವದ ಮೈಲಿಗಲ್ಲು ಎಂದು ಅವರು ಹೇಳಿದರು.
ಕೊಚ್ಚಿಯ ದ್ರವೀಕೃತ ನೈಸರ್ಗಿಕ ಅನಿಲ ಟರ್ಮಿನಲ್‌ನಿಂದ ಮಂಗಳೂರಿಗೆ ನೈಸರ್ಗಿಕ ಅನಿಲವನ್ನು ಸಾಗಿಸುವ ೪೫೦ಕಿ.ಮೀ ಉದ್ದದ ಈ ಯೋಜನೆಗೆ ಸುಮಾರು ೩ ಸಾವಿರ ಕೋ.ರೂ.ವೆಚ್ಚ ಮಾಡಲಾಗಿದೆ. ಪ್ರತಿದಿನ ೧೨ ದಶಲಕ್ಷ ಮೆಟ್ರಿಕ್ ಘನ ಮೀಟರ್‌ನಷ್ಟು ಗುಣಮಟ್ಟದ ಅನಿಲವನ್ನು ಸಾಗಾಣೆಯಾಗಲಿದೆ ಎಂದರು.
ಹಿಂದಿನ ಸರ್ಕಾರಗಳ ಕೆಲಸಗಳು, ಸಾಧನೆಗಳ ಬಗ್ಗೆ ನಾನು ಮಾತನಾಡಲು ಬಯಸಲ್ಲ. ಹಿಂದಿನ ದಶಕಗಳ ಪ್ರಗತಿ ದರಕ್ಕೂ, ಈಗಿನ ಅಭಿವೃದ್ಧಿ ದರಕ್ಕೂ ಹೋಲಿಸಿದರೆ ಸಾಕಷ್ಟು ವ್ಯತ್ಯಾಸಗಳಿವೆ. ದೇಶದಲ್ಲಿ ಅತ್ಯಂತ ವೇಗದ ಗತಿಯಲ್ಲಿ ದೇಶ ಅಭಿವೃದ್ಧಿಯತ್ತ ಸಾಗಿದೆ ಎಂದು ಅವರು ಹೇಳಿದರು.
ಹಿಂದಿನ ಸರ್ಕಾರಗಳಲ್ಲಿ ಅಭಿವೃದ್ಧಿಯು ನಿಧಾನಗತಿಯಲ್ಲಿ ಸಾಗಲು ಕಾರಣವಾದ ಅಂಶಗಳ ಬಗ್ಗೆ ಮಾತನಾಡಲ್ಲ. ಈಗಂತೂ ಪ್ರಗತಿಯ ವೇಗ ಹೆಚ್ಚಿದೆ. ದೇಶದಲ್ಲಿ ಅಭಿವೃದ್ಧಿಯ ಪರ್ವವೇ ಆರಂಭವಾಗಿದೆ ಎಂದರು.
ಯಡಿಯೂರಪ್ಪ ಹೇಳಿಕೆ
ಕೊಚ್ಚಿನ್-ಮಂಗಳೂರು ಅನಿಲ ಕೊಳವೆಮಾರ್ಗ ಕಾರ್ಯಕ್ರಮದಲ್ಲಿ ಬೆಂಗಳೂರಿನಿಂದಲೇ ಆನ್‌ಲೈನ್‌ನಲ್ಲೇ ಪಾಲ್ಗೊಂಡ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಹತ್ವಪೂರ್ಣ ಯೋಜನೆಯಿಂದ ಪರಿಸರ ಸ್ನೇಹಿ ಅನಿಲ ದೊರೆಯಲಿದ್ದು, ಕೈಗಾರಿಕೆಗಳಿಗೆ, ಗೃಹ ಬಳಕೆಗೆ ಹಗ್ಗದದ ದರದಲ್ಲಿ ಇಂಧನ ಸಿಗಲಿದೆ. ಇದರಿಂದ ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿ
ದೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅನೇಕ ಸವಾಲುಗಳ ಮಧ್ಯೆ ಪೈಪ್‌ಲೈನ್ ಕಾಮಗಾರಿ ಉದ್ಘಾಟನೆಯಾಗಿದೆ. ಕೊಯಂಬತ್ತೂರುವರೆಗಿನ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರ ಪೂರ್ಣವಾಗಲಿದೆ ಎಂದರು.